Virat Kohli : ಧೋನಿ ಬಿಟ್ಟು ಯಾರೂ ಮೆಸೇಜ್ ಮಾಡಿಲ್ಲ… ಹಿರಿಯ ಮೇಲೆ ಕಿಂಗ್ ಬೌನ್ಸರ್
ಕ್ರಿಕೆಟ್ ಮೈದಾನಲ್ಲಿ ಕಿಂಗ್ ವಿರಾಟ್ ಕೊಹ್ಲಿಯ ಜಲ್ವಾ ಶುರುವಾಗಿದೆ. ಕಿಂಗ್ ಕೊಹ್ಲಿ ಮತ್ತೆ ಬ್ಯಾಟ್ ಝಳಪಿಸಲು ಆರಂಭಿಸಿದ್ದು, ಏಷ್ಯಾಕಪ್ ನಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚುತ್ತಿದ್ದಾರೆ.
ಹಾಂಗ್ ಕಾಂಗ್ ವಿರುದ್ಧ ಅರ್ಧ ಶತಕ ಸಿಡಿಸಿದ ವಿರಾಟ್, ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಹಳೆಯ ಖದರ್ ತೋರಿಸಿದರು.
ತುಂಬಾ ದಿನಗಳ ಬಳಿಕ ವಿರಾಟ್ ಕೊಹ್ಲಿ ತಮ್ಮ ಟಚ್ ನಲ್ಲಿ ಕಾಣಿಸಿಕೊಂಡರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 44 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 4 ಬೌಂಡರ್ ಗಳೊಂದಿಗೆ 60 ರನ್ ಗಳಿಸಿದ್ರು.
ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಪ್ರೆಸ್ ಮೀಟ್ ನಲ್ಲಿ ಭಾಗಿಯಾಗಿದ್ರು. ಈ ವೇಳೆ ಕೆಲವು ಹೇಳಿಕೆಗಳನ್ನು ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೇ ಭಾರತ ಹಿರಿಯ ಕ್ರಿಕೆಟ್ ಆಟಗಾರರ ಮೇಲೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಅದರಲ್ಲೂ ಮುಖ್ಯವಾಗಿ ವಿರಾಟ್ ಕೊಹ್ಲಿ ಟೆಸ್ಟ್ ಕ್ಯಾಪ್ಟನ್ಸಿ ಬಿಟ್ಟಾಗ ಆಗಿದ್ದ ಅನುಭವವನ್ನು ಹಂಚಿಕೊಂಡರು.
ನಾನು ಟೆಸ್ಟ್ ಕ್ಯಾಪ್ಟನ್ಸಿ ತ್ಯಜಿಸಿದಾಗ ನನಗೆ ಕೇವಲ ಒಬ್ಬರಿಂದ ಮಾತ್ರ ಮೆಸೇಜ್ ಬಂತು. ಈ ಹಿಂದೆ ನಾನು ಎಷ್ಟೋ ಮಂದಿ ಕ್ರಿಕೆಟರ್ಸ್ ಜೊತೆ ಆಡಿದ್ದೇನೆ.
ತುಂಬಾ ಜನರ ಬಳಿ ನನ್ನ ಫೋನ್ ನಂಬರ್ ಇದೆ. ಆದ್ರೂ ಅವರು ಯಾರೂ ನನಗೆ ಸೌಜನ್ಯಕ್ಕೂ ಒಂದೇ ಒಂದು ಮೆಸೇಜ್ ಮಾಡಿಲ್ಲ. ಆದ್ರೆ ಟಿವಿ ಚರ್ಚೆಯಲ್ಲಿ ಮಾತ್ರ ನನಗೆ ಸಲಹೆಗಳನ್ನು ನೀಡಿದ್ರು.
