OMG..! ಇವರೆಂಥಾ ಶ್ವಾನ ಪ್ರೇಮಿ : ನಾಯಿ ಹೆಸರಿಗೆ 36 ಕೋಟಿ ರೂ. ಬರೆದಿಟ್ಟ ಮಾಲೀಕ..!
OMG..! ಇವರೆಂಥಾ ಶ್ವಾನ ಪ್ರೇಮಿ : ನಾಯಿ ಹೆಸರಿಗೆ 36 ಕೋಟಿ ರೂ. ಬರೆದಿಟ್ಟ ಮಾಲೀಕ..!
ನಾಯಿ ಹಾಗೂ ಮನುಷ್ಯರ ನಡುವಿನ ಪ್ರೀತಿ ಯಾರಿಂದಲೂ ವರ್ಣಿಸೋಕೆ ಸಾಧ್ಯವಾಗೋದಿಲ್ಲ. ಸಾಕಿದ ನಾಯಿಗಾಗಿ ಮಾಲೀಕರೂ ಏನ್ ಬೇಕಾದ್ರೂ ಮಾಡೋ ಅಂತಹ ಅನೇಕ ನಿದರ್ಶನಗಳು ನಮ್ಮ ಕಣ್ಮುಂದಿವೆ. ಆದ್ರೆ ಈ ವ್ಯಕ್ತಿಯ ನಾಯಿ ಪ್ರೇಮ ನಿಜಕ್ಕೂ ಅವೆಲ್ಲಕ್ಕೂ ಮೀರಿದ್ದೂ. ಅದ್ರಲ್ಲಿ ನೋ ಡೌಟ್.
ಹೌದು ಇಲ್ಲೊಬ್ಬ ಉದ್ಯಮಿ ತನ್ನ ಆಸ್ತಿಯಲ್ಲಿ 5 ಮಿಲಿಯನ್ ಡಾಲರ್ ಹಣವನ್ನ ಸಾಕು ನಾಯಿಯ ಆರೈಕೆಗಾಗಿಯೇ ಮೀಸಲಿಟ್ಟು ನಾಯಿ ಪ್ರಿಯರ ಹೃದಯ ಕದ್ದಿದ್ದಾನೆ.
ನಾಯಿಗಳನ್ನು ಕಂಡರೆ ಕಲ್ಲು ಹೊಡೆಯುವ ಅದೆಷ್ಟೋ ಜನರ ಮಧ್ಯೆ ನಾಯಿಯನ್ನು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುವವರೂ ಇದ್ದಾರೆ ಎಂಬುದನ್ನ ಈ ವ್ಯಕ್ತಿ ತೋರಿಸಿಕೊಟ್ಟಿದ್ದಾರೆ.
Whaaaat…! ಇಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರಾ..! : ಚೀನಾದ INTRESTING FACTS..!
ಅಮೆರಿಕದ ಆಗರ್ಭ ಶ್ರೀಮಂತ ಬಿಲ್ ಡೋರಿಸ್ ಎಂಬಾತ 8 ವರ್ಷಗಳಿಂದ ಲೂಲು ಹೆಸರಿನ ನಾಯಿಯನ್ನು ಸಾಕಿದ್ದ. ತಾನು ಸತ್ತ ನಂತರ ತನ್ನ 5 ಮಿಲಿಯನ್ ಡಾಲರ್ ಅಂದ್ರೆ ಸುಮಾರು 36 ಕೋಟಿ ರೂಪಾಯಿ ಆಸ್ತಿಯನ್ನು ಒಂದು ಟ್ರಸ್ಟ್ ಹೆಸರಿಗೆ ಬರೆದಿದ್ದಾನೆ. ನನ್ನ ಲೂಲುವನ್ನು ನೋಡಿಕೊಳ್ಳುವ ಟ್ರಸ್ಟ್ಗೆ ಈ ಆಸ್ತಿ ಸೇರುತ್ತದೆ ಎಂದು ಬರೆದಿಟ್ಟು ಪ್ರಾಣ ಬಿಟ್ಟಿದ್ದಾನೆ.
