ಯಾರೇನೇ ಟೀಕಿಸಿದ್ರೂ ಕೊಹ್ಲಿ ಒನ್ ಅಂಡ್ ಓನ್ಲಿ ಮಾಸ್ಟರ್ ಪೀಸ್
ಟೀಂ ಇಂಡಿಯಾದ ಟೈಗರ್, ವಿಶ್ವ ಕ್ರಿಕೆಟ್ ನ ಮಾಸ್ಟರ್, ಟೀಂ ಇಂಡಿಯಾ ಆಟಗಾರರ ಪಾಲಿನ ಬೂಸ್ಟರ್ ಒನ್ ಅಂಡ್ ಓನ್ಲಿ ಕಿಂಗ್ ವಿರಾಟ್ ಕೊಹ್ಲಿ..
ಹೌದು..! ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಗರ್ಭಗುಡಿ ಪ್ರವೇಸಿದ ಸಂದರ್ಭದಲ್ಲಿ ತಂಡದಲ್ಲಿ ಘಟಾನುಘಟಿ ಆಟಗಾರರ ದಂಡೇ ಇತ್ತು.
ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಎಂಎಸ್ ಧೋನಿ, ವೀರೆಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹೀಗೆ ದಿಗ್ಗಜ ಆಟಗಾರರನೇ ಟೀಂ ಇಂಡಿಯಾದ ಆಸ್ತಿಯಾಗಿದ್ದರು.
ಈ ಆಟಗಾರರ ಮಧ್ಯೆ ಸಣ್ಣದೊಂದು ಜಾಗಮಾಡಿಕೊಂಡು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ವಿರಾಟ್ ಕೊಹ್ಲಿ, ಯಾರೂ ಊಹಿಸದ ರೀತಿಯಲ್ಲಿ ಬೆಳೆದು ನಿಂತರು.
ಸ್ವತಃ ಕ್ರಿಕೆಟ್ ದೇವರು ಸಚಿನ್ ತೆಂಡ್ಯುಲ್ಕರ್ ಅವರೇ ವಿರಾಟ್ ಕೊಹ್ಲಿ ನನ್ನ ದಾಖಲೆಗಳನ್ನು ಮುರಿಯಬಲ್ಲ ಆಟಗಾರ ಎಂದು ಆಕಾಶಕ್ಕೆತ್ತಿದರು.
ಒಬ್ಬ ಬ್ಯಾಟ್ಸ್ ಮೆನ್ ಆಗಿ ವಿರಾಟ್ ಸಾಕಷ್ಟು ದಾಖಲೆಗಳನ್ನು ಮಾಡಿದ್ದಾರೆ. ಟೀಂ ಇಂಡಿಯಾ ಟೈಗರ್ ಆಗಿ ದೇಶ ವಿದೇಶಗಳಲ್ಲಿ ಘರ್ಜಿಸಿದ್ದಾರೆ.
ಇದಾದ ಬಳಿಕ 2014ರಲ್ಲಿ ವಿರಾಟ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಬಂತು.
ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಮೊದಲೇ ಮುನ್ನಡೆಸಿದ್ದರೂ ಪೂರ್ಣ ಪ್ರಮಾಣದ ನಾಯಕರಾಗಿದ್ದು, ಆಸ್ಟ್ರೇಲಿಯಾದಲ್ಲಿ ಅದು ಟೆಸ್ಟ್ ಸರಣಿಯಲ್ಲಿ..!
ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕರಾಗುತ್ತಿದ್ದಂತೆ ತಂಡದ ಖದರ್ ಬದಲಾಗಿತ್ತು. ಸೋತು ಸೋತು ಮಂಕಾಗಿದ್ದ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ಎನರ್ಜಿ ತುಂಬಿದರು.
ವಿದೇಶದಲ್ಲಿಯೂ ತಂಡ ಆಕ್ರಮಣಕಾರಿಯಾಗಿ ಎದುರಾಳಿಗಳ ಮೇಲೆ ಮುಗಿಬೀಳುವಂತೆ ಮಾಡಿದರು.
