40 ತಿಂಗಳ ನಂತರ 44 ನೇ ಏಕದಿನ ಸೆಂಚುರಿ ಸಿಡಿಸಿದ ಕಿಂಗ್ ಕೊಹ್ಲಿ…
ರನ್ ಮಶಿನ್ ಕಿಂಗ್ ಕೊಹ್ಲಿ 40 ತಿಂಗಳ ನಂತರ 44 ನೇ ಏಕದಿನ ಸೆಂಚುರಿಯನ್ನ ಬಾಂಗ್ಲಾದೇಶದ ವಿರುದ್ಧ ಸಿಕ್ಸ್ ಭಾರಿಸುವ ಮೂಲಕ ಪೂರೈಸಿಕೊಂಡಿದ್ದಾರೆ. ಒಟ್ಟಾರೆ ಇಲ್ಲಿಯವರೆಗೆ 72 ನೇ ಅಂತರಾಷ್ಟ್ರೀಯ ಸೆಂಚುರಿಯನ್ನ ವಿರಾಟ್ ಕೊಹ್ಲಿ ದಾಖಲಿಸಿದ್ದಾರೆ.
1200 ದಿನಗಳ ಬಳಿಕ ವಿರಾಟ್ 50 ಓವರ್ ಗಳ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಂಗ್ಲಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳು ಅಕ್ಷರಶಃ ದಂಡಯಾತ್ರೆ ನಡೆಸುತ್ತಿದ್ದಾರೆ. ಕಿಂಗ್ ಕೊಹ್ಲಿಗೂ ಮೊದಲು ಚಂಡ ಮಾರುದಂತೆ ಅಬ್ಬರಿಸಿದ ಇಶಾನ್ ಕಿಶಾನ್ ಅತಿ ವೇಗದ ದ್ವಿ ಶತಕವನ್ನ ಭಾರಿಸಿದ್ದಾನೆ.
ಇಶಾನ್ ಕೇವಲ 126 ಬಾಲ್ ಗೆ 200 ರನ್ ಹೊಡೆದು ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಾಖಲೆಯನ್ನ ಧೂಳಿ ಪಟ ಮಾಡಿದ್ದಾರೆ. ಕ್ರಿಸ್ ಗೇಲ್ ಈ ಹಿಂದ 2014 ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 138 ಬಾಲ್ ಗೆ ದ್ವಿ ಶತಕ ಗಳಿಸಿದ್ದಾರೆ.
Virat Kohli : 44th ODI century after 40 months, King Kohli…