ಬಾರ್ಡರ್ ಕೊಲ್ಲಿ ಜಾತಿಗೆ ಸೇರಿದ 8 ವರ್ಷದ ಲುಲು ಎಂಬ ಶ್ವಾನದ ಮಾಲೀಕ ಬಿಲ್ ಡೋರೀಸ್ ಕಳೆದ ವರ್ಷ ನಿಧನರಾಗಿದ್ದಾರೆ. ಅವಿವಾಹಿತನಾಗಿದ್ದ ಈ ಉದ್ಯಮಿ ತನ್ನ ಆಸ್ತಿಯನ್ನ ಶ್ವಾನದ ಆರೈಕೆಗೆ ಮೀಸಲಿಟ್ಟಿದ್ದಾನೆ ಎನ್ನಲಾಗಿದೆ. ಸದ್ಯ ಈ ಶ್ವಾನವನ್ನ ಮಾರ್ಥಾ ಬರ್ಟೋನ್ ಎಂಬವರು ನೋಡಿಕೊಳ್ತಿದ್ದಾರೆ. ಡೋರೀಸ್ ತನ್ನ ಆಸ್ತಿ ಪತ್ರದಲ್ಲಿ ತನ್ನ ಹಣವನ್ನ ಟ್ರಸ್ಟ್ ಒಂದರಲ್ಲಿ ಇಡಬೇಕು ಹಾಗೂ ಈ ಹಣವನ್ನ ಲುಲು ಆರೈಕೆಗೆ ಬಳಕೆ ಮಾಡಬೇಕು ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಆತ ಈ ಹೆಣ್ಣು ಶ್ವಾನವನ್ನ ಬಹಳ ಪ್ರೀತಿಸುತ್ತಿದ್ದ ಎಂದು ಶ್ವಾನದ ಆರೈಕೆ ಮಾಡುತ್ತಿರುವ ಮಾರ್ಥಾ ಬರ್ಟೋನ್ ಹೇಳಿದ್ದಾರೆ. ಬರ್ಟನ್ ಲೂಲುವನ್ನು ತುಂಬಾ ಪ್ರೀತಿಯಿಂದ ಸಾಕುತ್ತಿದ್ದಾರೆ.
ರಸ್ತೆ ದಾಟಿದ ನಾಗರಾಜನಿಗೆ ನೆರವಾದ ಪೊಲೀಸರು, ವಾಹನ ಸವಾರರು!
ಉಡುಪಿ: ಉಡುಪಿ ನಗರದ ಕಲ್ಸಂಕ ಜಂಕ್ಷನ್ ನಲ್ಲಿ ರಸ್ತೆ ನಡುವೆ ಹಾವು ನಿಧಾನಕ್ಕೆ ಚಲಿಸುತ್ತಿದ್ದ ದರಶ್ಯ ಕಂಡುಬಂದಿದೆ. ಹಾವು ಚಲಿಸುತ್ತಿದ್ದ ಹಿನ್ನೆಲೆ ಏಕಾಏಕಿ ಟ್ರಾಫಿಕ್ ಜಾಮ್ ಆಗಿ ಸವಾರರು ಪರದಾಡುವಂತಾಗಿತ್ತು. ಅಂಬಾಗಿಲು ರಸ್ತೆ ಕಡೆಯಿಂದ ಕೃಷ್ಣಮಠದ ಪಾರ್ಕಿಂಗ್ ಏರಿಯಾಗೆ ಹೋಗುವ ಕಡೆ ನಾಗರಹಾವು ನಿಧಾನಕ್ಕೆ ಚಲಿಸುತ್ತಿತ್ತು. ಸಿಮೆಂಟ್ ರಸ್ತೆಯಾದ್ದರಿಂದ ವೇಗವಾಗಿ ರಸ್ತೆದಾಟಲು ನಾಗರಹಾವಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸ್ಥಳೀಯರು, ವಾಹನ ಸವಾರರು , ಪೊಲೀಸರು ರಸ್ತೆದಾಟಲು ಅವಕಾಶ ಮಾಡಿಕೊಟ್ಟಿದ್ದರು. ಯಾವುದೇ ವಾಹನಗಳು ಅಡ್ಡ ಚಲಿಸದಂತೆ ನಾಗರಹಾವಿಗೆ ತಬ್ಬಿಬ್ಬಾಗದಂತೆ ನೋಡಿಕೊಂಡು ನಾಗರಹಾವು ರಸ್ತೆ ದಾಟಲು ನೆರವಾಗಿದ್ದಾರೆ.
