ಐಪಿಎಲ್ ನಲ್ಲಿ “ಆರನೇ ಬಾರಿ ವಿರಾಟ್ ಗೋಲ್ಡನ್ ಡಕ್”
15ನೇ ಸೀಸನ್ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಮತ್ತೆ ಗೋಲ್ಡನ್ ಡಕ್ ಆಗಿದ್ದಾರೆ.
ಆ ಮೂಲಕ ಈ ಸೀಸನ್ನಲ್ಲಿ ಮೂರನೇ ಬಾರಿಗೆ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗಿದ್ದಾರೆ.
ಮುಂಬೈ ವಾಂಖೇಡೆ ಮೈದಾನದಲ್ಲಿ ಫಾಫ್ ಡುಪ್ಲಸಿಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು.
ಆದ್ರೆ ಆರ್ ಸಿಬಿ ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿಯೇ ವಿರಾಟ್ ಕೊಹ್ಲಿ ಸುಚಿತ್ ಅವರ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ವಿಕೆಟ್ ನೀಡಿದರು.
ವೇಗದ ಬೌಲರ್ ಗಳ ವಿರುದ್ಧ ಉತ್ತಮವಾಗಿ ಬ್ಯಾಟ್ ಬೀಸುವ ವಿರಾಟ್ ಕೊಹ್ಲಿ ಇತ್ತೀಚೆಗೆ ಸ್ಪಿನ್ನರ್ ಗಳಿಗೆ ಬಲಿಯಾಗುತ್ತಿದ್ದಾರೆ.
ಇದರ ಮಾಹಿತಿ ಇದ್ದ ಎಸ್ ಆರ್ ಹೆಚ್ ನಾಯಕ ಕೇನ್ ವಿಲಿಯಮ್ ಸನ್ ಎಡಗೈ ಸ್ಪಿನ್ನರ್ ಸುಚಿತ್ ಕೈಗೆ ಬಾಲ್ ನೀಡಿದರು.
ಕೇನ್ ವ್ಯೂಹದಂತೆ ಬೌಲಿಂಗ್ ಮಾಡಿದ ಸುಚಿತ್, ವಿರಾಟ್ ವಿಕೆಟ್ ಪಡೆಯುವಯಲ್ಲಿ ಯಶಸ್ವಿಯಾಗಿದ್ದಾರೆ.

ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಲಕ್ನೋ ಸೂಪರ್ ಜೈಂಟ್ ವಿರುದ್ಧ ಮೊದಲು ಗೋಲ್ಡನ್ ಡಕ್ ಆಗಿದ್ದರು.
ಇದಾದ ಬಳಿಕ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೋಲ್ಡನ್ ಡಕ್ ಆಗಿದ್ದರು, ಇದೀಗ ಅದೇ ತಂಡದ ವಿರುದ್ಧ ವಿರಾಟ್ ಶೂನ್ಯ ಸುತ್ತಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಈವರೆಗೂ ಇಂಡಿಯಲ್ ಪ್ರಿಮಿಯರ್ ಲೀಗ್ ನಲ್ಲಿ ಆರು ಬಾರಿ ಗೋಲ್ಡನ್ ಡಕ್ ಆಗಿದ್ದಾರೆ.
2008 ರಲ್ಲಿ ಮುಂಬೈ ವಿರುದ್ಧ ಆಶೀಸ್ ನೆಹ್ರಾ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿ ಶೂನ್ಯ ಸುತ್ತಿದ್ದರು.
ಇದಾದ ಬಳಿಕ 2014ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸಂದೀಪ್ ಶರ್ಮಾ ಬೌಲಿಂಗ್ ನಲ್ಲಿ, 2017 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಾಥನ್ ಕೋಲ್ಕರ್ ನೈಲ್ ಬೌಲಿಂಗ್ ನಲ್ಲಿ ವಿರಾಟ್ ಗೋಲ್ಡನ್ ಡಕ್ ಆಗಿದ್ದರು.
ಆದ್ರೆ 2022ರ ಐಪಿಎಲ್ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಮೊದಲು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ದುಶ್ಮಂತಾ ಚಮೀರಾ ಬೌಲಿಂಗ್ ನಲ್ಲಿ, ಎಸ್ ಆರ್ ಹೆಚ್ ವಿರುದ್ಧ ಮೊದಲು ಮಾರ್ಕೋ ಜಾನ್ಸನ್ ಬೌಲಿಂಗ್ ನಲ್ಲಿ, 54 ನೇ ಪಂದ್ಯದಲ್ಲಿ ಅದೇ ತಂಡದ ವಿರುದ್ಧ ಸುಚಿತ್ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆಗಿದ್ದಾರೆ.








