Virat Kohli : ವೃಂದಾವನದಲ್ಲಿ ವಿರಾಟ್, ಅನುಷ್ಕಾ; ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ…
ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ನಟಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾ ಅವರೊಂದಿಗೆ ಮಥುರಾದ ವೃಂದಾವನದಲ್ಲಿರುವ ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಕಟುಂಬ ಸಮೇತ ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ದುಬೈ, ಯುಎಇ ನಲ್ಲಿದ್ದ ಜೋಡಿ ನಂತರ, ಬಾಬಾ ನೀಮ್ ಕರೋಲಿಯ ಆಶ್ರಮಕ್ಕೆ ತೆರಳಿ ಆಶಿರ್ವಾದ ಪಡೆದಿದೆ. ವಿರಾಟ್ ಮತ್ತು ಅನುಷ್ಕಾ ಇಬ್ಬರೂ ಬಾಬಾ ನೀಮ್ ಕರೋಲಿಯವರ ನಿಷ್ಠಾವಂತ ಅನುಯಾಯಿಗಳು.
ವೀಡಿಯೊದಲ್ಲಿ, ವಿರಾಟ್ ದಂಪತಿಗಳು ತಮ್ಮ ಮಗಳು ವಾಮಿಕಾ ಅವರೊಂದಿಗೆ ನೆಲದ ಮೇಲೆ ಕುಳಿತು ಶ್ರೀ ಹಿತಾ ಪ್ರೇಮಾನಂದಜಿ ಅವರ ಆಶೀರ್ವಾದವನ್ನ ಪಡೆಯುತ್ತಾರೆ. ಅಲ್ಲಿಯೇ ಒಂದು ಗಂಟೆ ಧ್ಯಾನ ಮಾಡಿದ್ದಾರೆ. ಅಶ್ರಮದ ಸತ್ಸಂಗದಲ್ಲಿ ಪಾಲ್ಗೊಂಡು ಆಶ್ರಮಕ್ಕೆ ಹೊದಿಕೆ ಮತ್ತು ಉಣ್ಣೆಯ ಬಟ್ಟೆಗಳನ್ನ ವಿತರಿಸಿದರು. ನಂತರ ಭಕ್ತರೊಂದಿಗೆ ಸಂತೋಷದಿಂದ ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ.
Virat Kohli : Virat, Anushka in Vrindavan; Visit to Baba Neem Karoli Ashram…








