virat kohli | ರಾಹುಲ್ ದ್ರಾವಿಡ್ ದಾಖಲೆ ಬ್ರೇಕ್ ಮಾಡಿದ ವಿರಾಟ್
ಪಾಕಿಸ್ತಾನ್ ವಿರುದ್ಧದ ಬ್ಲಾಕ್ ಬ್ಲಸ್ಟರ್ ಪಂದ್ಯದಲ್ಲಿ ವಿಶ್ವರೂಪ ಪ್ರದರ್ಶನ ವಿರಾಟ್ ಕೊಹ್ಲಿ ( 53 ಎಸೆತಗಳಲ್ಲಿ 82 ರನ್ ) ಪ್ರಪಂಚದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆಲ್ಲುವುದರ ಜೊತೆಗೆ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ.
ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ಪ್ಲೇಯರ್ ಆಫ್ ದಿ ಮ್ಯಾಚ್ (14) ಸಾಧಿಸಿದ ಆಟಗಾರನಾಗಿ, ಟಿ 20 ವಿಶ್ವಕಪ್ ನಲ್ಲಿ ಅತ್ಯಧಿಕ ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ( 6 ಬಾರಿ ) ಪಡೆದ ಕ್ರಿಕೆಟ್ ಆಗಿ, ಟಿ 20 ಕ್ರಿಕೆಟ್ ನಲ್ಲಿ ಚೇಸಿಂಗ್ ಮಾಡುತ್ತಾ ಅಧಿಕ ಬಾರಿ (18 ) ನಾಟೌಟ್ ಆಗಿ ಉಳಿದ ಬ್ಯಾಟರ್ ಆಗಿ, ಐಸಿಸಿ ಟೂರ್ನಿಗಳಲ್ಲಿ ಹೆಚ್ಚು ಅರ್ಧಶತಕ ಸಿಡಿಸಿದ ಭಾರತೀಯ ಆಟಗಾರನಾಗಿ ವಿರಾಟ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇವು ಮಾತ್ರವಲ್ಲದೇ ವಿರಾಟ್ ಈ ಅದ್ಭುತ ಇನ್ನಿಂಗ್ಸ್ ನೊಂದಿಗೆ ಮತ್ತೊಂದು ದಾಖಲೆಯನ್ನು ಸಾಧಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳನ್ನು ಸಾಧಿಸಿದ ಆಟಗಾರರ ಪಟ್ಟಿಯಲ್ಲಿ ಪ್ರಸ್ತುತ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರನ್ನ ಹಿಂದಿಕ್ಕಿ ಆರನೇ ಸ್ಥಾನಕ್ಕೇರಿದ್ದಾರೆ. ವಿರಾಟ್ ಕೊಹ್ಲಿ ಒಟ್ಟು 528 ಪಂದ್ಯಗಳಲ್ಲಿ 53.80 ರ ಸರಾಸರಿಯಲ್ಲಿ 24,212 ರನ್ ಗಳಿಸಿದ್ದಾರೆ. ರಾಹುಲ್ ದ್ರಾವಿಡ್ 509 ಇನ್ನಿಂಗ್ಸ್ ಗಳಲ್ಲಿ 45.41 ರ ಸರಾಸರಿಯಲ್ಲಿ 24,208 ರನ್ ಗಳನ್ನು ಸಾಧಿಸಿದ್ದಾರೆ.
ಇನ್ನು ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 34,357 ರನ್ ಗಳೊಂದಿಗೆ ಸಚಿನ್ ಮೊದಲ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ದಿಗ್ಗಜ ಕುಮಾರ್ ಸಂಗಾಕರ್ 28,016 ರನ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್ 27,489 ರನ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.








