ಟೀಮ್ ಇಂಡಿಯಾದ ಯಶಸ್ವಿ ನಾಯಕ.. ಆದ್ರೆ ಟಾಸ್ ವಿಚಾರದಲ್ಲಿ ನತದೃಷ್ಟ ವಿರಾಟ್ ಕೊಹ್ಲಿ..!
Virat Kohli the unluckiest captain ever in terms of toss record
ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ ನ ಆಕ್ರಮಣಕಾರಿ ಪ್ರವೃತ್ತಿಯ ನಾಯಕ. ಟೀಮ್ ಇಂಡಿಯಾದ ಯಶಸ್ವಿ ಕ್ಯಾಪ್ಟನ್. ಸಹ ಆಟಗಾರರ ನೆಚ್ಚಿನ ಸಾರಥಿ.. ವಿಶ್ವ ಕ್ರಿಕೆಟ್ ನ ರನ್ ಮೇಷಿನ್. ಚೇಸಿಂಗ್ ಗಾಡ್.. ದಾಖಲೆಗಳ ಸರದಾರ.. ಆಧುನಿಕ ಕ್ರಿಕೆಟ್ ನ ಅತ್ಯಬ್ಧುತ ಆಟಗಾರ. ಹೀಗೆ ವಿರಾಟ್ ಕೊಹ್ಲಿಯವರನ್ನು ಬಣ್ಣಿಸಲು ಹೊರಟ್ರೆ ಸಾಕಷ್ಟಿದೆ.
ಆದ್ರೆ ವಿರಾಟ್ ಕೆಲವು ವಿಚಾರದಲ್ಲಿ ನತದೃಷ್ಟ.. ನಾಯಕನಾಗಿ ಐಪಿಎಲ್ ನಲ್ಲಿ ಆರ್ ಸಿಬಿ ಪರ 13 ವರ್ಷಗಳಿಂದ ಆಡಿದ್ರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಐಸಿಸಿ ಮಹತ್ವದ ಟೂರ್ನಿಗಳಲ್ಲೂ ಪ್ರಶಸ್ತಿ ಗೆದ್ದಿಲ್ಲ.
ಇದನ್ನು ಹೊರತುಪಡಿಸಿ ಈ ಒಂದು ವಿಚಾರದಲ್ಲೂ ನತದೃಷ್ಟ. ಹೌದು, ಕ್ರಿಕೆಟ್ ಪಂದ್ಯದ ಮಹತ್ವದ ಟಾಸ್ ವಿಚಾರದಲ್ಲಿ ವಿರಾಟ್ ಕೊಹ್ಲಿ ಅದೃಷ್ಟವೇ ಒಲಿದು ಬಂದಿಲ್ಲ. ಹಾಗಂತ ಟಾಸ್ ಸೋತ್ರೂ ಪಂದ್ಯವನ್ನು ಗೆದ್ದುಕೊಂಡು ಟೀಮ್ ಇಂಡಿಯಾವನ್ನು ಗೆಲುವಿನ ಅಲೆಯಲ್ಲಿ ತೇಲಾಡುವಂತೆ ಮಾಡಿದ್ದಾರೆ.
ಹೌದು, ನಾಯಕನಾಗಿ ವಿರಾಟ್ ಕೊಹ್ಲಿ ಟಾಸ್ ಸೋತಿರುವ ನಾಯಕರ ಪಟ್ಟಿಯಲ್ಲೂ ಮುಂಚೂಣಿಯಲ್ಲಿದ್ದಾರೆ.
ಅಂದ ಹಾಗೇ ಇತ್ತೀಚೆಗೆ ನಡೆದ 12 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಟಾಸ್ ಗೆದ್ದಿದ್ದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ. ಇನ್ನುಳಿದ ಹತ್ತು ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಒಟ್ಟು 200 ಬಾರಿ ಮುನ್ನಡೆಸಿದ್ದಾರೆ. ಇದ್ರಲ್ಲಿ ವಿರಾಟ್ ಕೊಹ್ಲಿ 85 ಪಂದ್ಯಗಳಲ್ಲಿ ಟಾಸ್ ಗೆದ್ರೆ, 115 ಬಾರಿ ಟಾಸ್ ಸೋತಿದ್ದಾರೆ.