VIDEO : ಮುದ್ದು ಮಕ್ಕಳ ಸ್ನೇಹಕ್ಕೆ ನೆಟ್ಟಿಗರು ಫಿದಾ..!
ಮಕ್ಕಳ ಮನಸ್ಸು ನಿಷ್ಕಲ್ಮಶ. ಹಾಗೇ ಮಕ್ಕಳ ನಡುವಿನ ಸಂಬಂಧವೂ ಅಷ್ಟೇ ನಿಸ್ವಾರ್ಥವಾಗಿಯೇ ಇರುತ್ತೆ. ಇದಕ್ಕೆ ಪೂರಕ ಈ ವಿಡಿಯೋ ಇಲ್ಲೊಬ್ಬ ಪುಟ್ಟ ಬಾಲಕ ತನ್ನ ಸ್ನೇಹಿತನನ್ನ ತಬ್ಬಿಕೊಂಡು ಸಮಾಧಾನ ಮಾಡುತ್ತಿರುವ ದೃಶ್ಯದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ನೆಟ್ಟಿಗರ ಹೃದಯ ಕದ್ದಿದೆ. ಬಾಲಕರ ಸ್ನೇಹ ಕಂಡು ನೆಟಿಜನ್ಸ್ ಫಿದಾ ಆಗಿದ್ದಾರೆ.
ಈ ವಿಡಿಯೋದಲ್ಲಿ ಇಬ್ಬರು ಬಾಲಕರು ಮುಖಾಮುಖಿಯಾಗಿ ನಿಂತುಕೊಂಡಿದ್ದು, ಅದರಲ್ಲಿ ಒಬ್ಬ ಮತ್ತೊಬ್ಬನ ಬಳಿ ನೀನು ಈಗ ಚನಾಗಿದ್ದೀಯಾ ಅಲ್ವಾ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಬೇಸರದಲ್ಲಿದ್ದ ಆ ಬಾಲಕ ಹು..ಎಂದು ಹೇಳುತ್ತಾನೆ. ಆದರೂ ಆತನ ಧ್ವನಿಯಲ್ಲಿ ಬೇಸರ ಇರೋದು ಕಾಣುತ್ತದೆ. ಆ ಬಳಿಕ ಮತ್ತೊಬ್ಬ ಬಾಲಕ ನಿನಗೆ ಹಗ್ ಬೇಕಾ ಅಂತ ಕೇಳಿ ಆತನನ್ನ ತಬ್ಬಿಕೊಳ್ತಾನೆ.
ಈ ವಿಡಿಯೋವನ್ನ ಟಿಕ್ ಟಾಕ್ ನಲ್ಲಿ ಶೇರ್ ಮಾಡಲಾಗಿದ್ದು, ಅದಕ್ಕೆ ‘ಒಮ್ಮೊಮ್ಮೆ ಅಪ್ಪುಗೆ’ ಬೇಕು ಎನಿಸುತ್ತೆ ಎಂದು ಶೀರ್ಷಿಕೆ ನೀಡಲಾಗಿದೆ. ಸದ್ಯ ಈ ವಿಡಿಯೋ ನೆಟಿಜನ್ಸ್ ಮನಗೆದ್ದಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
"Ya okay?"
– "yea😔"
"You need a hug?"
🥺🥺🥺 pic.twitter.com/Haqw5Lm9ia
— Koko ✊🏼✊🏽✊🏿 (@Kokomothegreat) February 1, 2021
ಪಕ್ಷಿಗೆ ಗುಂಡಿಟ್ಟ ಸೆಕೆಂಡ್‌ಗಳಲ್ಲೇ ಅದರ ‘ಕರ್ಮ’ ಅನುಭವಿಸಿದ..!
