ಶತಕ ದಾಖಲಿಸುವ ಮುನ್ನ ಪಡಿಕ್ಕಲ್, ನಾಯಕ ಕೊಹ್ಲಿಗೆ ಹೇಳಿದ್ದೇನು ? ಯುವ ಆಟಗಾರನಿಗೆ ಸ್ಪೂರ್ತಿಯಾದ ವಿರಾಟ್
ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ ಆರ್ ಸಿಬಿ ಹತ್ತು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಈ ಗೆಲುವಿನ ಹಿಂದೆ ಯುವ ಬ್ಯಾಟ್ಸ್ ಮೆನ್ ದೇವ್ ದತ್ ಪಡಿಕ್ಕಲ್ ಮತ್ತು ನಾಯಕ ವಿರಾಟ್ ಕೊಹ್ಲಿಯವರ ಸಮಯೋಚಿತ ಮತ್ತು ಬಿರುಸಿನ ಬ್ಯಾಟಿಂಗ್ ಆರ್ ಸಿಬಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿತ್ತು.
ಅದ್ರಲ್ಲೂ ದೇವ್ ದತ್ ಪಡಿಕ್ಕಲ್ ಅವರ ಮಹೋನ್ನತತ ಶತಕದ ಇನಿಂಗ್ಸ್ ಎಲ್ಲರ ಗಮನ ಸೆಳೆಯಿತ್ತು. 52 ಎಸೆತಗಳಲ್ಲಿ 11 ಬೌಂಡರಿ ಮತ್ತು ಆರು ಸಿಕ್ಸರ್ ಗಳನ್ನು ಸಿಡಿಸಿ ಅಜೇಯ 101 ರನ್ ದಾಖಲಿಸಿದ್ರು. ವಿರಾಟ್ ಕೊಹ್ಲಿ ಅಜೇಯ 72 ರನ್ ಗಳಿಸಿದ್ರು.
ನಾಯಕ ವಿರಾಟ್ ಕೊಹ್ಲಿಯವರ ಆಟ ಎಂಥವುದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಈ ಇನಿಂಗ್ಸ್ ನಲ್ಲಿ ವಿರಾಟ್ ಗಿಂತ ದೇವ್ ದತ್ ಇನಿಂಗ್ಸ್ ಹೆಚ್ಚು ಗಮನ ಸೆಳೆಯಿತ್ತು.
Virat Kohli reveals what Devdutt Padikkal told him over reaching 100-run mark
ರಾಜಸ್ತಾನ ರಾಯಲ್ಸ್ ತಂಡದ ಲೆಕ್ಕಚಾರಗಳನ್ನು ಬುಡಮೇಲು ಮಾಡಿದ್ದ ಕೊಹ್ಲಿ ಮತ್ತು ಪಡಿಕ್ಕಲ್ ಎದುರಾಳಿ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ರು.
ಅಷ್ಟೇ ಅಲ್ಲ, ಇನಿಂಗ್ಸ್ ನ ಕೊನೆಯ ತನಕ ಆಡುವ ಕಲೆಯನ್ನು ವಿರಾಟ್ ದೇವ್ ದತ್ ಪಡಿಕ್ಕಲ್ ಗೆ ಹೇಳಿಕೊಟ್ಟರು
ಇನ್ನೇನೂ ಕೊನೆಯ ಕ್ಷಣದಲ್ಲಿ ವಿರಾಟ್ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿದ್ರು. ಈ ವೇಳೆ ದೇವ್ ದತ್ ಪಡಿಕ್ಕಲ್ ಗೆ ಶತಕ ದಾಖಲಿಸುವ ಅವಕಾಶ ಕಳೆದುಹೋಗುತ್ತೆ ಅಂತ ಭಾಸವಾಗುತ್ತಿತ್ತು.
ಆದ್ರೆ ವಿರಾಟ್ ಹಾಗೇ ಮಾಡಲಿಲ್ಲ. ಶತಕದ ಸನೀಹಕ್ಕೆ ಬಂದಾಗ ವಿರಾಟ್ ದೇವ್‍ಗೆ ಸಲಹೆ ನೀಡಿದ್ರು. ಶತಕವನ್ನು ಪೂರೈಸು ಎಂದು. ಆಗ ತಂಡದ ಗೆಲುವಿನ ರನ್ ಕೂಡ ಸನೀಹದಲ್ಲಿತ್ತು. ಆಗ ದೇವ್, ವಿರಾಟ್ ಬಳಿ ನೀವೇ ಪಂದ್ಯವನ್ನು ಮುಗಿಸಿ. ಈ ರೀತಿಯ ಅವಕಾಶ ಬಂದೇ ಬರುತ್ತೆ ಎಂದು ದೇವ್ ಹೇಳಿದಾಗ ವಿರಾಟ್ ಒಪ್ಪಲಿಲ್ಲ. ಅದಕ್ಕೆ ಪ್ರತಿಯಾಗಿ ನೀನು ಪಂದ್ಯವನ್ನು ಮುಗಿಸಿದ ಮೇಲೆ ಈ ಮಾತು ಹೇಳು ಎಂದು ಸಲಹೆ ನೀಡಿ ದೇವ್ ದತ್ ಅವರನ್ನು ಚೊಚ್ಚಲ ಶತಕ ದಾಖಲಿಸುವಂತೆ ನಾಯಕ ವಿರಾಟ್ ಕೊಹ್ಲಿ ಮಾಡಿದ್ದರು. ಈ ವಿಚಾರವನ್ನು ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.
ಇದು ಒಬ್ಬ ನಾಯಕನ ಜವಾಬ್ದಾರಿ. ಯುವ ಆಟಗಾರರನ್ನು ಬೆಂಬಲಿಸುವುದು, ಸ್ಪೂರ್ತಿ ನೀಡುವುದು ನಾಯಕನ ಕರ್ತವ್ಯ ಎಂಬುದನ್ನು ವಿರಾಟ್ ಕೊಹ್ಲಿ ಸಾಬೀತುಪಡಿಸಿದ್ರು.