ಹಾಗೇ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 332 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, 158 ಬಾರಿ ಟಾಸ್ ಗೆದ್ರೆ, 174 ಬಾರಿ ಟಾಸ್ ಸೋತಿದ್ದಾರೆ.
ಇನ್ನೊಬ್ಬ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ 221 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದ್ರಲ್ಲಿ
ಅಜರುದ್ದೀನ್ 125 ಬಾರಿ ಟಾಸ್ ಗೆದ್ರೆ, 96 ಬಾರಿ ಟಾಸ್ ಸೋತಿದ್ದಾರೆ.
ಟೀಮ್ ಇಂಡಿಯಾದ ರೂವಾರಿ ಸೌರವ್ ಗಂಗೂಲಿ 195 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 95 ಬಾರಿ ಟಾಸ್ ಗೆದ್ರೆ, 100 ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ.
ಮಾಜಿ ನಾಯಕ 1983ರ ವಿಶ್ವಕಪ್ ಹೀರೋ ಕಪಿಲ್ ದೇವ್ 108 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 54 ಬಾರಿ ಟಾಸ್ ಗೆದ್ರೆ, 54 ಬಾರಿ ಟಾಸ್ ಸೋತಿದ್ದಾರೆ.
ಹಾಗೇ ನಮ್ಮ ರಾಹುಲ್ ದ್ರಾವಿಡ್ 104 ಬಾರಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, 61 ಬಾರಿ ಟಾಸ್ ಗೆದ್ದಿದ್ರೆ, 43 ಬಾರಿ ಟಾಸ್ ಸೋತಿದ್ದಾರೆ. ಈ ಪೈಕಿ ಟಾಸ್ ವಿಚಾರದಲ್ಲಿ ರಾಹುಲ್ ದ್ರಾವಿಡ್ ಅದೃಷ್ಟದ ನಾಯಕನಾದ್ರೆ, ಸರಾಸರಿ ಲೆಕ್ಕಚಾರದಲ್ಲಿ ವಿರಾಟ್ ಕೊಹ್ಲಿ ನತದೃಷ್ಟ. ಹಾಗೇ ನೋಡಿದ್ರೆ, ಟಾಸ್ ಸೋಲು ಗೆಲುವಿನ ಲೆಕ್ಕಚಾರದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರು ಅಷ್ಟೊಂದು ಅದೃಷ್ಟವಂತರಲ್ಲ.
ಇನ್ನು ವಿರಾಟ್ ಕೊಹ್ಲಿಯವರ ಮೂರು ಮಾದರಿಯ ಕ್ರಿಕೆಟ್ ನ ಟಾಸ್ ಗೆಲುವು- ಸೋಲಿನ ಅಂಕಿ ಅಂಶಗಳು ಹೀಗಿವೆ.
ಟೆಸ್ಟ್ ಕ್ರಿಕೆಟ್ ನಲ್ಲಿ 60 ಪಂದ್ಯಗಳಲ್ಲಿ 27 ಬಾರಿ ಟಾಸ್ ಗೆದ್ರೆ, 33 ಬಾರಿ ಟಾಸ್ ಸೋತಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ 95 ಪಂದ್ಯಗಳಲ್ಲಿ 40 ಬಾರಿ ಟಾಸ್ ಗೆದ್ರೆ, 55 ಬಾರಿ ಸೋತಿದ್ದಾರೆ.
ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ 45 ಪಂದ್ಯಗಳಲ್ಲಿ 18 ಬಾರಿ ಗೆದ್ರೆ, 27 ಬಾರಿ ಟಾಸ್ ಸೋತಿದ್ದಾರೆ.
ಟಾಸ್ ಸೋಲು ಗೆಲುವಿನ ಐದು ನಾಯಕರಲ್ಲಿ ವಿರಾಟ್ ಗೆ ಕೊನೆಯ ಸ್ಥಾನ
ಪ್ರಸ್ತುತ ವಿಶ್ವ ಕ್ರಿಕೆಟ್ ನಲ್ಲಿ ಟಾಸ್ ಗೆಲುವು ಹಾಗೂ ಸೋತಿರುವ ನಾಯಕರ ಸಾಲಿನ ಟಾಪ್ ಫೈವ್ ನಲ್ಲಿ ವಿರಾಟ್ ಕೊಹ್ಲಿ ಐದನೇ ಸ್ಥಾನದಲ್ಲಿ ನಿಲ್ಲುತ್ತಾರೆ.
