ಜಲಪಾತದ ಅಂಚಿನಲ್ಲಿ ಬಿಕಿನಿ ಫೋಟೋಶೂಟ್ : ಇದೆಂಥಾ ಹುಚ್ಚಾಟ ಎಂದ ನೆಟ್ಟಿಗರು
ವಾಷಿಂಗ್ ಟನ್ : ಮಾಡೆಲ್ ಗಳನ್ನು ಅಂದ್ರೆ ಚಿತ್ರ ವಿಚಿತ್ರ ಫೋಟೋಶೂಟ್ ಗಳು ಸಾಮಾನ್ಯ. ವೆರೈಟಿ ಡ್ರಸ್ ಗಳಲ್ಲಿ ಹೊಸ ಹೊಸ ಸ್ಟಿಲ್ ಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳುವುದು ಮಾಡೆಲ್ ಗಳ ವಾಡಿಕೆ.
ಅಮೆರಿಕದ ಯುವ ಮಾಡೆಲ್ ಬಿಕಿನಿಯಲ್ಲಿ ತುಂಬಾ ಎತ್ತರದ ಪ್ರದೇಶದಿಂದ ಫೋಟೋಶೂಟ್ ಮಾಡಿಸಿದ್ದು, ನೆಟ್ಟಿಗರಿಗೆ ಆಹಾರವಾಗಿದೆ.
ಪೆನ್ಸಿಲ್ವೇನಿಯಾದ 25 ವರ್ಷದ ಅಮೆರಿಜ್ ರೋಸ್ ಕಳೆದ ವರ್ಷ ಡಿಸೆಂಬರ್ನಲ್ಲಿ ಜಾಂಬಿಯಾಕ್ಕೆ ಹೋಗಿದ್ದರು. ಅಲ್ಲಿ ಅವರು ವಿಶ್ವದ ಅತಿ ಉದ್ದದ ವಿಕ್ಟೋರಿಯಾ ಜಲಪಾತಕ್ಕೆ ಭೇಟಿ ನೀಡಿದರು.
ಡೆವಿಲ್ಸ್ ಪೂಲ್ ಎಂದೇ ಕರೆಯಲ್ಪಡುವ ಈ ಜಲಪಾತವನ್ನು ನೋಡಿ ಖುಷಿಪಟ್ಟ ಅಮೆರಿಜ್ ಅಲ್ಲಿ ಬಿಕಿನಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
1640 ಅಡಿ ಎತ್ತರದಿಂದ ಮಲಗಿ ಕೆಳಕ್ಕೆ ಕೈಚಾಚಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಇದರ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಅಂಚಿನಲ್ಲಿರುವ ಜೀವನ .. ಇಲ್ಲಿ ತುಂಬಾ ಚೆನ್ನಾಗಿದೆ” ಎಂದು ಶೀರ್ಷಿಕೆ ನೀಡಿದ್ದಾರೆ.
ಅವರ ಈ ವಿಡಿಯೋ ನೋಡಿರುವ ನೆಟ್ಟಿಗರು ” ಇದೆಂಥಾ ಹುಚ್ಚಾಟ ಎಂದು ಟೀಕಿಸಿದ್ದಾರೆ. ಇದಕ್ಕೆ ಅಮೆರಿಸ್ ಪ್ರತಿಕ್ರಿಯಿಸಿ, ‘ಫೋಟೋಶೂಟ್ ತುಂಬಾ ಶಾಂತ ಮತ್ತು ಎಚ್ಚರಿಕೆಯಿಂದ ಇತ್ತು.
ನಾನು ಯಾವುದಕ್ಕೂ ಹೆದರುತ್ತಿರಲಿಲ್ಲ. ಅದರಲ್ಲೂ ಜಲಪಾತದ ಅಂಚಿನಲ್ಲಿ ಈ ರೀತಿ ಮಾಡಿದ್ದು, ನನಗೆ ಒಳ್ಳೆ ಕಿಕ್ ಕೊಡ್ತು ಅಂತ ಬರೆದುಕೊಂಡಿದ್ದಾರೆ. ‘ ಆದರೆ, ನೆಟಿಜನ್ಗಳು ಅಮೆರಿಸ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