ನೀವೇನ್ ಮಾಡ್ತಿರೋ ಅದು ನಿಮಗೆ ವಾಪಸ್ ಅದೇ ರೂಪದಲ್ಲಿ ಸಿಗುತ್ತೆ. ಕೆಟ್ಟದಾದ್ರು ಆಗಿರಬಹುದು ಒಳ್ಳೆದಾದ್ರು ಆಗಿರಬಹುದು. ಅಂದ್ರೆ ನೀವು ಒಳ್ಳೆಯದನ್ನ ಮಾಡಿದ್ರೆ ಒಳ್ಳೆಯದ್ದೇ ಆಗುತ್ತೆ. ಒಳ್ಲೆಯ ಫಲವೇ ಸಿಗುತ್ತೆ. ಕೆಟ್ಟದ್ದು ಮಾಡಿದ್ರೆ ಕೆಟ್ಟದ್ದೇ ಆಗುತ್ತೆ. ಹೀಗೆಲ್ಲಾ ಕರ್ಮದ ಲೆಕ್ಕಾಚಾರಗಳನ್ನ ಹಾಕೋದು ಗೊತ್ತೇ ಇದೆ. ಆದ್ರೆ ಅದಕ್ಕೂ ಸಮಯ ಬೇಕು. ಆದ್ರೆ ಇಲ್ಲೊಬ್ಬ ತಾನು ಮಾಡಿದ ಪಾಪಕ್ಕೆ ತಕ್ಷಣವೇ ಬೆಲೆ ತೆತ್ತಿದ್ದಾನೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಅವರು ವಿಡಿಯೋ ಒಂದನ್ನ ಶೇರ್ ಮಾಡಿದ್ದು, ಅದಕ್ಕೆ ‘ಕರ್ಮ’ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ನೆಟ್ಟಿಗರಿಂದ ಕಮೆಂಟ್ ಗಳ ಸುರಿಮಳೆಯಾಗ್ತಿದೆ.
ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ..
ಆರು ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬ ಪಕ್ಷಿಯೊಂದನ್ನು ಶೂಟ್ ಮಾಡುತ್ತಿರುವುನ್ನು ನೋಡಬಹುದಾಗಿದೆ.ಗ್ರಾಮೀಣ ಪ್ರದೇಶವೊಂದರಲ್ಲಿ ರೆಕರ‍್ಡ್ ಮಾಡಲಾದ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗನ್ ಹಿಡಿದು ಪಕ್ಷಿಗಳನ್ನು ಶೂಟ್ ಮಾಡುತ್ತಿದ್ದು, ಟ್ರಿಗ್ಗರ್‌ಎಳೆದು ಗುಂಡು ಹಾರಿಸುತ್ತಲೇ ಅದು ಹೋಗಿ ಪಕ್ಷಿಯ ರೆಕ್ಕೆಗೆ ಬಡಿದಿದೆ. ಗುಂಡೇಟು ತಿಂದ ಪಕ್ಷಿ ನೇರವಾಗಿ ಈ ಮನುಷ್ಯನ ಕಣ್ಣಿನ ಮೇಲೇ ಬಂದು ಬಿದ್ದ ಪರಿಣಾಮ ಆತನ ಕಣ್ಣುಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಈ ವಿಡಿಯೋಗೆ ನೆಟ್ಟಿಗರು ಕಮೆಂಟ್ ಗಳನ್ನ ಮಾಡುತ್ತಾ ಹೌದು ಕರ್ಮ ಯಾರನ್ನೂ ಬಿಡೋದಿಲ್ಲ. ಮಾಡಿದ ಪಾಪಕ್ಕೆ ಶಿಕ್ಷೆಯಾಗ್ಲೇಬೇಕು. ಸರಿಯಾಗಿಯೇ ಆಗಿದೆ ಎಂದು ಅಭಿಪ್ರಾಯಗಳನ್ನ ಹಂಚಿಕೊಳ್ತಾಯಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel