virat kohli-ಕೊಹ್ಲಿ ಎಂದೂ ಕಣ್ಣೀರಾಕಿಲ್ಲ.. ಇದೇ ಮೊದಲು
ಪವರ್ ಪ್ಲೇ ನಲ್ಲಿ ಪ್ರಮುಖ ಮೂರು ವಿಕೆಟ್.. ನಂತರದ ಓವರ್ ನಲ್ಲಿಯೇ ಮತ್ತೊಂದು ವಿಕೆಟ್.. ಪಾಕ್ ತಂಡದ ಮೇಲೆ ಗೆಲ್ಲೋ ಮುಖಾನಾ ಇವರದ್ದು ಅಂದುಕೊಂಡಿದ್ರು ಎಲ್ಲರು. ಆಗ ಶುರುವಾಯ್ತು ಕಿಂಗ್ ಕೊಹ್ಲಿಯ ಅಸಲಿಯಾಟ.
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿ ಹಲಿ ತಪ್ಪಿದ ಭಾರತದ ಇನ್ನಿಂಗ್ಸ್ ಅನ್ನು ವಿರಾಟ್ ಕೊಹ್ಲಿ ಟ್ರ್ಯಾಕ್ ತಂದರು.
ಕೊನೆಯ ಓವರ್ ನ ಕೊನೆಯ ಎಸೆತದವರೆಗೂ ಉಸಿರನ್ನ ಬಿಗಿ ಹಿಡಿಯುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಟೀಂ ಇಂಡಿಯಾ ಜಯಭೇರಿ ಬಾರಿಸಿತು.
ಈ ಥ್ರಿಲ್ಲಿಂಗ್ ಗೆಲುವಿನಲ್ಲಿ ಕಿಂಗ್ ವಿರಾಟ್ ಕೊಹ್ಲಿ ಪ್ರಮುಖ ಪಾತ್ರವಹಿಸಿದರು.
ಒಂದು ಹಂತದಲ್ಲಿ ಟೀಂ ಇಂಡಿಯಾದ ಸೋಲು ಶತಸಿದ್ಧ ಎನ್ನುವಂತಿದ್ದ ಪಂದ್ಯದಲ್ಲಿ ಹಾರ್ದಿಕ್ ಜೊತೆ ಸೇರಿ ವಿರಾಟ್ ವಿಶ್ವರೂಪ ತೋರಿಸಿದರು. ಅಲ್ಲದೆ ಪಂದ್ಯ ಗೆದ್ದ ಬಳಿಕ ವಿರಾಟ್ ಭಾವುಕರಾಗಿ ಕಣ್ಣೀರಾಕಿದರು.
ಈ ದೃಶ್ಯಗಳ ಬಗ್ಗೆ ಹರ್ಷ ಭೋಗ್ಲೆ ಟ್ವೀಟ್ ಮಾಡಿದ್ದು, ನಾನು ತುಂಬಾ ವರ್ಷಗಳಿಂದ ವಿರಾಟ್ ಕೊಹ್ಲಿಯನ್ನ ನೋಡುತ್ತಿದ್ದೇನೆ.

ಇಷ್ಟು ವರ್ಷಗಳಲ್ಲಿ ವಿರಾಟ್ ಕಣ್ಣೀರಾಕಿದ್ದು ಎಂದೂ ನೋಡಿರಲಿಲ್ಲ. ಆದ್ರೆ ಮೊದಲ ಬಾರಿ ಪಾಕ್ ವಿರುದ್ಧ ಪಂದ್ಯ ಗೆದ್ದ ಬಳಿಕ ನೋಡಿದ್ದೇನೆ. ಇದು ಎಂದೆಂದಿಗೂ ಮರೆಯಲಾಗದ ಘಟನೆ ಎಂದಿದ್ದಾರೆ.
ಅಂದ್ರೆ ಈ ಮ್ಯಾಚ್ ವಿರಾಟ್ ಕೊಹ್ಲಿ ಎಷ್ಟು ಮಹತ್ವದ್ದಾಗಿತ್ತು ಎಂಬೋದನ್ನ ಆ ಕಣ್ಣೀರ ನೋಡಿ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹರ್ಷ ಪರೋಕ್ಷವಾಗಿ ಹೇಳಿದ್ದಾರೆ.
ಮತ್ತೊಂದು ಕಡೆ ಮ್ಯಾಚ್ ಮುಗಿದ ಬಳಿಕ ವಿರಾಟ್ ಕೊಹ್ಲಿ ಕೆಲವು ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದರು. ಇದೊಂದು ಅದ್ಭುತವಾದ ಅನುಭವ, ನನಗೆ ಮಾತುಗಳೇ ಬರುತ್ತಿಲ್ಲ.
ಅಸಲಿಗೆ ಇದು ಹೇಗೆ ನಡೀತು ಎಂಬುದೇ ಗೊತ್ತಾಗುತ್ತಿಲ್ಲ.
ಕೊನೆಯವರೆಗೂ ಕ್ರೀಸ್ ನಲ್ಲಿದ್ದರೇ ಗೆಲುವು ಸಾಧಿಸಬಹುದು ಎಂದು ಹಾರ್ದಿಕ್ ನಂಬಿದ್ದ, ನಾವು ಅಂದುಕೊಂಡಿದ್ದೇ ಮಾಡಿ ತೋರಿಸಿದ್ದೇವೆ ಎಂದು ವಿರಾಟ್ ಸಂತಸ ವ್ಯಕ್ತಪಡಿಸಿದರು.








