ಬಿಲ್ ಆಗಿದ್ದು, 15 ಸಾವಿರ ರೂ. : ವೇಟರ್ ಗೆ ಸಿಕ್ಕ ಟಿಪ್ಸ್ 36 ಲಕ್ಷ ರೂ.!
ದುಬಾರಿ ಹೊಟೆಲ್ ಗಳಲ್ಲಿ ವೇಟರ್ ಗಳಿಗೆ ಸಂಬಳಕ್ಕಿಂತಲೂ ಟಿಪ್ಸ್ ಬರೋದೆ ಹೆಚ್ಚಾಗಿರುತ್ತೆ. ಆದ್ರೆ ಅದಕ್ಕೂ ಲಿಮಿಟೇಶನ್ಸ್ ಅನ್ನೋದು ಇರುತ್ತೆ. ಯಾಕಂದ್ರೆ ಇಲ್ಲೊಬ್ಬ ವೇಟರ್ ಒಂದೇ ದಿನದಲ್ಲಿ ಕೇವಲ ಟಿಪ್ಸ್ ದುಡ್ಡಿನಿಂದಲೇ ಲಕ್ಷಾಧಿಪತಿಯಾಗಿದ್ದಾರೆ.
ಹೌದು ಅಮೆರಿಕದ ‘ಆಂಥೋನಿ ಅಟ್ ಪ್ಯಾಕ್ಸನ್’ ರೆಸ್ಟೋರೆಂಟ್ ನ ವೇಟರ್ ಗೆ ಅದೃಷ್ಟ ಖುಲಾಯಿಸಿದೆ. ಗ್ರಾಹಕನೋರ್ವ ಈ ರೆಸ್ಟೋರೆಂಟ್ ಗೆ ಬಂದು ಊಟ ಮಾಡಿದ್ದಾನೆ.
ಏರ್ ಇಂಡಿಯಾ ಟಿಕೆಟ್ ಮೇಲೆ ಶೇ 50 ರಷ್ಟು ರಿಯಾಯ್ತಿ : ಷರತ್ತು ಅನ್ವಯ
ಊಟಕ್ಕೆ 205 ಡಾಲರ್ (15 ಸಾವಿರ ರೂಪಾಯಿ) ಬಿಲ್ ಆಗಿದೆ. ಈತನಿಗೆ ಗಿಯನ್ನಾ ಡಿ ಏಂಜೆಲೊ ಎಂಬ ವೇಟರ್ ಆಹಾರವನ್ನ ಆತನಿಗೆ ತಂದುಕೊಟ್ಟಿದ್ದಾರೆ. ಆದರೆ ಆತ ಬಿಲ್ ಅಮೌಂಟ್ ನ ಜತೆಗೆ ಕೊಟ್ಟ ಟಿಪ್ಸ್ ನೋಡಿ ವೇಟರ್ ಖುಷಿಯಿಂದ ಹೌಹಾರಿದ್ದಾರೆ. ಬರೋಬ್ಬರಿ 5000 ಡಾಲರ್ (36 ಲಕ್ಷ ರೂಪಾಯಿ) ಟಿಪ್ಸ್ ಕೊಟ್ಟಿದ್ದಾನೆ. ನಂತರ ಅದನ್ನು ಸ್ವೀಕರಿಸಿದ್ದಾರೆ. ಇನ್ನೂ ವಿಶೇಷ ಅಂದ್ರೆ ಈ ಗ್ರಾಹಕಕನ ಬಗ್ಗೆ ‘ಆಂಥೋನಿ ಅಟ್ ಪ್ಯಾಕ್ಸನ್’ ರೆಸ್ಟೋರೆಂಟ್ ಫೇಸ್ಬುಕ್ ಪೇಜ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಈ ಸುದ್ದಿ ಇದೀಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲ್ಲರೂ ವೇಟರ್ ನ ಅದೃಷ್ಟದ ಬಗ್ಗೆಯೇ ಮಾತನಾಡುವಂತಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel