ಟ್ವೀಟರ್ ನಲ್ಲೂ ಕೊಹ್ಲಿ ಹವಾ – 50 ಮಿಲಿಯನ್ ದಾಟಿದ ಪಾಲೋವರ್ಸ್
ಕ್ರೀಡಾಂಗಣದಲ್ಲಿ ಒಂದಲ್ಲ ಒಂದು ರೆಕಾರ್ಡ್ಗಳನ್ನ ಬ್ರೇಕ್ ಮಾಡುತ್ತಲೇ ಇರುವ ವಿರಾಟ್ ಕೊಹ್ಲಿ ಇದೀಗ ಕ್ರಿಕೆಟ್ ನ ಹೊರತಾಗಿಯೂ ಹೊಸ ದಾಖಲೆಯೊಂದನ್ನ ಬರೆದಿದ್ದಾರೆ. ಟ್ವಿಟರ್ ನಲ್ಲಿ 50 ಮಿಲಿಯನ್ ಫಾಲೋವರ್ಸ್ ಗಳನ್ನ ಹೊಂದಿದ ಏಕೈಟ ಕ್ರಿಕೆಟ್ ಆಟಗಾರ ಎಂಬ ಖ್ಯಾತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
33 ವರ್ಷದ ವಿರಾಟ್ ಕೊಹ್ಲಿ ಈಗಾಗಾಲೇ ಇನ್ಸ್ಟಾಗ್ರಾಂ ನಲ್ಲಿ 211 ಮಿಲಿಯನ್ ಪಾಲೋರ್ವಸ್ ಹೊಂದುವ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ (450M) ಮತ್ತು ಲಿಯೋನೆಲ್ ಮೆಸ್ಸಿ (333M) ನಂತರ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ 3ನೇ ಕ್ರಿಡಾ ಸೆಲೆಬ್ರಿಟಿ ಎಂಬ ಪಟ್ಟಿಯನ್ನೂ ಹೊಂದಿದ್ದಾರೆ. ಕೊಹ್ಲಿ ಫೇಸ್‌ಬುಕ್‌ನಲ್ಲಿ 49 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಈ ವರ್ಷದ ಅಂತ್ಯದ ವೇಳೆಗೆ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ ನಲ್ಲಿದ್ದು ಏಷ್ಯಾಕಪ್ ನಲ್ಲಿ ತಮ್ಮ ಕನಸಿನ 71 ಶತಕವನ್ನ ಪೂರೈಸಿಕೊಳ್ಳುವುದರ ಮೂಲಕ ಮತ್ತೆ ಲಯ ಕಂಡುಕೊಂಡಿದ್ದಾರೆ. ನವೆಂಬರ್ 2019 ರಲ್ಲಿ ಕೊನೆಯ ಶತಕ ಭಾರಿಸಿದ್ದ ಕೊಹ್ಲಿ 1020 ದಿನಗಳ ನಂತರ 71 ಶತಕವನನ್ನ ಪೂರೈಸಿಕೊಂಡಿದ್ದಾರೆ.








