150 ರೂ. ಖರ್ಚಿನಲ್ಲಿ ಮದುವೆಯಾದ ಕಿರುತೆರೆ ನಟ… ಬಾಡಿಗೆ ಸೀರೆ ಉಟ್ಟ ವಧು… ಮೂವರು ಅತಿಥಿಗಳು….!
ಕಿರುತರೆಯ ಖ್ಯಾತ ನಟ ವಿರಾಫ್ ಪಟೇಲ್ ತಮ್ಮ ಗೆಳತಿ ನಟಿ ಸಲೋನಿ ಖನ್ನಾ ಜೊತೆ ಅತ್ಯಂತ ಸರಳವಾಗಿ ಮದುವೆಯಾಗಿ ಗಮನ ಸೆಳೆದಿದ್ದಾರೆ. ಇವರು ಕೇವಲ 150 ರೂಪಾಯಿಯಲ್ಲಿಯೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ವಿಶೇಷ..
ಫೆಬ್ರವರಿಯಲ್ಲಿ ಈ ಜೋಡಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಕ್ಕಿಂತಲೂ ಅದ್ದೂರಿಯಾಗಿ ಮದುವೆ ಆಗಬೇಕು ಎಂದು ಈ ಜೋಡಿ ಪ್ಲಾನ್ ಮಾಡಿಕೊಂಡಿತ್ತು. ಆದ್ರೆ ಕೊರೊನಾ ಕಾರಣದಿಂದಾಗಿ ಪ್ಲಾನ್ ಚೌಪಟ್ ಆಗಿದೆ.. ಅದರ ಬದಲಾಗಿ ಬಹಳ ಅಂದ್ರೆ ಬಹಳವೇ ಸಿಂಪಲ್ ಆಗಿ ಮದುವೆಯಾಗಲು ಈ ಜೋಡಿ ನಿರ್ಧಿರಿಸಿ ಕೇವಲ 150 ರೂ.ಗೆ ಮದುವೆಯಾಗಿದ್ದಾರೆ.
ಮೇ 6ರಂದು ವಿರಾಫ್ ಪಟೇಲ್ ಮತ್ತು ಸಲೋನಿ ಖನ್ನಾ ಮದುವೆಯಾಗಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೂ ಗಮನಿಸಲೇಬೇಕಾದ ಸಂಗತಿ ಎಂದ್ರೆ ವಿರಾಫ್ ತಮ್ಮ ಪತ್ನಿಗೆ ದುಬಾರಿ ಬೆಲೆಯ ಉಂಗುರವನ್ನೂ ಸಹ ನೀಡದೇ ಕೇವಲ ಒಂದು ರಬ್ಬರ್ ಬ್ಯಾಂಡ್ ಕೊಟ್ಟಿದ್ದಾರೆ.
ಇವರ ಮದುವೆಗೆ ಕೇವಲ ಮೂವರು ಮಾತ್ರ ಅತಿಥಿಗಳಾಗಿ ಆಗಮಿಸಿ ನವಜೋಡಿಗೆ ಆಶೀರ್ವದಿಸಿದ್ದಾರೆ. ಇನ್ನುಳಿದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ಈ ಮದುವೆಯನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.
ಸಾಲದಕ್ಕೆ ವಧುವಿನ ಸೀರೆಯನ್ನೂ ಬಾಡಿಗೆಗೆ ತರಲಾಗಿತ್ತಂತೆ. ಸ್ನೇಹಿತರೇ ಸೇರಿಕೊಂಡು ಮೇಕಪ್ ಮಾಡಿ ಹೇರ್ ಸ್ಟೈಲ್ ಮಾಡಿದ್ದಾರೆ. ಈ ಸಿಂಪಲ್ ವಿವಾವಹಕ್ಕೆ ಆದ ಖರ್ಚು ಕೇವಲ 150 ರೂಪಾಯಿ ಎಂದು ಸಲೋನಿ ಖನ್ನಾ ತಿಳಿಸಿದ್ದಾರೆ.