Virat | ಕಿಂಗ್ ಕೊಹ್ಲಿಗೆ ಬಿಸಿಸಿಐ ಸರ್ಪ್ರೈಸ್ ಗಿಫ್ಟ್ virat-kohli-100th-test match saaksha tv
ಟೀಂ ಇಂಡಿಯಾ ನಾಯಕತ್ವದ ವಿಚಾರವಾಗಿ ಬಿಸಿಸಿಐ ಮತ್ತು ಕೊಹ್ಲಿ ನಡುವೆ ಭಾರೀ ಅಂತರ ಉಂಟಾಗಿರುವುದು ಗೊತ್ತಿರುವ ಸಂಗತಿ. ಆದರೆ, ಈ ಗ್ಯಾಪ್ ಕವರ್ ಮಾಡುವುದಕ್ಕಾಗಿ, ಕೊಹ್ಲಿಯನ್ನ ಖುಷಿಪಡಿಸಲು ಬಿಸಿಸಿಐ ಭಾರಿ ಪ್ರಣಾಳಿಕೆ ರೆಡಿ ಮಾಡಿಕೊಂಡಿದೆ. ಇದರ ಭಾಗವಾಗಿ ಕೊಹ್ಲಿ 100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಲು ಅದ್ಧೂರಿ ವ್ಯವಸ್ಥೆ ಮಾಡಿಕೊಂಡಿದೆ.
ಶೀಘ್ರದಲ್ಲಿಯೇ ಸ್ವದೇಶದಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ, ತನ್ನ 100ನೇ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಆ ಪಂದ್ಯವನ್ನು ಪಿಂಕ್ ಬಾಲ್ ಡೇ ಅಂಡ್ ನೈಟ್ ಮ್ಯಾಚ್ ಆಗಿಸಿ ವಿರಾಟ್ ಕೆರಿಯರ್ ನಲ್ಲಿ ಪ್ರತ್ಯೇಕವಾಗಿ ನೆನಪಿರುವಂತೆ ಮಾಡಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ. ಈ ಸುದ್ದಿಯನ್ನು ಬಿಸಿಸಿಐ ವಕ್ತಾರರೊಬ್ಬರು ರಾಷ್ಟ್ರೀಯ ಸುದ್ದಿ ಸಂಸ್ಥೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಘೋಷಿಸಲಾದ ವೇಳಾಪಟ್ಟಿಯ ಪ್ರಕಾರ ಶ್ರೀಲಂಕಾ ತಂಡ ಫೆಬ್ರವರಿ 25 ರಿಂದ ಮಾರ್ಚ್ 18 ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದೆ. ಲಂಕಾ ತಂಡ ಈ ಪ್ರವಾಸದ ವೇಳೆ ಟೀಂ ಇಂಡಿಯಾ ವಿರುದ್ಧ 2 ಟೆಸ್ಟ್ ಹಾಗೂ 3 ಟಿ20 ಪಂದ್ಯಗಳನ್ನು ಆಡಬೇಕಿದೆ. ಫೆಬ್ರವರಿ 25ರಿಂದ ಮಾರ್ಚ್ 1ರವರೆಗೆ ಬೆಂಗಳೂರಿನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಇದು ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯವಾಗಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ODI ಮತ್ತು T20 ಸರಣಿ ಮುಗಿದ ಬಳಿಕ ಶ್ರೀಲಂಕಾ ವಿರುದ್ಧದ ಈ ಸರಣಿ ಆರಂಭವಾಗಲಿದೆ.
ಏತನ್ಮಧ್ಯೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಇತ್ತೀಚೆಗೆ ತನ್ನ ಭಾರತ ಪ್ರವಾಸದ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದೆ. ಈ ಹಿಂದೆ ಘೋಷಿಸಿದಂತೆ ಮೊದಲ ಟೆಸ್ಟ್ ಸರಣಿಯ ಬದಲಿಗೆ ಟಿ20 ನಡೆಸುವಂತೆ ಎಸ್ಎಲ್ಸಿ ಬಿಸಿಸಿಐಗೆ ಮನವಿ ಮಾಡಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ವೇಳಾಪಟ್ಟಿಯ ಪ್ರಕಾರ, ಶ್ರೀಲಂಕಾ ವಿರುದ್ಧದ ಸರಣಿಯ ಭಾಗವಾಗಿ ಮೊದಲ ಟೆಸ್ಟ್ ಫೆಬ್ರವರಿ 25 (ಬೆಂಗಳೂರು), ಎರಡನೇ ಟೆಸ್ಟ್ ಮಾರ್ಚ್ 5 (ಮೊಹಾಲಿ) ಮತ್ತು ಮಾರ್ಚ್ 13, 15 ಮತ್ತು 18 ರಂದು 3 ಟಿ20 ಪಂದ್ಯಗಳು ನಡೆಯಲಿವೆ.








