ಶೂನ್ಯ ಸುತ್ತಿದ್ದ ವಿರಾಟ್…ಬೇಡವಾದ ದಾಖಲೆ ಪುಟದಲ್ಲಿ ಧೋನಿ ಜೊತೆ ಸೇರಿಕೊಂಡ ಕೊಹ್ಲಿ…!
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೇಡವಾದ ದಾಖಲೆ ಪಟ್ಟಿಗೆ ಸೇರಿಕೊಂಡಿದ್ದಾರೆ.
ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನ ವಿರಾಟ್ ಕೊಹ್ಲಿ ತನ್ನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಎಂಟು ಎಸೆತಗಳಲ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಈ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಸಾಲಿಗೆ ಸೇರಿಕೊಂಡಿದ್ದಾರೆ. ಈ ಹಿಂದೆ ಧೋನಿ ಕೂಡ ಟೆಸ್ಟ್ ಕ್ರಿಕೆಟ್ ನಲ್ಲಿ ಬೇಡವಾದ ದಾಖಲೆಗೆ ಪಾತ್ರರಾಗಿದ್ದರು.
ಈ ಹಿಂದೆ ಧೋನಿ ಕೂಡ ಟೀಮ್ ಇಂಡಿಯಾ ನಾಯಕನಾಗಿದ್ದಾಗ ಎಂಟು ಬಾರಿ ಶೂನ್ಯಕ್ಕೆ ಔಟಾಗಿದ್ದರು. ಇದೀಗ ವಿರಾಟ್ ಕೊಹ್ಲಿ ಕೂಡ ಎಂಟು ಬಾರಿ ಶೂನ್ಯ ಸುತ್ತಿ ಧೋನಿ ಹೆಸರಿನೊಂದಿಗೆ ಕೊಹ್ಲಿ ಕೂಡ ಗುರುತಿಸಿಕೊಂಡಿದ್ದಾರೆ.
ಈಗಾಗಲೇ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕನಾಗಿ ಧೋನಿಯ ಹೆಜ್ಜೆ ಗುರತುಗಳನ್ನು ಮೆಟ್ಟಿ ಮುನ್ನಡೆಯುತ್ತಿದ್ದಾರೆ. ಕೆಲವೊಂದು ಬಾರಿ ಸೋಲು ಗೆಲುವು, ರನ್ ಗಳಷ್ಟೇ ಮಹತ್ವವನ್ನು ಸೊನ್ನೆ ಕೂಡ ಪಡೆದುಕೊಳ್ಳುತ್ತಿದೆ.
ಅಂದ ಹಾಗೇ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 12 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇನ್ನು ಈ ಸರಣಿಯಲ್ಲಿ ಎರಡನೇ ಬಾರಿಗೆ ವಿರಾಟ್ ಕೊಹ್ಲಿ ಸೊನ್ನೆಗೆ ಔಟಾಗಿದ್ದಾರೆ. ಚೆನ್ನೈನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೋಯಿನ್ ಆಲಿ ಎಸೆತದಲ್ಲಿ ಡಕೌಟ್ ಆಗಿದ್ದರು.
ಈ ಹಿಂದೆ 2014ರ ಸರಣಿಯಲ್ಲೂ ಕೊಹ್ಲಿ ಎರಡು ಬಾರಿ ಸೊನ್ನೆಗೆ ಔಟಾಗಿದ್ದರು. ಆದಾದ ನಂತರ ಕೊಹ್ಲಿ ಇದೇ ಮೊದಲ ಬಾರಿ ಸರಣಿಯೊಂದರಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದು.
ಮತ್ತಷ್ಟು ಅಂಕಿ ಅಂಶಗಳ ಪ್ರಕಾರ, ಇಂಗ್ಲೆಂಡ್ ವಿರುದ್ಧ ಇಲ್ಲಿಯವರೆಗೆ ಐದು ಬಾರಿ ಸೊನ್ನೆಗೆ ವಿರಾಟ್ ಔಟಾಗಿದ್ದರು. ಕಳೆದ ಏಳು ಇನಿಂಗ್ಸ್ ಗಳಲ್ಲಿ ವಿರಾಟ್ ಸೊನ್ನೆಗೆ ಔಟಾಗಿದ್ದು ಇದು ಮೂರನೇ ಬಾರಿ.
ಇಂಗ್ಲೆಂಡ್ ಪರ ವಿರಾಟ್ ಕೊಹ್ಲಿಯವರನ್ನು ಖಾತೆ ತೆರೆಯದೇ ಔಟ್ ಮಾಡಿದ್ದ ಬೌಲರ್ ಗಳ ಸಾಲಿಗೆ ಬೆನ್ ಸ್ಟೋಕ್ಸ್ ಈಗ ಸೇರಿಕೊಂಡಿದ್ದಾರೆ. ಈ ಹಿಂದೆ ಪ್ಯಾಟ್ ಕಮಿನ್ಸ್, ಮೋಯಿನ್ ಆಲಿ, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡೆರ್ಸನ್‍ಗೆ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ್ದರು.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ 2020ರಿಂದ ರನ್ ಬರವನ್ನು ಎದುರಿಸುತ್ತಿದ್ದಾರೆ. 2021ರ ಇಂಗ್ಲೆಂಡ್ ಸರಣಿಯಲ್ಲೂ ವಿರಾಟ್ ಕೊಹ್ಲಿಯ ಬ್ಯಾಟ್ ನಿಂದ ರನ್ ಗಳೇ ಹರಿದು ಬಂದಿಲ್ಲ.
ಒಟ್ಟಾರೆ, ಧೋನಿಯ ಉತ್ತಾರಾಧಿಕಾರಿಯಾಗಿ ನೇಮಕಗೊಂಡಿರುವ ವಿರಾಟ್ ನಾಯಕನಾಗಿ ಧೋನಿಯ ದಾಖಲೆಗಳನ್ನು ಅಳಿಸಿ ಹಾಕುತ್ತಿದ್ದಾರೆ. ಅದೇ ರೀತಿ ಕೆಲವೊಂದು ಬೇಡವಾದ ದಾಖಲೆಗಳ ಪುಟದಲ್ಲಿ ಧೋನಿಯ ಹೆಸರಿನೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ವಿಶೇಷತೆ ಏನು ಅಂದ್ರೆ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ವಿರಾಟ್ ಕೊಹ್ಲಿ ಮತ್ತು ಬೆನ್ ಸ್ಟೋಕ್ಸ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಎರಡನೇ ದಿನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬೆನ್ ಸ್ಟೋಕ್ ನೀಡಿದ್ದಾರೆ.