ಪರಿಣಾಮ ವಿದೇಶದಲ್ಲಿಯೂ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವಂತೆ ಮಾಡಿದ್ರು.
ಜೊತೆಗೆ ಬ್ಯಾಟಿಂಗ್ ನಲ್ಲಿಯೂ ಮಿಂಚಿದ್ದ ವಿರಾಟ್ ವಿಶ್ವ ಕ್ರಿಕೆಟ್ ನ ಮಾಸ್ಟರ್ ಆಗಿ ಬೆಳೆದರು.
ಮುಖ್ಯವಾಗಿ ವಿರಾಟ್ ಕೊಹ್ಲಿ ನಾಯಕರಾಗಿದ್ದರೇ ಅಲ್ಲಿ ತಂಡದ ಬಾಡಿ ಲಾಂಗ್ವೇಜ್ ಬದಲಾಗುತ್ತಿತ್ತು. ಯುವ ಆಟಗಾರರು ತುಂಬಾ ಮುಕ್ತವಾಗಿ ಯಾವುದೇ ಹಂಗಿಲ್ಲದೇ ಮೈದಾನದಲ್ಲಿ ಅಬ್ಬರಿಸುತ್ತಿದ್ದರು.
ಹಾಗೇ ನೋಡಿದರೇ ವಿರಾಟ್ ಕೊಹ್ಲಿ ಸ್ವಭಾವವೇ ಯುವಕರಿಗೆ ಸ್ಫೂರ್ತಿ ನೀಡುತ್ತಿತ್ತು. ಮೈದಾನದಲ್ಲಿ ವಿರಾಟ್ ಆಕ್ರಮಣಕಾರಿ ಪ್ರೌರುತ್ತಿ ಉಳಿದ ಆಟಗಾರರಿಗೆ ಬೂಸ್ಟ್ ನೀಡುತ್ತಿತ್ತು.
ಎದುರಾಳಿಗೆ ಅವರ ಶೈಲಿಯಲ್ಲಿಯೇ ವಿರಾಟ್ ಉತ್ತರ ನೀಡುತ್ತಿದ್ದರು. ಮುಖ್ಯವಾಗಿ ಭಾರತೀಯ ಬೌಲರ್ ಗಳು ಇತ್ತೀಚೆಗೆ ವಿದೇಶ ಪಿಚ್ ಗಳಲ್ಲಿ ಅಬ್ಬರಿಸುತ್ತಿದ್ದರೆಂದರೇ ಅದಕ್ಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿ ನಾಯಕತ್ವ..!
ಹೌದು..! ವಿರಾಟ್ ಕೊಹ್ಲಿ ಕೇವಲ ತಂಡದ ನಾಯಕರಾಗಿ ಇರಲಿಲ್ಲ. ಇಡೀ ತಂಡದ ಆಟಗಾರರ ಬೆನ್ನೆಲುಬಾಗಿದ್ದರು.
ಯಾವುದೇ ಹಂತದಲ್ಲೂ ತಂಡದ ಆಟಗಾರರನ್ನು ಬಿಟ್ಟುಕೊಡದ ವಿರಾಟ್ ಸ್ವಭಾವಕ್ಕೆ ಇತರೆ ಆಟಗಾರರು ಪಿಧಾ ಆಗಿದ್ದರು.
ಅಂದಹಾಗೆ ವಿರಾಟ್ ಕೊಹ್ಲಿ ಮೇಲೆ ಒಂದು ಅಪವಾದವನ್ನು ಹೇರಲಾಗುತ್ತಿದೆ. ಅದೆನೆಂದರೇ ವಿರಾಟ್ ತಂಡದ ಇತರ ಆಟಗಾರರ ಮೇಲೆ ಎಗರಾಡುತ್ತಾರೆ.
