Virat kohli | ಕ್ರೇಜ್ ಕಾ ಬಾಪ್ ವಿರಾಟ್ ಕೊಹ್ಲಿ..!
ಟಿ20 ವಿಶ್ವಕಪ್-2022 ಟೂರ್ನಿಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ.
ಈ ಮೆಗಾ ಈವೆಂಟ್ ಅಕ್ಟೋಬರ್ 16 ರಿಂದ ಆರಂಭವಾಗಿ ನವೆಂಬರ್ 13 ರವರೆಗೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಇದರ ಪ್ರಮೋಷನ್ ಭಾಗವಾಗಿ ಐಸಿಸಿ ಭಾನುವಾರ ಒಂದು ವಿಡಿಯೋ ಬಿಡುಗಡೆ ಮಾಡಿದೆ.
ದಿಸ್ ಈಜ್ ಬಿಗ್ ಟೈ ಎಂಬ ಹೆಸರಿನಲ್ಲಿ ಪ್ರಮೋಷನ್ ಕ್ಯಾಂಪೇನ್ ಆರಂಭಿಸಿದೆ. ಜೊತೆಗೆ ಟಿಕೆಟ್ ಲಭ್ಯ ಎಂದಿದೆ.
“ನೀವು ಎಂದಾದರೂ ಅಂತಹ ದೊಡ್ಡ ಗ್ಲೆನ್ ಮ್ಯಾಕ್ಸ್ವೆಲ್ ಅನ್ನು ನೋಡಿದ್ದೀರಾ?” ಪ್ರಮುಖ ಆಟಗಾರರು… ದೊಡ್ಡ ದೊಡ್ಡ ತಂಡಗಳು ಟಿ 20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ಬರುತ್ತಿವೆ ಎಂದು ಶೀರ್ಷಿಕೆಯೊಂದಿಗೆ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ.
ಇನ್ನು ವಿಡಿಯೋದಲ್ಲಿ ದೊಡ್ಡ ಸ್ಟಾರ್ಸ್ ಎನ್ನುತ್ತಾ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಅವರನ್ನ ತೋರಿಸಲಾಗಿದೆ.
https://www.instagram.com/tv/Cadh45CF0qt/?utm_source=ig_web_copy_link
ಈ ವಿಡಿಯೋಗೆ ನೆಟಿಜನ್‌ಗಳು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಭಯ್ಯಾ ಈಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ.. ಕೊಹ್ಲಿ ಅಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಬದಲಿಗೆ.. ‘‘ಎರಡು ವರ್ಷಗಳಿಂದ ಒಂದೇ ಒಂದು ಶತಕ ಬರಿಸಿಲ್ಲ.. ಎಲ್ಲ ಫಾರ್ಮೆಟ್‌ಗಳ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ.. ಆದ್ರೂ ಭಾರತದ ಜೆರ್ಸಿಯಲ್ಲಿ ಕೊಹ್ಲಿ ಕಾಣಿಸಿಕೊಂಡ್ರೆ ಅದರ ಕಿಕ್ ಏ ಬೇರೆ! ಅವರ ಬ್ರ್ಯಾಂಡ್ ವ್ಯಾಲ್ಯೂ ಅಂಥದ್ದು..! ವಿರಾಟ್ ಕ್ರೇಜ್ ಕಾ ಬಾಪ್ ಎನ್ನುತ್ತಾ ಕೊಹ್ಲಿ ಅಭಿಮಾನಿಗಳು ಕಮೆಂಟ್ ಗಳನ್ನ ಮಾಡುತ್ತಿದ್ದಾರೆ. virat-kohli-t20-wc-2022-promo saaksha tv








