IPL | ಎದುರಾಳಿಗಳ ಮೇಲೆ ಮುಗಿಬೀಳಲಿದೆ RCB ಟೈಗರ್..
ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ.
ಹೊಸ ಜೋಷ್ ನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಅಖಾಡಕ್ಕೆ ಧುಮುಕಲಿದೆ.
ಹೊಸ ನಾಯಕನ ನೇತೃತ್ವದಲ್ಲಿ ರೆಡ್ ಅಂಡ್ ಗೋಲ್ಡ್ ಲಯನ್ಸ್ ಈಗಾಗಲೇ ಕಸರತ್ತು ಆರಂಭಿಸಿವೆ.
ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಎದುರಾಳಿ ತಂಡಗಳಿಗೆ ಒಂದು ಸ್ವೀಟ್ ವಾರ್ನಿಂಗ್ ಕೊಟ್ಟಿದ್ದಾರೆ.
ಅದು ಕೂಡ ವಿರಾಟ್ ವಿಚಾರವಾಗಿ ಮ್ಯಾಕ್ಸಿ ಉಳಿದ ತಂಡಗಳಿಗೆ ಎಚ್ಚರಿಕೆಯನ್ನ ನೀಡಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ.
ಮ್ಯಾಕ್ಸಿ ಹೇಳಿಕೆಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಬೇರೆಯದ್ದೇ ರೀತಿಯಲ್ಲಿ ರಿಪ್ಲೆಗಳನ್ನ ಕೊಡುತ್ತಿದ್ದಾರೆ.
ಅದು ಏನೇ ಇರಲಿ… ಮ್ಯಾಕ್ಸಿ ಹೇಳಿದ್ದೇನು ಅಂತಾ ನೋಡೋದಾದ್ರೆ..
ಸದ್ಯ ಎಲ್ಲಾ ರೀತಿಯ ನಾಯಕತ್ವದ ಹೊಣೆಗಾರಿಕೆಯಿಂದ ಮುಕ್ತವಾಗಿರುವ ವಿರಾಟ್ ಕೊಹ್ಲಿ ಎದುರಾಳಿಗಳ ಮೇಲೆ ಮನಬಂದಂತೆ ಮುಗಿಬೀಳುವ ಪ್ರಮಾದವಿದೆ ಎಂದು ಮ್ಯಾಕ್ಸಿ ಹೇಳಿದ್ದಾರೆ.
ನಾಯಕತ್ವದ ಜವಾಬ್ದಾರಿ ಇದ್ದಾಗಲೇ ಕೊಹ್ಲಿ, ಎದುರಾಳಿ ಬೌಲರ್ ಗಳ ಮೇಲೆ ಸವಾರಿ ಮಾಡುತ್ತಿದ್ದರು. ಈಗ ಆ ಜವಾಬ್ದಾರಿ ವಿರಾಟ್ ಮೇಲೆ ಇಲ್ಲ. ಹೀಗಾಗಿ ಅವರನ್ನ ತಡೆಯುವ ಶಕ್ತಿ ಯಾರ ಬಳಿಯೂ ಇಲ್ಲ ಎಂದಿದ್ದಾರೆ ಮ್ಯಾಡ್ ಮ್ಯಾಕ್ಸ್ ವೆಲ್.
ನಾಯಕರಾಗುವುದಕ್ಕೂ ಮೊದಲು ವಿರಾಟ್ ಬಳಿ ಇದ್ದ ಆವೇಶ ಈ ಬಾರಿಯ ಐಪಿಎಲ್ ನಲ್ಲಿ ನಾವು ಕಾಣಬಹುದು.
15ನೇ ಆವೃತ್ತಿಯ ಐಪಿಎಲ್ ನಲ್ಲಿ ನಾವು ಹಳೆಯ ವಿರಾಟ್ ಕೊಹ್ಲಿ ಅವರನ್ನ ನೋಡಬಹುದು ಎಂದು ಮ್ಯಾಕ್ಸ್ ವೆಲ್ ಭವಿಷ್ಯ ನುಡಿದಿದ್ದಾರೆ.
ಅಲ್ಲದೇ ವಿರಾಟ್ ಕೊಹ್ಲಿ ಅವರಲ್ಲಿ ಆಗಿರುವ ಬದಲಾವಣೆ ವಿರೋಧಿಗಳಿಗೆ ದುಸ್ವಪ್ನವಾಗಿ ಕಾಡಲಿದೆ ಎಂದಿದ್ದಾರೆ. Virat-kohli-could-be-most-dangerous-opposition









