ವಿಷ್ಣು ಪುತ್ಥಳಿ ಧ್ವಂಸ ಪ್ರಕರಣ: ಅದೇ ವೃತ್ತದಲ್ಲೇ ‘ದಾದ’ನ ಪ್ರತಿಮೆ ಮರುನಿರ್ಮಾಣ!
ವಿಷ್ಣು ಪುತ್ಥಳಿಯನ್ನ ಕೆಲ ಕಿಡಿಗೇಡಿಗಳು ಧ್ವಂಸ ಮಾಡಿದ್ದ ಬಳಿಕ ರಾಜ್ಯದ್ಯಂತ ವಿಷ್ಣು ಅಭಿಮಾನಿಗಳಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿದ್ದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಇದೀಗ, ಅದೇ ವೃತ್ತದಲ್ಲಿ ಮತ್ತೊಮ್ಮೆ ವಿಷ್ಣುದಾದಾನ ಪ್ರತಿಮೆ ಮರು ನಿರ್ಮಾಣವಾಗುತ್ತಿದೆ.
‘ಡೆಡ್ಲಿ’ಯಲ್ಲಿ ‘ಬಿಗ್ ಬಿ’ಗೆ ಮಗಳಾದ ‘ರಷ್ಮಿಕಾ’..!
ಇಂದು ವಿಷ್ಣುವರ್ಧನ್ ಪುತ್ಥಳಿ ನಿರ್ಮಾಣಕ್ಕೆ ಅವರ ಅಳಿಯ ನಟ ಅನಿರುದ್ಧ್ ಅವರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲೇ ವಿಷ್ಣು ಸ್ಮಾರಕ ನಿರ್ಮಿಸಬೇಕು ಎಂದು ಬೇಡಿಕೆಯಿಟ್ಟಿದ್ದ ಅಭಿಮಾನಿಗಳು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳಿಂದ ಸಮ್ಮತಿ ಸಹ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆ ಅದೇ ವೃತ್ತದಲ್ಲಿ ವಿಷ್ಣು ಪ್ರತಿಮೆಯನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಆದ್ರೆ ಅದೇ ವೃತ್ತಿದಲ್ಲಿ ಹಿಂದೆ ಪುತ್ಥಳಿ ಇದ್ದ ಸ್ಥಳಕ್ಕಿಂತ 50 ಮೀಟರ್ ದೂರದಲ್ಲಿ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಡಿಸೆಂಬರ್ 30ಕ್ಕೆ ಪ್ರತಿಮೆ ಅನಾವರಣವಾಗಲಿದೆ. ಆರು ಅಡಿ ಎತ್ತರದಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ ಸ್ಥಾಪಿಸಲಾಗುತ್ತದೆ ಎಂದು ವಿಷ್ಣು ಅಭಿಮಾನಿಗಳು ಮಾಹಿತಿ ನೀಡಿದ್ದಾರೆ. ಅದೇ ವೃತ್ತದಲ್ಲಿ ಪ್ರತಿಮೆ ನಿರ್ಮಿಸಲು ಸಚಿವ ವಿ ಸೋಮಣ್ಣ ಅವರು ಸಹ ಒಪ್ಪಿಗೆ ನೀಡಿದ್ದು, ಪುತ್ಥಳಿ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಾಯ ಮಾಡುವುದಾಗಿಯೂ ಭರವಸೆ ನಿಡಿದ್ಧಾರೆ ಎನ್ನಲಾಗಿದೆ.
ತಮಿಳಿನಲ್ಲಿ ಅಬ್ಬರ ಶುರು ಮಾಡಲಿದ್ದಾರೆ ಧ್ರುವ ಸರ್ಜಾ..!
ಇನ್ನೂ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ದಾದನ ಅಭಿಮಾನಿಗಳ ಆಗ್ರಹವಾಗಿದೆ. ಇನ್ನೂ ಈ ಪ್ರಕರಣ ಸಂಬಂಧ ದಾದನ ಅಪ್ಪಟ ಅಭಿನಯಾದ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ , ನವರಸ ನಾಯಕ ಜಗ್ಗೇಶ್ , ಅನಿರುದ್ಧ ಸೇರಿದಂತೆ ಅನೇಕರು ತೀವ್ರವಾಗಿ ಖಂಡಿಸಿ ಕಿಡಿಕಾರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