ಅವರಿಗೆ ನಾಯಕನಿಗೆ ಇರಬೇಕಾದ ಗುಣಗಳಿಲ್ಲ. ಅವರು ಇವರಿಗೆ ಹೊಂದಾಣಿಕೆ ಆಗೋದಿಲ್ಲ, ಅವರ ಮಾತು ಕೇಳಲ್ಲ. ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ, ದುರಂಹಕಾರಿ ಎಂದೆಲ್ಲಾ ಅವರ ಮೇಲೆ ಆರೋಪಗಳನ್ನು ಮಾಡಲಾಗುತ್ತದೆ.
ಆದ್ರೆ ಇದಕ್ಕೆಲ್ಲಾ ವಿರಾಟ್ ಎಂದೂ ತಲೆಕೆಡಿಸಿಕೊಂಡಿಲ್ಲ. ಯಾಕಂದರೇ ಅವರು ತಂಡದ ಯಶಸ್ಸಿನ ಬಗ್ಗೆ ಮಾತ್ರ ತಲೆಕಡೆಸಿಕೊಳ್ಳುತ್ತಿದ್ದರು.
ತಂಡದ ಒಳಿತಿಗಾಗಿಯೇ ಅವರು ಶ್ರಮಿಸುತ್ತಿದ್ದರು. ಹಾಗೇ ನೋಡಿದ್ರೆ ಅನ್ ದಿ ಫೀಲ್ಡ್ ಅಥವಾ ಆಫ್ ದಿ ಫೀಲ್ಡ್ , ಆನ್ ರೆಕಾರ್ಡ್ ಅಥವಾ ಆಫ್ ದಿ ರೆಕಾರ್ಡ್, ಕೊಹ್ಲಿ ನಾಯಕತ್ವದಲ್ಲಿ ಆಡಿದ ಯಾವೊಬ್ಬ ಆಟಗಾರನೂ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ.
ಯಾಕಂದರೇ ವಿರಾಟ್ ಎಂದಿಗೂ ಸಹ ಆಟಗಾರರ ಜೊತೆಗೆ ಲವಲವಿಕೆಯಿಂದಲೇ ಇದ್ದರೂ. ನಾಯಕ ಎಂಬ ಅಹಂ ಬಿಟ್ಟು ಎಲ್ಲರಲ್ಲೂ ಒಬ್ಬರಂತೆ ಎಲ್ಲರೂ ಒಬ್ಬರೇ ಆಗಿದ್ದರು.
ಬಹುಶಃ ಕೊಹ್ಲಿಯ ಈ ಸ್ವಭಾವವೇ ವಿರಾಟ್ ನಾಯಕರಾಗಿ ಯಶಸ್ಸು ಕಾಣಲು ಕಾರಣವಾಗಿದೆ ಅನಿಸುತ್ತದೆ.
ಅದು ಏನೇ ಇರಲಿ.. ವಿರಾಟ್ ಕೊಹ್ಲಿ ಈಗ ಎಲ್ಲ ಮಾದರಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರು ಇನ್ಮುಂದೆ ತಂಡದ ಒಬ್ಬ ಸಾಮಾನ್ಯ ಆಟಗಾರರಾಗಿ ತಂಡದಲ್ಲಿ ಇರಲಿದ್ದಾರೆ.
ವಿರಾಟ್ ಕೊಹ್ಲಿ ಸಡನ್ ನಿರ್ಧಾರ ಕೋಟ್ಯಂತರ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ.
ಆದ್ರೆ ಮುಂದೆ ಯಾರಾದರೂ ಟೀಂ ಇಂಡಿಯಾದ ನಾಯಕತ್ವದ ಬಗ್ಗೆ ಮಾತನಾಡಿದ್ರೆ ಅಲ್ಲಿ ವಿರಾಟ್ ಕೊಹ್ಲಿಗೆ ಪ್ರತ್ಯೇಕ ಸ್ಥಾನವನ್ನುಂತೂ ಇದ್ದೇ ಇರುತ್ತದೆ.










