Virat Kohli – ವಿರಾಟ್ ಕೊಹ್ಲಿ ಟಿ 20 ಕ್ರಿಕೆಟ್ ನ ಸಾಮ್ರಾಟ
ಸದ್ಯ ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯವರದ್ದೇ ದಾಖಲೆ.
ವಿಶ್ವಕಪ್ ನಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನು ಸಿಡಿಸಿ ಮಿಂಚುತ್ತಿರುವ ಕೊಹ್ಲಿ, ಟಿ 20 ಕ್ರಿಕೆಟ್ ನಲ್ಲಿ ಸಾಕಷ್ಟು ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ.
ಅದರಲ್ಲಿ ಮುಖ್ಯವಾಗಿ ಟಿ 20 ಕ್ರಿಕೆಟ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿರುವುದು.
ಹೌದು..! ವಿರಾಟ್ ಕೊಹ್ಲಿ ಇಲ್ಲಿಯವರೆಗೂ 111 ಇನ್ನಿಂಗ್ಸ್ ಗಳಲ್ಲಿ 3856 ರನ್ ಗಳಿಸಿದ್ದಾರೆ.
122 ರನ್ ಅವರ ಅತ್ಯಧಿಕ ಮತ್ತು ಏಕೈಕ ಶತಕವಾಗಿದೆ.
52.82ರ ಆವರೇಜ್, 138.45 ರ ಸ್ಟ್ರೈಕ್ ರೇಟ್ ನಲ್ಲಿ ವಿರಾಟ್ ಬ್ಯಾಟ್ ಬೀಸಿದ್ದು, 35 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇನ್ನು ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಎರಡನೇ ಸ್ಥಾನಲದದ್ದಾರೆ.
ಅವರು 3794 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಖಾತೆಯಲ್ಲಿ ನಾಲ್ಕು ಶತಕ ಮತ್ತು 29 ಅರ್ಧಶತಕಗಳಿವೆ.