Virat Kohli – ಇದು ವಿರಾಟ್ ಕೊಹ್ಲಿಗೆ ಮಾತ್ರ ಸಾಧ್ಯ
ಟೀ 20 ವಿಶ್ವಕಪ್ ಭಾಗವಾಗಿ ಜಿಂಬಾಬ್ವೆ ವಿರುದ್ಧದ ಮ್ಯಾಚ್ ನಲ್ಲಿ ಕಿಂಗ್ ವಿರಾಟ್ ಕೊಹ್ಲಿಯ ಚಿತ್ರವಿಚಿತ್ರ ಹಾವಭಾವಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ.
ಕ್ಯಾಚ್ ಹಿಡಿದು ಒಂದು ಎಕ್ಸ್ ಪ್ರೇಷನ್.. ವಿಕೆಟ್ ಬಿದ್ದಾಗ ಮತ್ತೊಂದು ಎಕ್ಸ್ ಪ್ರೇಷನ್.. ಹೀಗೆ ಹೇಳಿಕೊಂಡು ಹೋದರೇ ತುಂಬಾ ಇವೆ.
ಆದ್ರೆ ಈ ಎಲ್ಲದಕ್ಕಿಂತ ಹೆಚ್ಚು ವೈರಲ್ ಆಗುತ್ತಿರುವುದು ಮಾತ್ರ ಜಿಂಬಾಬ್ವೆ ಬ್ಯಾಟರ್ ವೆಸ್ಲಿ ಮಾಧವರೆ ಕ್ಯಾಚ್ ಹಿಡಿದು ಕೊಹ್ಲಿ ಕೊಟ್ಟ ಎಕ್ಸ್ ಪ್ರೇಷನ್ಸ್..
ಜಿಂಬಾಬ್ವೆ ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿ ಭುವಿ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ವೆಸ್ಲಿ, ವಿರಾಟ್ ಕೊಹ್ಲಿ ಕ್ಯಾಚ್ ನೀಡಿದರು.

ಆ ವೇಳೆ ವಿರಾಟ್ ಕೊಹ್ಲಿ ನೀಡಿದ ಎಕ್ಸ್ ಪ್ರೇಷನ್ ಹೈಲೈಟ್ ಆಗಿತ್ತು.
ಅಲ್ಲದೇ ಕೊಹ್ಲಿ ಎಕ್ಸ್ ಪ್ರೇಷನ್ಸ್ ಬಗ್ಗೆ ಅಭಿಮಾನಿಗಳು ಸ್ಪಂದಿಸಿದ್ದು, ಇದು ಕೊಹ್ಲಿಗೆ ಮಾತ್ರ ಸಾಧ್ಯ ಅಂತಾ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಅಂದಹಾಗೆ ಈ ಮ್ಯಾಚ್ ನಲ್ಲಿ ವಿರಾಟ್ ಕೊಹ್ಲಿ 26 ರನ್ ಗಳಿಗೆ ಆಟ ಮುಗಿಸಿದರು.
ಈ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಲೀಡಿಂಗ್ ರನ್ ಸ್ಕೋರರ್ ಆಗಿದ್ದಾರೆ.
ಐದು ಮ್ಯಾಚ್ ಗಳಲ್ಲಿ ವಿರಾಟ್ 245 ರನ್ ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳಿವೆ.