ವೆಸ್ಟ್ ಇಂಡೀಸ್ ನ ಕಿರಾನ್ ಪೊಲಾರ್ಡ್ 34 ಪಂದ್ಯಗಳಲ್ಲಿ 18 ಬಾರಿ ಟಾಸ್ ಗೆದ್ರೆ, 16 ಬಾರಿ ಟಾಸ್ ಸೋತಿದ್ದಾರೆ.
ಇಂಗ್ಲೆಂಡ್ ನ ಇಯಾನ್ ಮೊರ್ಗಾನ್ 180 ಪಂದ್ಯಗಳಲ್ಲಿ 91 ಬಾರಿ ಟಾಸ್ ಗೆದ್ರೆ, 89 ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ.
ಆಸ್ಟ್ರೇಲಿಯಾದ ಆರೋನ್ ಫಿಂಚ್ 85 ಪಂದ್ಯಗಳಲ್ಲಿ 42 ಬಾರಿ ಟಾಸ್ ಗೆದ್ರೆ, 43 ಬಾರಿ ಟಾಸ್ ಸೋತಿದ್ದಾರೆ.
ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ 161 ಪಂದ್ಯಗಳಲ್ಲಿ 75 ಬಾರಿ ಟಾಸ್ ಗೆದ್ರೆ, 86 ಬಾರಿ ಟಾಸ್ ಸೋತಿದ್ದಾರೆ.
ಶ್ರೀಲಂಕಾದ ಕರುಣರತ್ನೆ 28 ಪಂದ್ಯಗಳಲ್ಲಿ 13 ಬಾರಿ ಟಾಸ್ ಗೆದ್ರೆ, 15 ಬಾರಿ ಟಾಸ್ ಸೋತಿದ್ದಾರೆ.
ವಿರಾಟ್ ಕೊಹ್ಲಿ 200 ಪಂದ್ಯಗಳಲ್ಲಿ 85 ಬಾರಿ ಟಾಸ್ ಗೆದ್ರೆ, 115 ಬಾರಿ ಟಾಸ್ ಸೋತಿದ್ದಾರೆ.
ಇನ್ನು ಅಂಕಿ ಅಂಶಗಳ ಪ್ರಕಾರ ವಿಶ್ವ ಕ್ರಿಕೆಟ್ನಲ್ಲಿ ಟಾಸ್ ಸೋತಿರುವ ನತದೃಷ್ಟದ ನಾಯಕರ ಸಾಲಿನಲ್ಲೂ ವಿರಾಟ್ ಕೊಹ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.
ವಿರಾಟ್ ಕೊಹ್ಲಿ 200 ಪಂದ್ಯಗಳಲ್ಲಿ 115 ಬಾರಿ ಟಾಸ್ ಸೋತ್ರೆ, 85 ಬಾರಿ ಟಸ್ ಗೆದ್ದಿದ್ದಾರೆ.
ವೆಸ್ಟ್ ಇಂಡೀಸ್ ನ ರಿಚಿ ರಿಚರ್ಡಸನ್ 155 ಪಂದ್ಯಗಳಲ್ಲಿ 66 ಬಾರಿ ಟಾಸ್ ಗೆದ್ದಿದ್ದು, 89 ಬಾರಿ ಟಾಸ್ ಸೋತಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ 139 ಪಂದ್ಯಗಳಲ್ಲಿ 77 ಬಾರಿ ಟಾಸ್ ಸೋತ್ರೆ, 62 ಬಾರಿ ಟಾಸ್ ಗೆದ್ದಿದ್ದಾರೆ.
ವೆಸ್ಟ್ ಇಂಡೀಸ್ನ ಬ್ರಿಯಾನ್ ಲಾರಾ 172 ಪಂದ್ಯಗಳಲ್ಲಿ 77 ಬಾರಿ ಟಾಸ್ ಗೆದ್ರೆ, 95 ಬಾರಿ ಟಾಸ್ ಸೋತಿದ್ದಾರೆ.








