virat kohli | ವಿಶ್ವ ದಾಖಲೆ ಬ್ರೇಕ್ ಮಾಡಿದ ವಿರಾಟ್
ಟಿ 20 ಕ್ರಿಕೆಟ್ ನ ಅಸಲಿ ಮಜಾ ಪಾಕ್ – ಇಂಡೋ ಪಂದ್ಯದೊಂದಿಗೆ ಸಿಕ್ಕಿದೆ.
ಕೊನೆಯ ನಿಮಿಷದವರೆಗೂ ರಣರೋಚಕವಾಗಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ ದಾಯಾದಿ ಪಾಕಿಸ್ತಾನ ತಂಡದ ವಿರುದ್ಧ 4 ವಿಕೆಟ್ ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
ಇದರೊಂದಿಗೆ ಕಳೆದ ಟಿ 20 ವಿಶ್ವಕಪ್, ಏಷ್ಯಾಕಪ್ ನಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಶ್ವರೂಪ ( 53 ಎಸೆತಗಳಲ್ಲಿ 80 ರನ್ ನಾಟೌಟ್ ) ಪ್ರದರ್ಶನದೊಂದಿಗೆ ಚೇಸಿಂಗ್ ತಾನೇ ಕಿಂಗ್ ಎಂದು ಸಾರಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ವಿರೋಚಿತ ಹೋರಾಟಕ್ಕೆ ಹಾರ್ದಿಕ್ ಪಾಂಡ್ಯ ಆಲ್ ರೌಂಡ್ ಪ್ರದರ್ಶನ ಕೂಡ ಜೊತೆಯಾಗಿ ಟೀಮ್ ಇಂಡಿಯಾಗೆ ಅಪರೂಪದ ಗೆಲುವು ದಕ್ಕಿದೆ.
ಇದು ಹೀಗಿದ್ದರೇ ಈ ಪಂದ್ಯದಲ್ಲಿ ಅವಿಸ್ಮರಣೀಯ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಎರಡು ವಿಶ್ವ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ಪ್ರಸ್ತುತ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಈ ಪಂದ್ಯದಲ್ಲಿ 43 ಎಸೆತಗಳಲ್ಲಿ ಹಾಫ್ ಸೆಂಚೂರಿ ಪೂರ್ಣಗೊಳಿಸಿದ ವಿರಾಟ್ ಕೊಹ್ಲಿ ಐಸಿಸಿ ಟೂರ್ನಿಗಳಲ್ಲಿ ಅತ್ಯಧಿಕ ಅರ್ಧಶತಕಗಳನ್ನು ಸಿಡಿಸಿದ ಆಟಗಾರರಾಗಿ ಸಚಿನ್ ದಾಖಲೆ ಮುರಿದಿದ್ದಾರೆ.
ಈ ಹಿಂದೆ ಈ ದಾಖಲೆ ಸಚಿನ್ ಹೆಸರಿನಲ್ಲಿತ್ತು. ಸಚಿನ್ ಐಸಿಸಿ ಟೂರ್ನಿಗಳಲ್ಲಿ 23 ಅರ್ಶಶತಕಗಳನ್ನು ಸಿಡಿಸಿದ್ದು, ವಿರಾಟ್ ಕೊಹ್ಲಿ 24 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಹಾಗೆ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ದಾಖಲೆಯನ್ನು ವಿರಾಟ್ ಬ್ರೇಕ್ ಮಾಡಿದ್ದಾರೆ.
ರೋಹಿತ್ ಶರ್ಮಾ ಇಲ್ಲಿಯವರೆಗೂ ಟಿ 20 ಕ್ರಿಕೆಟ್ ನಲ್ಲಿ 143 ಪಂದ್ಯಗಳನ್ನಾಡಿದ್ದು 3741 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ 110 ಇನ್ನಿಂಗ್ಸ್ ಗಳಲ್ಲಿ 3794 ರನ್ ಗಳಿಸಿ ಟಿ 20 ಕ್ರಿಕೆಟ್ ನಲ್ಲಿ ಟಾಪ್ ಸ್ಕೋರರ್ ಆಗಿದ್ದಾರೆ.








