Virat Kohli | ವಿರಾಟ್ ಇದು ಸರಿನಾ…?
ಇಂಗ್ಲೆಂಡ್ ಪ್ರವಾಸಕ್ಕೂ ಮೊದಲು ಸಿಕ್ಕ ವಿರಾಮದಲ್ಲಿ ಟೀಂ ಇಂಡಿಯಾದ ಆಟಗಾರರು ಕೊರೊನಾ ಸೋಂಕಿಗೆ ಹತ್ತಿರವಾಗಿದ್ದಾರೆ.
ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ಈ ವಿಷಯ ತುಸು ನಿಧಾನವಾಗಿ ಬೆಳಕಿಗೆ ಬಂದಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ ಮುಗಿದ ಬಳಿಕ ವಿರಾಟ್ ಕೊಹ್ಲಿ ಕುಟುಂಬದ ಸಮೇತ ಮಾಲ್ಡೀವ್ಸ್ ಗೆ ತೆರಳಿಸಿದ್ದರು.
ಅಲ್ಲಿಂದ ಬಂದ ಕೂಡಲೇ ಕೊಹ್ಲಿ ಕೊರೊನಾ ಸೋಂಕು ತಗುಲಿತ್ತು. ಆದ್ರೆ ಸರಿಯಾದ ಸಮಯಕ್ಕೆ ವಿರಾಟ್ ಚೇತರಿಸಿಕೊಂಡರು ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಆದ್ದರಿಂದಲೇ ರವಿಚಂದ್ರನ್ ಅಶ್ವಿನ್ ಅವರಂತೆ ಸ್ವದೇಶದಲ್ಲಿ ಉಳಿಯದೇ ವಿರಾಟ್ ಕೊಹ್ಲಿ ಇಂಗ್ಲೆಂಡ್ ಫ್ಲೈಟ್ ಹತ್ತಿದ್ದರು.
‘ಮಾಲ್ಡೀವ್ಸ್ನಿಂದ ಹಿಂತಿರುಗಿದ ಕೆಲವೇ ದಿನಗಳಲ್ಲಿ ಕೊಹ್ಲಿಗೆ ಕೊರೊನಾ ಸೋಂಕು ತಗುಲಿತ್ತು. ಆದ್ರೆ ಬೇಗ ಸೋಂಕಿನಿಂದ ಚೇತರಿಸಿಕೋಂಡಿದ್ದರು. ಹಾಗಾಗಿಯೇ ಅವರು ಟೀಂ ಇಂಡಿಯಾವನ್ನು ಸೇರಿಕೊಂಡರು.
ಸದ್ಯ ಆರೋಗ್ಯವಾಗಿರುವ ಕೊಹ್ಲಿಗೆ ವೈದ್ಯರು ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮಾತ್ರವಲ್ಲದೇ ತಂಡದಲ್ಲಿ ಇತರ ಆಟಗಾರರಲ್ಲೂ ಕೊರೊನಾ ಸೋಂಕಿತರು ಇರಬಹುದು ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಆದ್ರೆ ಕೊರೊನಾ ಸೋಂಕಿಗೆ ತುತ್ತಾಗಿದ್ದರೂ ವಿರಾಟ್ ಕೊಹ್ಲಿ ನಿರ್ದಿಷ್ಟ ವಿಶ್ರಾಂತಿ ಪಡೆಯದೇ ತಂಡ ಸೇರಿಕೊಂಡಿದ್ದು ಯಾಕೆ…?
ಎಂಬ ಪ್ರಶ್ನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನೆಟ್ಟಿಗರು ಸಾಕಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ.