Virat Kohli – ವಿಶ್ವ ದಾಖಲೆ ಮೇಲೆ ವಿರಾಟ್ ಕಣ್ಣು
ಟಿ 20 ವಿಶ್ವಕಪ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ನೆದರ್ ಲ್ಯಾಂಡ್ ವಿರುದ್ಧ ಟೀಂ ಇಂಡಿಯಾ 56 ರನ್ ಗಳಿಂದ ಗೆಲುವು ಸಾಧಿಸಿದೆ.
ಈ ಮ್ಯಾಚ್ ನಲ್ಲಿ ಭಾರತ ತಂಡ ಆಲ್ ರೌಂಡ್ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್ ಅರ್ಧಶತಕ ಸೆಂಚೂರಿ ಸಿಡಿಸಿದ್ರು.
ಆ ನಂತರ ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಅರ್ಷ್ ದೀಪ್ ಸಿಂಗ್ ಮಿಂಚಿದರು.
ಇನ್ನು ಈ ಮ್ಯಾಚ್ ನಲ್ಲಿ 62 ರನ್ ಗಳನ್ನು ಸಾಧಿಸಿ ಅಜೇಯರಾಗಿ ಉಳಿದ ಕಿಂಗ್ ಕೊಹ್ಲಿ ಅಪರೂಪದ ದಾಖಲೆ ಮಾಡಿದರು.
ಟಿ 20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ದಾಖಲೆಯನ್ನು ವಿರಾಟ್ ನಿರ್ಮಿಸಿದ್ದಾರೆ.
ವಿರಾಟ್ ಕೊಹ್ಲಿ ಇಲ್ಲಿಯವರೆಗೂ ಟಿ 20 ವಿಶ್ವಕಪ್ ನಲ್ಲಿ 23 ಮ್ಯಾಚ್ ಗಳನ್ನಾಡಿದ್ದು 989 ರನ್ ಗಳನ್ನು ಗಳಿಸಿದ್ದಾರೆ. ಇದರಲ್ಲಿ 12 ಅರ್ಧಶತಕಗಳಿವೆ.
ಇದಕ್ಕೂ ಮುನ್ನ ಎರಡನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಇದ್ದರು, ಇದೀಗ ವಿರಾಟ್ ಅವರನ್ನ ಹಿಂದಿಕ್ಕಿದ್ದಾರೆ.
ಗೇಲ್ 33 ಪಂದ್ಯಗಳಲ್ಲಿ 965 ರನ್ ಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ 1016 ರನ್ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಈ ಮೆಗಾ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಬೊಂಬಾಟ್ ಫಾರ್ಮ್ ನಲ್ಲಿದ್ದು, ಜಯವರ್ಧನೆ ದಾಖಲೆ ದೂಳಿಪಟವಾಗುವುದು ಖಚಿತ.