ಆಟಗಾರನಾಗಿ ಮತ್ತಷ್ಟು ಸಾಧಿಸಬಲ್ಲೆ.. ಮೌನ ಮುರಿದ ವಿರಾಟ್ virat-kohli-comments-on-captaincy saaksha tv
ತಂಡಕ್ಕಾಗಿ ಕೆಲಸ ಮಾಡಲು ಕ್ಯಾಪ್ಟನ್ಸಿ ಪಟ್ಟ ಬೇಕಾಗಿಲ್ಲ ಎಂದು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕ್ಯಾಪ್ಟನ್ ಅಲ್ಲದಿದ್ದರೂ ಒಬ್ಬ ಬ್ಯಾಟರ್ ಆಗಿ ಸಿನಿಯರ್ ಪ್ಲೇಯರ್ ಆಗಿ ತಂಡದಲ್ಲಿ ಪ್ರಮುಖ ಪಾತ್ರ ಪೋಷಿಸುವೆ ಎಂದು ವಿರಾಟ್ ತಿಳಿಸಿದ್ದಾರೆ.
ಇನ್ಮುಂದೆ ಬ್ಯಾಟರ್ ಆಗಿ ತಾವು ಮತ್ತಷ್ಟು ಅದ್ಭುತ ಪ್ರದರ್ಶನಗಳೊಂದಿಗೆ ಟೀಂ ಇಂಡಿಯಾಗೆ ಗೆಲುವುಗಳನ್ನು ತಂದುಕೊಡುತ್ತೇನೆ ಎಂದು ವಿರಾಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ಯಾಪ್ಟನ್ಸಿ ವಿಚಾರವಾಗಿ ನಾನು ಹೀಗ್ಯಾಕೆ ಮಾಡ್ದೆ ಅಂತಾ ತುಂಬಾ ಜನರು ಅಂದುಕೊಂಡಿರಬಹುದು. ಆದ್ರೆ ನನ್ನ ದೃಷ್ಠಿಯಲ್ಲಿ ಪ್ರತಿಯೊಂದಕ್ಕೂ ಸಮಯವಿರುತ್ತದೆ.
ಅದರ ಬಗ್ಗೆ ನಮಗೆ ಗೊತ್ತಿರಬೇಕು. ಇಲ್ಲಿಯವರೆಗೆ ನಮ್ಮ ಜವಾಬ್ದಾರಿ ಮುಗೀತು ಎಂದು ಭಾವಿಸಿ ಮುಂದೆ ಸಾಗಬೇಕು. ಇನ್ಮುಂದೆ ಒಬ್ಬ ಬ್ಯಾಟರ್ ಆಗಿ ನಾನು ತಂಡಕ್ಕಾಗಿ ತುಂಬಾ ಮಾಡುವುದಿದೆ.
ನಾಯಕನಾಗಿ ಮುಂದೆ ಇದ್ದು, ತಂಡವನ್ನು ನಡೆಸಲು ಕ್ಯಾಪ್ಟನ್ ಆಗಬೇಕಿರುವ ಅವಶ್ಯಕತೆ ಇಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಎಂ.ಎಸ್.ಧೋನಿ ಸರಿಯಾಗಿ ಇದೇ ಇದ್ದರು. ಆತ ಕ್ಯಾಪ್ಟನ್ಸಿಯಿಂದ ಕೆಳಗಿಳಿದ ಬಳಿಕ ಯಾವುದೇ ಹಿಂಜರಿಕೆ ಇಲ್ಲದೇ ಎಲ್ಲ ಅಂಶಗಳಲ್ಲಿಯೂ ಭಾಗವಹಿಸುತ್ತಾ, ಸೂಚನೆ, ಸಲಹೆ ನೀಡುತ್ತಿದ್ದರು.
ಧೋನಿ ಅವರಿಂದ ನಾನು ಕ್ಯಾಪ್ಟನ್ಸಿ ತೆಗೆದುಕೊಳ್ಳುವುದು ಸಹಜ ಪರಿಣಾಮವಾಗಿದ್ದು, ಇದು ಭಾರತ ತಂಡದ ಭವಿಷ್ಯದ ದೃಷ್ಟಿ ಅನುಕೂಲಕರ ಆಗಲಿದೆ ಎಂದು ಧೋನಿ ಭಾವಿಸಿದ್ದರು.
ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಸರಿಯಾದ ಸಮಯದಲ್ಲಿ ನಾಯಕತ್ವದಿಂದ ಕೆಳಗಿಳಿಯುವುದು ನಾಯಕತ್ವದ ಲಕ್ಷಣ. ಅಲ್ಲಿಯವರೆಗೂ ಒಂದೇ ರೀತಿಯಲ್ಲಿದ್ದ ವಾತಾವರಣದಲ್ಲಿ ಕೊಂಚ ಬದಲಾವಣೆಯಾದರೇ ಒಳ್ಳೆಯದು. ಹೊಸ ತರಹದ ಆಲೋಚಲನೆಗಳು ಸೃಷ್ಠಿಯಾಗುತ್ತವೆ, ಯಾವುದೇ ರೀತಿಯ ಜವಾಬ್ದಾರಿಗೆ ಸಿದ್ಧವಾಗಿರಬೇಕು ಎಂದಿದ್ದಾರೆ ವಿರಾಟ್ ಕೊಹ್ಲಿ.









