ಶೌಚಾಲಯದಲ್ಲಿ ಸ್ನಾಕ್ಸ್ ತಯಾರಿಸಿ ಸ್ನೇಹಿತರಿಗೆ ಕೊಟ್ಟ ಮಹಿಳೆ – VIDEO VIRAL
ಮೋಜು ಮಸ್ತಿಗೆ ಸ್ನೇಹಿತರನ್ನ ರೇಗಿಸುವುದಕ್ಕೆ ವಿಚಿತ್ರ ಪ್ಲಾನ್ ಗಳನ್ನ ಮಾಡುತ್ತೇವೆ.. ಮಾಡಿರುವವರನ್ನ ನೋಡಿದ್ದೇವೆ. ವಿಚಿತ್ರ ರೀತಿಯಲ್ಲೆಲ್ಲಾ ಅಡುಗೆಗಳನ್ನ ಮಾಡಿರುವ ಬಗ್ಗೆಯೂ ಕೇಳಿದ್ದೇವೆ. ಆದ್ರೆ ಇಲ್ಲೊಬ್ಬ ಮಹಿಳೆ ಪಾರ್ಟಿಗೆ ಇನ್ವೈಟ್ ಮಾಡಿದ್ದ ಸ್ನೇಹಿತರಿಗೆ ಶಚಾಲಯದಲ್ಲಿ ಡ್ರಿಂಕ್ಸ್ ತಯಾರಿಸಿ ಕೊಟ್ಟಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆಕೆಯ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ವೀಡಿಯೋದಲ್ಲಿ ಮಹಿಳೆ ಟಾಯ್ಲೆಟ್ ಬೌಲ್‍ಗೆ ಡ್ರೈ ಫ್ರೂಟ್ಸ್, ಕ್ಯಾಂಡಿ ಮತ್ತು ಐಸ್ ಕ್ರೀಂನನ್ನು ಹಾಕುತ್ತಾಳೆ. ಬಳಿಕ ಫ್ಲಾಶ್‍ನನ್ನು ತೆರೆದು ಸೋಡಾ ಮತ್ತು ಫಂಟಾ, ಸ್ಪ್ರೈಟ್ ಹಾಗೂ ಹಣ್ಣಿನ ರಸವನ್ನು ಬೆರೆಸುತ್ತಾಳೆ. ನಂತರ ಫ್ಲಶ್‍ನನ್ನು ಪ್ರೆಸ್ ಮಾಡಿದಾಗ ಪಾರ್ಟಿ ಡ್ರಿಂಕ್ ಟಾಯ್ಲಟ್ ಬೌಲ್‍ನಲ್ಲಿದ್ದ ಪದಾರ್ಥಗಳ ಜೊತೆ ಮಿಶ್ರಿತವಾಗುತ್ತದೆ. ನಂತರ ಆ ಪಾನೀಯವನ್ನು ಗ್ಲಾಸ್‍ಗೆ ಹಾಕಿ ತನ್ನ ಸ್ನೇಹಿತರಿಗೆ ನೀಡಲು ಮುಂದಾಗುತ್ತಾಳೆ.
ಮಹಿಳೆ ತನ್ನ ಸ್ನೇಹಿತರಿಗೆ ಇದನ್ನು ತಯಾರಿಸುವ ಮುನ್ನ ತಾನು ಟಾಯ್ಲೆಟ್‍ನನ್ನು ಕ್ಲೀನ್ ಮಾಡಿದ ಬಗ್ಗೆ ಕೂಡ ವಿವರಿಸಿದ್ದಾಳೆ. ಇದನ್ನು ಕೇಳಿದ ಎಲ್ಲರೂ ಗ್ಲಾಸ್‍ನನ್ನು ತ್ಯಜಿಸುತ್ತಾರೆ. ಆದರೆ ಒಬ್ಬರು ಅದನ್ನು ತೆಗೆದುಕೊಂಡು ಹೋಗಿ ಟಾಯ್ಲೆಟ್ ಬೌಲ್ ಒಳಗೆ ಸುರಿಯುತ್ತಾರೆ.
https://twitter.com/i/status/1385244507713777667








