ಮುಂಬೈ : ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಹಳೆಯ ಡ್ಯಾನ್ಸ್ ವಿಡಿಯೋ ಒಂದು ಇನ್ ಸ್ಟಾಗ್ರಾಂನಲ್ಲಿ ಭಾರಿ ವೈರಲ್ ಆಗುತ್ತಿದೆ. 1997ರಲ್ಲಿ ಐಶ್ವರ್ಯಾ ರೈ ನಟನೆಯ ಸಿನಿಮಾದ ವಿಡಿಯೋ ಇದಾಗಿದ್ದು, ಈ ಚಿತ್ರ ಬಿಡುಗಡೆಯಾಗಿರಲಿಲ್ಲ. ಇದೀಗ ಅದರಲ್ಲಿ ಐಶ್ವರ್ಯಾ ಡ್ಯಾನ್ಸ್ ಮಾಡುವ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಐಶ್ವರ್ಯಾ ನೃತ್ಯಕ್ಕೆ ಫಿದಾ ಆಗಿದ್ದಾರೆ.
https://www.instagram.com/p/B-jxfMnB-Sd/?utm_source=ig_web_copy_link
ಈ ವಿಡಿಯೋ ಅನೀಸ್ ಬಾಸ್ಮಿ ನಿರ್ದೇಶನದ ‘ರಾಧೇಶ್ಯಾಮ್ ಸೀತಾರಾಮ್’ ಸಿನಿಮಾದಾಗಿದ್ದು 1997ರಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿತ್ತು. ಆದರೆ ಕಾರಣಾಂತರದಿAದ ಈ ಸಿನಿಮಾ ಬಿಡುಗಡೆಯಾಗಿಲ್ಲ.