ಇಷ್ಟಕ್ಕೂ ನನಗೆ ಮಸೇಜ್ ಮಾಡಿದ ಆ ವ್ಯಕ್ತಿ ಯಾರೆಂದರೇ ಎಂಎಸ್ ಧೋನಿ ! ನಿಜವಾಗಿಯೂ ನಮಗೆ ಒಬ್ಬರ ಬಗ್ಗೆ ಗೌರವ, ಮತ್ತು ಅವರು ಚೆನ್ನಾಗಿರಬೇಕು ಅಂತಾ ಮನಸಿನಲ್ಲಿದ್ದರೇ ಧೋನಿಯಂತೆ ನಡೆದುಕೊಳ್ಳುತ್ತಾರೆ.

ನಿಜ ಹೇಳಬೇಕಂದರೇ ನಾನು ಧೋನಿಯಿಂದ ಏನನ್ನೂ ಆಶಿಸುವುದಿಲ್ಲ. ಅವರು ಕೂಡ ಅಷ್ಟೆ, ನನ್ನಿಂದ ಏನೂ ಆಶೀಸುವುದಿಲ್ಲ.
ಧೋನಿ ಕ್ಯಾಪ್ಟನ್ಸಿಯಲ್ಲಿ ನಾನು. ನನ್ನ ಸಾರಥ್ಯದಲ್ಲಿ ಧೋನಿ ಆಡಿದಾಗ ನಾವು ಎಂದಿಗೂ ಅಭದ್ರತಾ ಭಾವನೆಯನ್ನು ಎದುರಿಸಿಲ್ಲ.
ನಾನು ಹೇಳುವುದು ಏನಂದರೇ ಒಬ್ಬರಿಗೆ ನಾವು ನಿಜವಾಗಿಯೂ ಒಳ್ಳೆಯದನ್ನ ಮಾಡಬೇಕು ಎಂದಿದ್ದರೇ ಅಥವಾ ಸಹಾಯ ಮಾಡಬೇಕು ಎಂದು ಭಾವಿಸಿದ್ರೆ ಅವರೊಂದಿಗೆ ವ್ಯಕ್ತಿಗತವಾಗಿ ಮುಕ್ತವಾಗಿ ಮಾತನಾಡಿ ಎಂದು ವಿರಾಟ್ ಕೊಹ್ಲಿ ಬೌನ್ಸರ್ ಹಾಕಿದರು.
ಅದು ಬಿಟ್ಟು ಟಿವಿ ಚರ್ಚೆಯಲ್ಲಿ ಪ್ರಪಂಚ ನೋಡುತ್ತಿರುವಾ ನನಗೆ ಸಲಹೆ ನೀಡಿದ್ರೆ ಏನೂ ಪ್ರಯೋಜನೆ ಆಗುವುದಿಲ್ಲ. ಅಂತವರಿಂದ ನನಗೆ ಯಾವುದೇ ಉಪಯೋಗವಿಲ್ಲ. ನೇರವಾಗಿ ಮಾತನಾಡಿದ್ರೆ ಎದುರು ನಿಂತಿರುವ ವ್ಯಕ್ತಿಯ ಪ್ರಾಮಾಣಿಕತೆ ಏನೆಂಬುದು ಗೊತ್ತಾಗುತ್ತದೆ.
ಟಿವಿಯಲ್ಲಿ ಪುಕ್ಕಟ್ಟೆ ಸಲಹೆ ನೀಡುವವರ ಬಗ್ಗೆ ನಾನು ಯೋಚಿಸುವುದಿಲ್ಲ. ಅವರ ಬುದ್ಧಿ ಎಂತಹದ್ದೋ ತುಂಬಾ ಜನರಿಗೆ ಅರ್ಧವಾಗಿರುತ್ತದೆ.
ದೇವರ ನಮಗೆ ಎಲ್ಲವನ್ನೂ ಕೊಡುತ್ತಾರೆ. ಗೆಲುವಿನ ಕಡೆ ಹೋಗಲು ದಾರಿ ತೋರಿಸುತ್ತಾರೆ. ಆದ್ರೆ ಅದನ್ನ ನಾವು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಅನ್ನೋದು ನಮ್ಮ ಕೈಯಲ್ಲಿ ಇರುತ್ತದೆ ಎಂದಿದ್ದಾರೆ ವಿರಾಟ್ ಕೊಹ್ಲಿ.