Virat Kohli Sledging : ಕೊಹ್ಲಿ ಆ ಮಾತಿಗೆ ಉರಿದು ಬಿದ್ದ ಬೈರ್ ಸ್ಟೋ
ಎಡ್ಜ್ ಬಾಸ್ಟನ್ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ.
ಸದ್ಯ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಮೂರು ವಿಕೆಟ್ ಕಳೆದುಕೊಂಡು 125 ರನ್ ಗಳಿಸಿದೆ.
ಇತ್ತ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಬ್ಯಾಟರ್ ಗಳು ತಡವಡಿಸಿದ್ರು.
ಆದ್ರೂ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜಾನಿ ಬೈರ್ ಸ್ಟೋ ಸೆಂಚೂರಿ ಸಿಡಿಸಿ ಅಬ್ಬರಿಸಿದರು.
ಆದ್ರೆ ಶಮಿ ಎಸೆದ 32ನೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ಬೈರ್ ಸ್ಟೋ ನಡುವೆ ಮಾತಿನ ಯುದ್ಧ ನಡೆಯಿತು.
ಶಮಿ ಬೌಲಿಂಗ್ ನಲ್ಲಿ ಬ್ಯಾಟ್ ಬೀಸಲು ಬೈರ್ ಪರದಾಡುತ್ತಿದ್ದರು. ಈ ವೇಳೆ ಸ್ಲಿಪ್ ನಲ್ಲಿದ್ದ ವಿರಾಟ್ ಕೊಹ್ಲಿ ಜೋರಾಗಿ ನಕ್ಕಿದ್ದರು.
ಅಲ್ಲದೇ ಸೌಥಿ ಗಿಂತ ಶಮಿ ಜೋರಾಗಿ ಬಾಲ್ ಎಸೆಯುತ್ತಿದ್ದಾನೆ ಅಲ್ವಾ..? ಎಂದು ಕಮೆಂಟ್ ಮಾಡಿದರು.
ಇಷ್ಟಕ್ಕೆ ಸುಮ್ಮನಾಗದೇ ನಿನಗೆ ಬಾಲ್ ಬಿಟ್ಟು ಬೇರೆ ಎಲ್ಲಾ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಕೊಹ್ಲಿ ಸೆಡ್ಜಿಂಗ್ ಮಾಡಿದರು.
ಇದಕ್ಕೆ ಬೈರ್ ಸ್ಟೋ ಕೂಡ ಸ್ಪಂದಿಸಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ತುಸು ಕಾಲ ವಾಗ್ವಾದ ನಡೆಯಿತು.
ಫೀಲ್ಡ್ ಅಂಪೈರ್, ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಈ ಜಗಳವನ್ನು ನಿಲ್ಲಿಸಿದ್ರು.
ಈ ಸಂದರ್ಭದಲ್ಲಿ ಬೈರ್ ಸ್ಟೋ 60 ಎಸೆತಗಳಲ್ಲಿ 13 ರನ್ ಗಳಿಸಿದ್ದರು.
ಆದ್ರೆ ಈ ಘಟನೆಯ ನಂತರ ಬೈರ್ ಸ್ಟೋ ಅಬ್ಬರದ ಇನ್ನಿಂಗ್ಸ್ ಆಡಿ ಸೆಂಚೂರಿ ದಾಖಲಿಸಿದರು.