ಸಹೋದ್ಯೋಗಿಗಳ ಸ್ನಾನದ ಧೃಶ್ಯ ಸೆರೆ.. ಪ್ರಿಯಕರನಿಗೆ ರವಾನೆ… ಕಾರಣವೇ ವಿಚಿತ್ರ…!
ಬೆಂಗಳೂರು: ನರ್ಸ್ ಒಬ್ಬಳು ತನ್ನ ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ನಿಗೂಢವಾಗಿ ಚಿತ್ರೀಕರಿಸಿ ಅದನ್ನ ತನ್ನ ಪ್ರಿಯಕರನಿಗೆ ರವಾನಿಸುತ್ತಿದ್ದಳು. ಅಶ್ವಿನಿ ಎಂಬಾಕೆ ಇಂತಹ ನೀಚ ಕೆಲಸ ಮಾಡುತ್ತಿದ್ದಳು.
ಆದ್ರೆ ಈಕೆ ಈ ರೀತಿ ಮಾಡುತ್ತಿದ್ದ ಕಾರಣವೇ ಶಾಕಿಂಗ್ :
ಹೌದು.. ಸಾಮಾನ್ಯವಾಗಿ, ದುಡ್ಡಿಗಾಗಿ ಈ ರೀತಿಯಾದ ವಿಡಿಯೋ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡೋದು, ಹೆಚ್ಚಂದ್ರೆ ಕೆಲ ಕಾಮುಕರು ಇಂತವುಗಳನ್ನ ಮಾಡೋದು , ಇಲ್ಲ ಸೇಡಿಗಾಗಿ ಈ ರೀತಿ ಮಾಡಿರೋ ಪ್ರಕರಣಗಳ ಬಗ್ಗೆ ನೋಡೀರುತ್ತೇವೆ. ಆದ್ರೆ ಈ ಲೇಡಿ ಯಾಕೆ ಹೀಗೆ ಮಾಡಿದ್ಲು ಅನ್ನೋ ಕಾರಣ ನಿಜಕ್ಕೂ ವಿಚಿತ್ರ..
ಮಿಸ್ ಆಗಿ ಮತ್ತೊಬ್ಬರ ಖಾತೆಗೆ 18.60 ಲಕ್ಷ ರೂ : ದುಡ್ಡು ವಾಪಸ್ ಕೇಳಿದ ಮಹಿಳೆಗೆ ಕಾದಿತ್ತು ಶಾಕ್..!
ಈಗಾಗಲೇ ಇಬ್ಬರು ಗಂಡಂದಿರಿಂದ ಡೈವೋರ್ಸ್ ಪಡೆದಿರುವ ಅಶ್ವಿನಿ ಎಂಬ ನರ್ಸ್ ಗೆ 3ನೇ ಬಾಯ್ ಫ್ರೆಂಡ್ ಜೊತೆಗೆ ಲವ್ ಆಗಿತ್ತು.2017ರಲ್ಲಿ ಅಶ್ವಿನಿಗೆ ಪ್ರಭು ಎಂಬಾತನ ಪರಿಚಯವಾಗಿತ್ತು. ಪ್ರಭು ಚೆನ್ನೈನ ಪ್ರತಿಷ್ಠಿತ ಹೋಟೆಲ್ ನಲ್ಲಿ ಬಾಣಸಿಗನಾಗಿ ಕೆಲಸ ಮಾಡ್ತಿದ್ದ. ಆಕಸ್ಮಿಕವಾಗಿ ರಾಂಗ್ ನಂಬರ್ ನಿಂದಾಗಿ ಬೆಳೆದ ಸ್ನೇಹ ಕೊನೆಗೆ ಪ್ರೇಮಕ್ಕೆ ತಿರುಗಿತ್ತು. ಬಳಿಕ ಭೇಟಿ ಮಾಡಿ ಓಡಾಟ ನಡೆಸಿ ಇಬ್ಬರೂ ಒಟ್ಟಾಗಿ ಮದುವೆಯಾಗಲೂ ತೀರ್ಮಾನಿಸಿದ್ದರು. ಆದ್ರೆ ಅಷ್ಟರಲ್ಲೇ ಪ್ರಭುಗೆ ಅಶ್ವಿನಿಯ ಬದುಕಿನ ಹಿನ್ನೆಲೆ ತಿಳಿದಿದೆ. ಕೂಡಲೇ ಆತ ಆಕೆಯಿಂದ ದೂರಾಗಲೂ ಬಯಸಿದ್ದನಂತೆ. ಆದರೆ ಆತನನ್ನೂ ಕಳೆದುಕೊಳ್ಳಲು ಇಷ್ಟವಿಲ್ಲದಿದ್ದ ಅಶ್ವಿನಿ ಆತನನ್ನ ಹಿಡಿತದಲ್ಲಿಟ್ಟುಕೊಳ್ಳಲು ಮೊದ ಮೊದಲಿಗೆ ತಾನು ಸ್ನಾನ ಮಾಡುತ್ತಿದ್ದ ನಗ್ನ ವಿಡಿಯೋಗಳನ್ನ ಆತನಿಗೆ ಕಳುಹಿಸುತ್ತಿದ್ದಳು. ಆದ್ರೆ ಇಷ್ಟಕ್ಕೆ ತೃಪ್ತಿಯಾಗದ ಪ್ರಭು ಇತರರ ವಿಡಿಯೋಗಳನ್ನೂ ಕೇಳಿದ್ದಾನೆ. ಹೇಗಾದ್ರೂ ಮಾಡಿ ಆತನನ್ನ ತನ್ನ ಜೀವನದಲ್ಲಿ ಉಳಿಸಿಯೇ ಕೊಳ್ಳಬೇಕು ಅನ್ನೋ ಹಂಬಲದಿಂದ ಅಶ್ವಿನಿ ಇತರೇ ಸಹೋದ್ಯೋಗಿಗಳ ಸ್ನಾನದ ನಗ್ನ ವಿಡಿಯೋಗಳನ್ನ ಗುಟ್ಟಾಗಿ ಸೆರೆ ಹಿಡಿದು ಪ್ರತಿ ದಿನ ಆತನಿಗೆ ಕಳುಹಿಸುತ್ತಿದ್ದಳಂತೆ. 
ಹೆಂಡತಿ ಹುಡುಗಾಟಕ್ಕೆ ಬಲಿಯಾದ ಪತಿ: ಅಸಲಿಗೆ ಆಗಿದ್ದೇನು..!
ತನ್ನ ಸ್ನಾನದ ಬಳಿಕ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡರ್ ಆನ್ ಮಾಡಿ ಬರುತ್ತಿದ್ದ ಅಶ್ವಿನಿ ಬಳಿಕ ಹೋಗಿ ಮೊಬೈಲ್ ಹಿಂತೆಗೆದುಕೊಂಡು ಬರುತ್ತಿದ್ದಳಂತೆ. ಆದ್ರೆ 10 ಬಾರಿ ತಪ್ಪು ಮಾಡಿರೋರು ಒಂದಲ್ಲಾ ಒಂದು ದಿನ ಸಿಕ್ಕಿ ಬಿದ್ದೇ ಬೀಲ್ತಾರೆ. ಅಶ್ವಿನಿಯ ಕಳ್ಳಾಟ ಓರ್ವ ಸಹೋದ್ಯೋಗಿ ಗಮನಕ್ಕೆ ಬಂದಿದೆ. ಆಕೆ ಸ್ನಾನಕ್ಕೆ ಹೋಗಿದ್ದ ವೇಳೆ ಮೋಬೈಲ್ ಫೋನ್ ಗಮನಿಸಿ ಮೊಬೈಲ್ ನೋಡಿದಾಗ ಅಶ್ವಿನಿ ಅಸಲಿಯಾಟ ಬಟಾಬಯಲಾಗಿದೆ. ಬಳಿಕ ಆಕೆಯ ಮೊಬೈಲ್ ಫೋನ್ ಅನ್ನ ತೆಗೆದುಕೊಂಡು ಸೀದಾ ಪೊಲೀಸ್ ಠಾಣೆಗೆ ತೆರಳಿರುವ ಸಂತ್ರಸ್ತರು ಅಶ್ವಿನಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಅಶ್ವಿನಿಯನ್ನ ವಿಚಾರಣೆಗೊಳಪಡಿಸಿರುವ ಪೊಲೀಸರು ಡಿಲೀಟ್ ಆಗಿರುವ ವಿಡಿಯೋಗಳ ಬಾಕ್ ಅಪ್ ಗಾಗಿ ಫಾರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದ್ದಾರೆ. ಇತ್ತ ಮತ್ತೊಬ್ಬ ಆರೋಪಿ ಪ್ರಭುನನ್ನು ಸಹ ಪೊಲೀಸರು ತಮಿಳುನಾಡಿನಿಂದ ಎಳೆದುಕೊಂಡು ಬಂದು ಜೈಲಿಗಟ್ಟಿದ್ದಾರೆ.
ಲವರ್ ನ ಬಿಡಲ್ಲ ಅಂದ ಮಗನ ಮೇಲಿನ ಸಿಟ್ಟಿಗೆ ಹೀಗಾ ಮಾಡೋದು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








