ಗರಿಗರಿಯಾದ ಈರುಳ್ಳಿ ಭಜ್ಜಿ, ಮೆತ್ತಗಿನ ಬಾಳೆಕಾಯಿ, ಆಲೂ, ಹೀರೇಕಾಯಿ ಭಜ್ಜಿ. ಇನ್ನು ಮೆಣಸಿನಕಾಯಿ ಭಜ್ಜಿ ಇರುವುದು ಎಲ್ಲರಿಗೂ ಗೊತ್ತು. ಪ್ರತಿಯೊಬ್ಬರೂ ಈ ಭಜ್ಜಿಗಳನ್ನು ಕೂಡ ತಿಂದಿರುತ್ತಾರೆ. ಇದರ ಮಧ್ಯೆ ಓರಿಯೋ ಬಿಸ್ಕಿಟ್ ಹಾಕಿ ಕರಿದ ಭಜ್ಜಿಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಬ್ಲಾಗರ್ ಆಶಿಶ್ ಅಗರವಾಲ್ ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಏಪ್ರಿಲ್ 24ರಂದು ಹಂಚಿಕೊಂಡ ಈ ವಿಡಿಯೋ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ, ಈ ಭೂಮಿಯನ್ನೇ ಬಿಟ್ಟು ಹೋಗಬೇಕು ಎನ್ನಿಸುತ್ತಿದೆ ಎಂದು ಹೇಳಿದ್ದಾರೆ.
ಓರಿಯೋ ಪ್ರಿಯರಿಗೆ ಮತ್ತು ಭಜ್ಜಿ ಪ್ರಿಯರಿಗೆ ಏಕಕಾಲಕ್ಕೆ ಇದು ದಂಗುಬಡಿಸಿರಲು ಸಾಕು ಎಂದು ಒಬ್ಬರು ಹೇಳಿದ್ದಾರೆ. ರೀಲ್ಸ್ಗಾಗಿ ಹೀಗೆಲ್ಲ ಮಾಡಬೇಡಿರೋ ಎಂದು ಅನೇಕರು ಹೇಳಿದ್ದಾರೆ. ಹಲವರು ವಿಡಿಯೋ ಬಗ್ಗೆ ಬೈದಿದ್ದಾರೆ.








