Virat Kohli | ಭಾರತಕ್ಕೆ ವಿಶ್ವಕಪ್ ತರುವುದೇ ನನ್ನ ಧ್ಯೇಯ
ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ Virat Kohli ಕಳೆದ ಕೆಲವು ವರ್ಷಗಳಿಂದ ಬ್ಯಾಡ್ ಫಾರ್ಮ್ ನಲ್ಲಿರೋದು ಗೊತ್ತಿರುವ ವಿಚಾರವೇ. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ತೀವ್ರ ನಿರಾಸೆಯನ್ನುಂಟು ಮಾಡಿದ ವಿರಾಟ್ ಕೊಹ್ಲಿ, ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ಟೂರ್ ನಲ್ಲಿಯೂ ವಿರಾಟ್ ಕೊಹ್ಲಿVirat Kohli ಅಬ್ಬರಿಸಲಿಲ್ಲ. ಈಗ ವಿಂಡೀಸ್ ವಿರುದ್ಧದ ಸರಣಿಯಿಂದಲೂ ದೂರ ಇರುವ ವಿರಾಟ್ ಕೊಹ್ಲಿVirat Kohli ಏಷ್ಯ ಕಪ್ ಸಮಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಲ್ಲದೇ ಯು ಎ ಇ ವೇದಿಕೆಯಾಗಿ ಆಗಸ್ಟ್ 27 ರಿಂದ ಏಷ್ಯ ಕಪ್ ಆರಂಭವಾಗಲಿದೆ. ಒಟ್ಟು 6 ತಂಡಗಳು ಈ ಮೆಗಾ ಟೂರ್ನಿಯಲ್ಲಿ ಭಾಗವಹಿಸಲಿವೆ. ಈ ಸೀರಿಸ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ ಅನ್ನು ಸ್ಫೋರ್ಟ್ಸ್ ಚಾನೆಲ್ ಪಡೆದುಕೊಂಡಿದೆ.

ಇನ್ನು ಏಷ್ಯಾ ಕಪ್ ಗೆ ಸಂಬಂಧಿಸಿದಂತೆ ಸ್ಟಾರ್ ಸ್ಫೋರ್ಟ್ಸ್ ಟ್ವಿಟ್ಟರ್ ನಲ್ಲಿ ಒಂದು ಪ್ರೋಮೋ ಬಿಡುಗಡೆ ಮಾಡಿದೆ. ಅದೇ ರೀತಿ ಈ ಟೂರ್ನಿಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ Virat Kohli ಕೊಟ್ಟಿರುವ ಸ್ಟೆಟ್ ಮೆಂಟ್ ಅನ್ನ ಹಂಚಿಕೊಂಡಿದೆ. ಇದರಲ್ಲಿ ಟೀಂ ಇಂಡಿಯಾಗೆ ಏಷಿಯಾ ಕಪ್, ಟಿ 20 ವಿಶ್ವಕಪ್ ಗೆಲ್ಲಿಸಿಕೊಡುವುದೇ ನನ್ನ ಧ್ಯೇಯ. ಅದಕ್ಕಾಗಿ ನಾನು ಸಿದ್ಧನಾಗಿದ್ದೇನೆ ಎಂದಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ Virat Kohli ಏಷ್ಯಾ ಕಪ್ ನಲ್ಲಿ ಅತ್ಯಧಿಕ ರನ್ ಗಳನ್ನು ಬಾರಿಸಿದ ಬ್ಯಾಟರ್ ಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಏಕದಿನ, ಟಿ 20 ಮಾದರಿಯಲ್ಲಿ ಒಟ್ಟಾರೆ ವಿರಾಟ್ ಕೊಹ್ಲಿ 14 ಇನ್ನಿಂಗ್ಸ್ ಗಳಲ್ಲಿ 766 ರನ್ ಗಳಿಸಿದ್ದಾರೆ.








