ಮುಂಬೈ : (Vishal Anand passes away ) : ಬಾಲಿವುಡ್ ನ ಹಿರಿಯ ನಟ ವಿಶಾಲ್ ಆನಂದ್ ನಿಧನರಾಗಿದ್ದಾರೆ.ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಅಕ್ಟೋಬರ್ 4 ರಂದು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1976ರಲ್ಲಿ ತೆರೆಕಂಡಿದ್ದ ‘ಚಲ್ತೆ ಚಲ್ತೆ’ ಚಿತ್ರ ವಿಶಾಲ್ ಆನಂದ್ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತ್ತು.
ಇದನ್ನೂ ಓದಿ : ನಿಶ್ಯಬ್ದಂಗೆ ನೆಟ್ಟಿಗರೊಬ್ಬರ ನೆಗೆಟಿವ್ ಕಮೆಂಟ್ ಗೆ “ಸ್ವೀಟಿ” ಕೊಟ್ಟ ಉತ್ತರ ಏನ್ ಗೊತ್ತಾ..?
ವೃತ್ತಿ ಜೀವನದಲ್ಲಿ ಸುಮಾರು 11 ಚಿತ್ರಗಳಲ್ಲಿ ವಿಶಾಲ್ ಆನಂದ್ ಬಣ್ಣ ಹಚ್ಚಿದ್ದರು. ಕೆಲವು ಚಿತ್ರಗಳನ್ನು ನಿರ್ದೇಶನ ಸಹ ಮಾಡಿದ್ದು, ಇನ್ನು ಕೆಲವು ಚಿತ್ರಗಳಿಗೆ ನಿರ್ಮಾಪಕರಾಗಿದ್ದರು
ಹಮರಾ ಅಧಿಕಾರ್, ಸಾ-ರೆ-ಗಾ-ಮ-ಪ, ಟ್ಯಾಕ್ಸಿ ಡ್ರೈವರ್, ಇಂತೆಜಾರ್, ಹಿಂದೂಸ್ತಾನ್ ಕಿ ಕಸಮ್, ಚಲ್ತೆ ಚಲ್ತೆ, ದಿಲ್ ಸೆ ಮೈಲ್ ದಿಲ್, ಕಿಸ್ಮೆತ್ ಮತ್ತು ಮೈನೆ ಜೀನಾ ಸಿಖ್ ಲಿಯಾ ವಿಶಾಲ್ ಮುಂತಾದ ಚಿತ್ರಗಳಲ್ಲಿ ವಿಶಾಲ್ ಅವರು ನಟಿಸಿದ್ದರು.
Like us on Facebook
https://www.facebook.com/saakshatv/










