ಕೊರೊನಾ covid 19 ವಿರುದ್ಧ ಹೋರಾಟಕ್ಕೆ ವಿರುಷ್ಕಾ ಸಜ್ಜು
ಮುಂಬೈ : ದೇಶದಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನೊಂದೆಡೆ ಕೊರೊನಾ ಕೆಟ್ಟ ಪರಿಸ್ಥಿತಿ, ಬೆಡ್, ಆಕ್ಸಿಜನ್ ಸಮಸ್ಯೆಯಿಂದಾಗಿ ಜನರು ಬಳಲುತ್ತಿದ್ದಾರೆ.
ಇಂಥ ಸಂಕಷ್ಟದ ಕಾಲದಲ್ಲಿ ಹೆಸರಾದಂತ ತಾರೆಯರು ತಮಗೆ ತೋಚಿದ ಸಹಾಯವನ್ನ ಮಾಡುತ್ತಿದ್ದಾರೆ. ಅದರಂತೆ ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ನಟಿ ಅನುಷ್ಕಾ ಶರ್ಮ ವಿಶೇಷ ಕ್ಯಾಂಪೇನ್ ಶುರು ಮಾಡಿದ್ದಾರೆ.
ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ವಿರುಷ್ಕ ಮುಂದಾಗಿದ್ದು, ಕೊರೊನಾ ಪರಿಹಾರ ನಿಧಿ ಸಂಗ್ರಹಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅನುಷ್ಕಾ, “ಕೊರೊನಾ ಪರಿಹಾರ ನಿಧಿಯನ್ನು ಸಂಗ್ರಹಿಸುತ್ತಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಕೊರೊನಾ ಎದುರಿಸೋಣ” ಎಂದು ಕರೆಕೊಟ್ಟಿದ್ದಾರೆ.
ಈ ಹಿಂದೆ ಕ್ಯಾಂಪೇನ್ ಆರಂಭಕ್ಕೂ ಮುನ್ನ ಮಾತನಾಡಿದ್ದ ಅನುಷ್ಕಾ, “ನನ್ನ ಹುಟ್ಟುಹಬ್ಬದಂದು ಶುಭಾಶಯ ಸಲ್ಲಿಸಿದ ಎಲ್ಲರಿಗೂ ಧನ್ಯವಾದ.
ಕೊರೊನಾದಿಂದ ದೇಶ ಸಂಕಷ್ಟ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬವನ್ನು ಆಚರಿಸಲು ಇಚ್ಛಿಸುವುದಿಲ್ಲ” ಎಂದು ಹೇಳಿದ್ದರು.










