ಕರ್ಮ : ನಾಯಿಗೆ ಕಿರುಕುಳ ನೀಡ್ತಿದ್ದವನ ಮೇಲೆ ಹಸು ದಾಳಿ
ನವದೆಹಲಿ : ಮೂಕ ಪ್ರಾಣಿಗಳು ಕೆಲವೊಮ್ಮೆ ಹೇಗೆ ಪರಸ್ಪರ ಸಹಾಯ ಮಾಡುತ್ತವೆ. ಹೇಗೆ ಮತ್ತೊಂದು ಪ್ರಾಣಿಯನ್ನ ಕಾಪಾಡುತ್ತವೆ. ಹೇಗೆ ಕಷ್ಟದಿಂದ ಪಾರು ಮಾಡುತ್ತವೆ ಅನ್ನೋದಕ್ಕೆ ಅನೇಕ ಉದಾಹರಣೆಗಳನ್ನ ನಾವು ನೋಡಿದ್ದೇವೆ. ಇದೀಗ ವ್ಯಕ್ತಿಯೊಬ್ಬ ನಾಯಿಯೊಂದಕ್ಕೆ ಕಿರುಕುಳ ನೀಡುತ್ತಿದ್ದಾಗ ಆತನ ಮೇಲೆ ಅಚಾನಕ್ ಆಗಿ ಹಸು ದಾಳಿ ನಡೆಸಿರುವ ಘಟನೆಯ ವಿಡಿಯೋವೊಂದು ಸಖತ್ ವೈರಲ್ ಆಗ್ತಾಯಿದೆ.
https://twitter.com/i/status/1454788415396859909
ಹೌದು ಯಾರೋ ಸ್ಥಳೀಯರು ಇದರ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ನಾಯಿಗೆ ವ್ಯಕ್ತಿಯೊಬ್ಬ ಕಿರುಕುಳ ಕೊಡುತ್ತಿದ್ದ. ವ್ಯಕ್ತಿಯು ನಾಯಿಯ ಕುತ್ತಿಗೆಯನ್ನು ಮೇಲಕ್ಕೆ ಎತ್ತಿ ಎಳೆದಾಡುತ್ತಿದ್ದ. ನಾಯಿ ನೋವಿನಿಂದ ಕಿರುಚಿ, ನರಳುತ್ತಿದ್ದರೂ ಆತ ಅದಕ್ಕೆ ಹಿಂಸೆ ಕೊಡಲು ಮುಂದುವೆಸಿದ್ದಾನೆ. ಆದ್ರೆ ಇದನ್ನ ಕಂಡ ಹಸು ಸ್ಥಳಕ್ಕೆ ನುಗ್ಗಿ ನಾಯಿಯನ್ನು ಆ ವ್ಯಕ್ತಿಯಿಂದ ದೂರ ತಳ್ಳಿದೆ. ನಂತರ ಆ ವ್ಯಕ್ತಿಯ ಮೇಲೆ ದಾಳಿ ನಡೆಸಿ ಆತನನ್ನ ಬೀಳಿಸಿದೆ. ಈ ವೀಡಿಯೋವನ್ನು ಸುಸಂತ ನಂದಾ ಎಎಫ್‍ಎಸ್ ಅವರು ಟ್ವಟ್ಟರ್ ನಲ್ಲಿ ಹಂಚಿಕೊಂಡಿದ್ದ “ಕರ್ಮ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
https://twitter.com/i/status/1454788415396859909
ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಣೆಗೆ ಬಾಬಾ ರಾಮದೇವ್ ಒತ್ತಾಯ..!








