500 ಹುಡುಗಿಯರ ಮಧ್ಯೆ ಒಬ್ಬ ಹುಡುಗ – ಪರೀಕ್ಷೆ ಬರೆಯಲು ಹೋಗಿ ಪ್ರಜ್ಞೆ ತಪ್ಪಿದ ವಿದ್ಯಾರ್ಥಿ…
ಪರೀಕ್ಷೆಗೆ ಹೆದರಿ ಜ್ವರ ಬಂದು ಮಲಗುವವರನ್ನ ನೀವು ನೋಡಿದ್ದೀರ, ಫೇಲ್ ಆಗುವ ಭಯದಿಂದ ಎಕ್ಸಾಮ್ ಗೆ ಆಬ್ಸೆಂಟ್ ಆಗುವವರನ್ನ ನೀವು ನೋಡಿರುತ್ತೀರಾ. ಆದರೇ ಇದು ವಿಚಿತ್ರ ಕೇಸ್… ಪರೀಕ್ಷಾ ಹಾಲ್ ಗೆ ಬಂದ ಹುಡುಗನಿಗೆ 500 ಹುಡುಗಿಯರ ನಡುವೆ ತಾನು ಒಬ್ಬನೆ ಕುಳಿತುಕೊಳ್ಳಬೇಕು ಎಂದು ತಿಳಿದ ತಕ್ಷಣ ಪ್ರಜ್ನೆ ತಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಫೆಬ್ರವರಿ 1 ರಿಂದ ಬಿಹಾರದಲ್ಲಿ ಹೈಯರ್ ಸೆಕೆಂಡರಿ ಸರ್ಟಿಫಿಕೇಶನ್ ಬೋರ್ಡ್ ಪರೀಕ್ಷೆ ಪ್ರಾರಂಭವಾಗಿದ್ದು, ನಳಂದಾದ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಪರೀಕ್ಷಾ ಕೇಂದ್ರದಲ್ಲಿ ನೂರಾರು ಹುಡುಗಿಯರ ನಡುವೆ ಅವನೊಬ್ಬನೆ ಹುಡುಗ. 500 ಹುಡುಗಿಯರ ನಡುವೆ ಕುಳಿತುಕೊಳ್ಳಬೇಕಾಗಿ ಬಂದಿದ್ದರಿಂದ ಪ್ರಜ್ಞೆ ತಪ್ಪಿಬಿದ್ದಿದ್ದಾನೆ ನಂತರ ಆತನನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಈತನ ಹೆಸರು ಮನೀಶ್ ಶಂಕರ್, ಅಲ್ಲಮ ಇಕ್ಬಾಲ್ ಕಾಲೇಜಿನಲ್ಲಿ ಓದುತ್ತಿದ್ದಾನೆ. 12 ನೇ ಬೋರ್ಡ್ ಪರೀಕ್ಷೆಗಾಗಿ ಬಿಹಾರ ಷರೀಫ್ನ ಬ್ರಿಲಿಯಂಟ್ ಕಾನ್ವೆಂಟ್ ಕೇಂದ್ರವನ್ನ ತಲುಪಿದಾಗ ಅಲ್ಲಿ ಹಾಜರಿದ್ದ ಎಲ್ಲಾ ಅಭ್ಯರ್ಥಿಗಳು ಹುಡುಗಿಯರೇ ಎಂದು ಕಂಡು ಬೆಚ್ಚಿಬಿದ್ದಿದ್ದಾನೆ. ಪರೀಕ್ಷಾ ಕೇಂದ್ರದಲ್ಲಿ 500ಕ್ಕೂ ಹೆಚ್ಚು ಬಾಲಕಿಯರಿದ್ದು, ಬಾಲಕಿಯರ ಪೈಕಿ ಈ ಬಾಲಕ ಮಾತ್ರ ಪುರುಷ ಅಭ್ಯರ್ಥಿಯಾಗಿದ್ದ.
ನಂತರ ಮನೀಶ್ ತುಂಬಾ ನರ್ವಸ್ ಆಗಿ ಮೂರ್ಚೆ ತಪ್ಪಿ ಬಿದ್ದಿದ್ದಾನೆ. ಬಳಿಕ ಅವನನ್ನ ಬಿಹಾರ ಷರೀಫ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Viral News : One boy among 500 girls – a student who fainted while going to write the exam…