ಯಾರಿದಂಲೂ ಅದು ಸಾಧ್ಯವಿಲ್ಲ : ರಹಾನೆ ಪರ ಕೊಹ್ಲಿ ಬ್ಯಾಟಿಂಗ್ Virat Kohli saaksha tv
ಟೀಂ ಇಂಡಿಯಾದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ನಲ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದಾರೆ.
ತವರಿನಲ್ಲಿ ನಡೆದ ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಹಾನೆ ಬ್ಯಾಟ್ ಸದ್ದು ಮಾಡಲೇ ಇಲ್ಲ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ತಂಡವನ್ನು ಮುನ್ನಡೆಸಿದರು.
ಆ ಪಂದ್ಯದಲ್ಲಿ ರಹಾನೆ ಎರಡೂ ಇನ್ನಿಂಗ್ಸ್ ಗಳಿಂದ ಕೇವಲ 39 ರನ್ ಗಳಿಸಿದ್ದರು.
ಹೀಗಾಗಿ ರಹಾನೆ ನೆಟ್ಟಿಗರಿಗೆ ಆಹಾರವಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರಹಾನೆ ಅವರನ್ನು ಟ್ರೋಲ್ ಮಾಡಲಾಗಿತ್ತು.
ಆಗಾಗ ನಾಯಕತ್ವ ವಹಿಸಲೆಂದೇ ರಹಾನೆ ಇನ್ನೂ ತಂಡದಲ್ಲಿದ್ದಾರೆ. ಅವರ ಬದಲಿಗೆ ಹೊಸಬರಿಗೆ ಚಾನ್ಸ್ ನೀಡಿದರೇ ಒಳ್ಳೆಯದು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಇದಲ್ಲದೇ ಇದೇ ಸಮಯದಲ್ಲಿ ಡೆಬ್ಯೂ ಮ್ಯಾಚ್ ನಲ್ಲಿ ಶ್ರೇಯಸ್ ಅಯ್ಯರ್ ಅಮೋಘ ಪ್ರದರ್ಶನ ತೋರಿದರು.
ಇದರಿಂದ ವಿರಾಟ್ ಕೊಹ್ಲಿ ಮತ್ತೆ ತಂಡಕ್ಕೆ ವಾಪಸ್ ಆದಾಗ ರಹಾನೆ ತಮ್ಮ ಸ್ಥಾನ ಕಳೆದುಕೊಳ್ಳುವಂತಾಯಿತು.
ಸದ್ಯ ಕಿವೀಸ್ ವಿರುದ್ಧದ ಸರಣಿ ಗೆದ್ದಿರುವ ಟೀಂ ಇಂಡಿಯಾ, ಮುಂದೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.
ಈ ಸರಣಿಗೆ ರಹಾನೆ ಅವರನ್ನು ಆಯ್ಕೆ ಮಾಡೋದು ಅನುಮಾನ ಎಂದು ಹೇಳಲಾಗುತ್ತಿದೆ.
ಜೊತೆಗೆ ರಹಾನೆ ಅವರನ್ನು ಟೆಸ್ಟ್ ತಂಡದ ಉಪನಾಯಕನ ಪಟ್ಟದಿಂದ ಕೆಳಗಿಳಿಸಿ ರೋಹಿತ್ ಅವರಿಗೆ ಆ ಸ್ಥಾನವನ್ನು ನೀಡಲಾಗುವುದು ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಮಧ್ಯೆ ರಹಾನೆ ಫಾರ್ಮ್ ಬಗ್ಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು, ಅಜಿಂಕ್ಯಾ ಪರ ಬ್ಯಾಟ್ ಬೀಸಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, “ನಾನು ಅಜಿಂಕ್ಯ ರಹಾನೆ ಫಾರ್ಮ್ ಅನ್ನು ತೀರ್ಮಾನಿಸಲಾಗಲ್ಲ.
ನನ್ನ ಪ್ರಕಾರ ಯಾರಿದಂಲೂ ಸಾಧ್ಯವಿಲ್ಲ. ಯಾವ ಪ್ರದೇಶದಲ್ಲಿ ಉತ್ತಮಗೊಳ್ಳಬೇಕೆಂಬುದು ಆ ಆಟಗಾರನಿಗೆ ಮಾತ್ರ ತಿಳಿದಿರುತ್ತದೆ.
ನಾವು ತಂಡ ಹಿಂದೆ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿದಾಗ ಆಕರ್ಷಕ ಪ್ರದರ್ಶನ ತೋರಿ ನೆರವಾಗಿದ್ದ ಆಟಗಾರರ ಬೆಂಬಲಕ್ಕೆ ನಿಲ್ಲಬೇಕಿದೆ ಎಂದು ಟೀಕಾಕಾರಿಗೆ ಟಾಂಗ್ ನೀಡಿದ್ದಾರೆ.
ಅಲ್ಲದೆ ಉತ್ತಮ ಪ್ರದರ್ಶನ ತೋರಿದಾಗ ಪ್ರಶಂಸಿಸುವ ಜನರೇ , ಎರಡೂ ತಿಂಗಳ ನಂತರ ಆ ಆಟಗಾರನನ್ನು ತಂಡದಿಂದ ಕೈಬಿಡಬೇಕೆನ್ನುತ್ತಾರೆ.
ಹೊರಗಿನ ಹೇಳಿಕೆಗಳನ್ನಾಧರಿಸಿ ಮ್ಯಾನೇಜ್ಮೆಂಟ್ ಯಾವುದೇ ಆಟಗಾರನನ್ನು ತಂಡದಿಂದ ಕೈಬಿಡುವುದಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ.









