ಇತ್ತೀಚೆಗಷ್ಟೇ ತಮಿಳಿನ ಖ್ಯಾತ ನಟ ವಿಶಾಲ್ ಹಾಗೂ ಅವರ ತಂದೆ ಹಾಗೂ ಮ್ಯಾನೇಜರ್ ಗೆ ಕೊರೊನಾ ಪಾಸಿಟವ್ ಬಂದಿದ್ದು, ಮನೆಯಲ್ಲಿಯೇ ಆಯುರ್ವೇದ ಔಷಧಗಳ ಮೂಲಕ ಗುಣಮುಖರಾಗಿದ್ದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಇದೀಗ ವಿಶಾಲ್ ಅವರು ತಾವು ಗುಣಮುಖರಾಗಲು ತೆಗೆದುಕೊಂಡ ಆಯುರ್ವೇದ ಔಷಧದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಈ ಬಗ್ಗೆ ಜನರಿಂದ ಒತ್ತಡಗಳು ಹೆಚ್ಚಾದ ಹಿನ್ನೆಲೆ ಔಷಧದ ಚಿತ್ರ ಹಂಚಿಕೊಂಡಿರುವ ವಿಶಾಲ್ ಯಾವ ಯಾವ ಔಷಧಿಯನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬುದರ ವಿವರಣೆಯನ್ನೂ ನೀಡಿದ್ದಾರೆ.
ಈ ಔಷಧಗಳನ್ನು ತೆಗೆದುಕೊಳ್ಳುವಂತೆ ವೈದ್ಯರಾದ ಹರಿ ಶಂಕರ್ ಎಂಬುವರು ಸೂಚಿಸಿದ್ದರು ಎಂದಿರುವ ವಿಶಾಲ್, ಕ್ಯುಎಫ್‌ಸಿ-ಕ್ಯೂಆರ್ ಎಂಬ ಸಿರಪ್ ಅನ್ನು ದಿನಕ್ಕೆ ಮೂರು ಬಾರಿ ಆರ್ಸೆನೆಕ್ ಆಲ್ಬಯುಂ ಎಂಬ ಮಾತ್ರೆಗಳನ್ನು ಬೆಳಿಗ್ಗೆ ಐದು ಮತ್ತು ಸಂಜೆ ಐದು ತೆಗೆದುಕೊಳ್ಳುತ್ತಿದ್ದ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಒಂದು ವೇಳೆ ಈ ಔಷಧಗಳನ್ನು ಬೇರೆಯವರು ಬಳಸಬೇಕೆಂದರೆ ಮೊದಲಿಗೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.