Vishnuvardhan : ದಾದಾ 13 ನೇ ಪುಣ್ಯ ಸ್ಮರಣೆ – ಸ್ಟಾರ್ ಗಳ ಟ್ವೀಟ್..!!
ಚಂದನವನದ ಮರೆಯಲಾಗದ ರತ್ನ ಸಾಹಸ ಸಿಂಹ ಡಾ. ವಿಷ್ಣು ವರ್ಧನ್ .. ಇಂದಿಗೆ ಅವರು ನಮ್ಮನ್ನೆಲ್ಲಾ ಅಗಲಿ 13 ವರ್ಷ.. ಅವರ 13 ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ದಾದಾರನ್ನ ನೆನೆದು ಹಲವು ಸ್ಟಾರ್ ಗಳು , ಸಿನಿಮಾರಂಗದ ಗಣ್ಯರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ..
ಕಿಚ್ಚ ಸುದೀಪ್
” ಅಂದು, ಇಂದು, ಎಂದೆಂದೂ ನನ್ನ ಹೀರೋ ಡಾ. ವಿಷ್ಣುವರ್ಧನ ಅಪ್ಪಾಜಿ ಅವರ ಪುಣ್ಯ ಸ್ಮರಣೆಯಂದು ಅವರನ್ನು ಪೂಜ್ಯಭಾವಹಿಂದ ಸ್ಮರಿಸುತ್ತೇನೆ : ಕಿಚ್ಚ ಸುದೀಪ “
ದರ್ಶನ್ ಅವರ ಟ್ವೀಟ್ ಹೀಗಿದೆ..
“ಇಂದಿಗೆ ದೈಹಿಕವಾಗಿ ಕನ್ನಡಾಭಿಮಾನಿಗಳನ್ನು ಅಗಲಿ 13 ವರ್ಷ ಕಳೆದರೂ, ತಮ್ಮ ಕಲಾಸೇವೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಕೋಟ್ಯಾಂತರ ಕನ್ನಡಿಗರ ಮನದಲ್ಲಿ ಸದಾ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ ನಮ್ಮ ಸಾಹಸ ಸಿಂಹ ಡಾ|| ವಿಷ್ಣು ಸರ್”
ನವರಸ ನಾಯಕ ಜಗ್ಗೇಶ್…
ವಿಷ್ಣುವರ್ಧನ್ ಅವರ ಫೋಟೊವೊಂದನ್ನು ರಿಟ್ವೀಟ್ ಮಾಡಿ ‘ಮರೆಯಲಾಗದ ಮಾಣಿಕ್ಯ’ ಎಂದು ಬರೆದುಕೊಂಡಿದ್ದಾರೆ..
Vishnuvardhan : Dada’s 13th Death Aniversary – Star’s Tweet..!!