Virat kohli – ಸಚಿನ್ ದಾಖಲೆ ಬ್ರೇಕ್ ಮಾಡಿದ ವಿರಾಟ್
ಪ್ರಸ್ತುತ ಆಧುನಿಕ ಕ್ರಿಕೆಟ್ ನ ಕಿಂಗ್ ವಿರಾಟ್ ಕೊಹ್ಲಿ. ಈಗಾಗಲೇ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ವಿರಾಟ್ ಪಾಕ್ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ದಾಖಲೆ ಬ್ರೇಕ್ ಮಾಡಿದ್ದಾರೆ. ಐಸಿಸಿ ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ಅರ್ಧ ಶತಕ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಕೊಹ್ಲಿ ಸಚಿನ್ ಅವರೊಂದಿಗೆ ಕೂಡಿ ಇಲ್ಲಿಯವರೆಗೂ 23 ಅರ್ಧಶತಕಗಳನ್ನು ಸಾಧಿಸಿದ್ದರು. ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫಿಫ್ಟಿ ಬಾರಿಸುವ ಮೂಲಕ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.

ಇನ್ನು ಒಟ್ಟಾರೆ ವಿಶ್ವಕಪ್ ವಿಷಯಕ್ಕೆ ಬಂದರೇ ಸಚಿನ್ ಖಾತೆಯಲ್ಲಿ ಏಳು ಅರ್ಧಶತಕಗಳಿದ್ದು, 16 ಸೆಂಚೂರಿಗಳಿವೆ. ಇನ್ನು ವಿರಾಟ್ ಕೊಹ್ಲಿ ಖಾತೆಯಲ್ಲಿ ಎರಡು ಸೆಂಚೂರಿ, 22 ಹಾಫ್ ಸೆಂಚೂರಿಗಳಿವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತಮ್ಮ ಕೆರಿಯರ್ ನಲ್ಲಿ ಕೇವಲ ಏಕದಿನ ವರ್ಲ್ಡ್ ಕಪ್ ಗಳನ್ನು ಮಾತ್ರ ಆಡಿದ್ದು, ವಿರಾಟ್ ಕೊಹ್ಲಿ ಟಿ 20 ವಿಶ್ವಕಪ್, ಏಕದಿನ ವರ್ಲ್ಡ್ ಕಪ್ ಆಡಿದ್ದಾರೆ.








