ಮದುವೆಯಾಗಲು ಬಂದ ವರ ಹಾಗೂ ಸಂಬಂಧಿಕರೂ ರಾತ್ರಿಯಲ್ಲಾ ರಸ್ತೆಯಲ್ಲೇ ಮೆರವಣಿಗೆ ಮಾಡಿದ್ರು…!
ಉತ್ತರಪ್ರದೇಶ: ಇತ್ತ ಮಧುಮಗನ ಕುಟುಂಬವನ್ನ ಆಹ್ವಾನ ಮಾಡಿಕೊಳ್ಳಲು ವಧುವಿನ ಕುಟುಂಬಸ್ಥರು ಆರತಿ ತಟ್ಟೆ ಹೂವಿನ , ಸಿಹಿ ತಿನಿಸನ್ನೆಲ್ಲಾ ಹಿಡಿದು ಮನೆಯ ಆವರಣದಲ್ಲಿ ಕಾಯುತ್ತಿದ್ರೂ. ಆದ್ರೆ ಅತ್ತ ವರ ಹಾಗೂ ಕುಟುಂಬ ರಾತ್ರಿಯಿಡೀ ಮಧುಮಗಳ ಮನೆ ಸಿಗದೆ ಹುಡುಕಿ ಹುಡುಕಿ ರಾತ್ರಿಯಿಡೀ ಬೀದಿಯಲ್ಲೇ ಮೆರವಣಿಗೆ ಮಾಡಿದ್ದಾರೆ. ಇಂಥಹದ್ದೊಂದು ಘಟನೆ ಉತ್ತರಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ನಡೆದಿದೆ. ಕಾನ್ಷಿರಾಮ್ ಕಾಲೋನಿ ನಿವಾಸಿಯಾಗಿರುವ ಯುವಕನ ಮದುವೆ ರಾಣಿಪುರದ ಯುವತಿಯೊಂದಿಗೆ ನಿಗದಿಯಾಗಿತ್ತು. ವರ ಮತ್ತು ಆತನ ಸಂಬಂಧಿಕರು ಸಂಜೆ ರಾಣಿಪುರಕ್ಕೆ ಬಂದಿದ್ದರು. ಆದರೆ, ಯುವತಿ ಮನೆಯ ವಿಳಾಸ ಸಿಗದೇ ರಾತ್ರಿಯೆಲ್ಲ ತಿರುಗಾಡಿ ಸುಸ್ತಾಗಿದ್ದಾರೆ. ಬಳಿಕ ಮುಂಜಾನೆ ಮದುವೆ ಕುದುರಿಸಿದ್ದ ದಲ್ಲಾಳಿಯನ್ನ ಹಿಡಿದು ಒತ್ತೆಯಾಳಾಗಿಸಿದ್ದಾರೆ. ಬಳಿಕ ಪೊಲೀಸರು ಮಧ್ಯಪ್ರವೇಶ ಮಾಡಿ ವಿಚಾರ ತಿಳಿದು ವರನ ಕುಟುಂಬವನ್ನ ಸಮಾಧಾನಗೊಳಿಸಿದ್ದಾರೆ.
ಚೆಟ್ಟಿನಾಡ್ ಸಮೂಹದಿಂದ 700 ಕೋಟಿ ರೂ. ತೆರಿಗೆ ವಂಚನೆ
ಅಂದ್ಹಾಗೆ ವರನಿಗೆ ಇದು ಎರಡನೇ ಮದು ವೆ. ಈ ಮೊದಲೇ ಬಿಹಾರ ಮೂಲದ ಯುವತಿ ಜೊತೆ ಮದುವೆಯಾಗಿ ಆಕೆಯಿಂದ ದೂರಾಗಿದ್ದಾನೆ. ಇದೀಗ ಎರಡನೇ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ. ದಲ್ಲಾಳಿ ಮಹಿಳೆಯ ಮೂಲಕ ಮದುವೆ ನಿಗದಿಯಾಗಿತ್ತು. ವರನ ಕಡೆಯವರು ಮತ್ತು ವರ ಕೂಡ ಹುಡುಗಿಯನ್ನು ನೋಡಲು ಹೋಗಿರಲಿಲ್ಲ. ಮದುವೆ ಖರ್ಚಿಗಾಗಿ ಹಣ ನೀಡಲಾಗಿತ್ತು. ಮದುವೆ ಹಿಂದಿನ ದಿನ ಹುಡುಗಿ ಮನೆಗೆ ಬಂದರೆ ಮದುವೆ ಮನೆಯೇ ಸಿಕ್ಕಿಲ್ಲ. ರಾತ್ರಿಯಿಡೀ ಸುತ್ತಾಡಿ ಮಾರನೇ ದಿನ ಮದುವೆ ಕುದುರಿಸಿದ ದಲ್ಲಾಳಿಯನ್ನ ಹಿಡಿದು ವಿಚಾರಿಸಿದ್ದಾರೆ.
ಸಹೋದ್ಯೋಗಿಗಳ ಸ್ನಾನದ ಧೃಶ್ಯ ಸೆರೆ.. ಪ್ರಿಯಕರನಿಗೆ ರವಾನೆ… ಕಾರಣವೇ ವಿಚಿತ್ರ…!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








