Virat Kohli: ಉತ್ತರಾಖಂಡ ಪ್ರವಾಸದಲ್ಲಿ ರಜೆ ಕಳೆಯುತ್ತಿರುವ ವಿರಾಟ್ ಕೊಹ್ಲಿ ದಂಪತಿ….
ಬಾಲಿವುಡ್ನ ಮುದ್ದಾದ ಜೋಡಿಗಳಲ್ಲಿ ಒಂದಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಏಕೈಕ ಪುತ್ರಿ ವಾಮಿಕಾ ಅವರೊಂದಿಗೆ ಉತ್ತರಾಖಂಡ ರಾಜ್ಯದಲ್ಲಿ ವಿಹಾರ ಮಾಡುತ್ತಿದ್ದಾರೆ. ಸ್ಟಾರ್ ಜೋಡಿ (ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ) ಗಿರಿಧಾಮದಲ್ಲಿ ಸುತ್ತಾಡುತ್ತಿರುವ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.
ಕೊಹ್ಲಿ ದಂಪತಿಗಳು ತಮ್ಮ ಮಗಳು ವಾಮಿಕಾ ಜೊತೆಗೆ ಉತ್ತರಾಖಂಡದ ಕೈಂಚಿ ಧಾಮಕ್ಕೆ ಭೇಟಿ ನೀಡಿದರು. ಮುಂದಿನ ತಿಂಗಳು ತಮ್ಮ ಐದನೇ ವಿವಾಹ ವಾರ್ಷಿಕೋತ್ಸವವನ್ನು ದಂಪತಿಗಳು ಆಚರಿಸಿಕೊಳ್ಳಲಿದ್ದಾರೆ , ಉತ್ತರಾಖಂಡದಲ್ಲಿ ಪ್ರವಾಸದಲ್ಲಿರುವ ದಂಪತಿಗಳು ತಮ್ಮ ಅಭಿಮಾನಿಗಳೊಂದಿಗೆ ಚಿತ್ರಗಳನ್ನು ತೆಗೆದುಕೊಂಡರು. ಕೊಹ್ಲಿ ಮತ್ತು ಅನುಷ್ಕಾ ಅವರ ಅಭಿಮಾನಿಗಳ ಜೊತೆಗಿನ ಚಿತ್ರಗಳು ಆನ್ಲೈನ್ನಲ್ಲಿ ಹರಿದಾಡುತ್ತಿವೆ.
ಚಳಿಯಲ್ಲಿ ಸ್ವೆಟರ್ ಮತ್ತು ಟೋಪಿ ಧರಿಸಿ ಔಟಿಂಗ್ ನಲ್ಲಿ ಪಾಲ್ಗೊಂಡಿದ್ದ ಈ ಕೊಹ್ಲಿ ಜೋಡಿ. ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ 2020 ವಿಶ್ವಕಪ್ ನಿಂದ ಮುಂಬೈಗೆ ವಾಪಸಾಗಿರುವ ವಿರಾಟ್ ಕೊಹ್ಲಿ ಮತ್ತೆ ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದ್ದಾರೆ.
ಮತ್ತೊಂದೆಡೆ ಚಕ್ ದೇ ಎಕ್ಸ್ ಪ್ರೆಸ್ ಸಿನಿಮಾದ ಶೂಟಿಂಗ್ ನಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಪಾಲ್ಗೊಳ್ಳಲಿದ್ದಾರೆ.ಭಾರತದ ಮಾಜಿ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಬಯೋಪಿಕ್ ಚಕ್ ದೇ ಎಕ್ಸ್ ಪ್ರೆಸ್ ಶೂಟಿಂಗ್ ನಲ್ಲಿ ಅನುಷ್ಕಾ ಭಾಗವಹಿಸಲಿದ್ದಾರೆ.
Virat Kohli: Virat Kohli’s couple spending a vacation in Uttarakhand tour…








