ಜನಸಂಖ್ಯಾ ನಿಯಂತ್ರಣ ನೀತಿ : “ದೇಶದಲ್ಲಿ ಹಿಂದೂ ಪ್ರಾಬಲ್ಯ ಅಚಲವಾಗಿರಬೇಕು” – ವಿಶ್ವ ಹಿಂದೂ ಪರಿಷತ್
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರವು ಜಾರಿಗೆ ತರಲು ಹೊರಟಿರುವ ಜನಸಂಖ್ಯಾ ನಿಯಂತ್ರಣ ನೀತಿ ಕುರಿತು ಸಾಕಷ್ಟು ಪರ ವಿರೋಧ ವ್ಯಕ್ತವಾಗ್ತಿದೆ.. ಈ ನಡುವೆ ದೇಶದಲ್ಲಿ ಹಿಂದೂ ಪ್ರಾಬಲ್ಯ ಅಚಲವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಯಾವುದೇ ಜನಸಂಖ್ಯಾ ನಿಯಂತ್ರಣ ನೀತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
ವಿಶ್ವ ಹಿಂದೂ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಮಾತನಾಡಿ , ಒಂದು ಕುಟುಂಬದಲ್ಲಿ ಕೇವಲ ಒಂದು ಮಗು ಮಾತ್ರ ಇದ್ದರೆ ಹಿಂದೂಗಳ ಜನಸಂಖ್ಯೆಯು ಹಿಂದೂಗಳಿಂದಲೇ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾವು ಜನಸಂಖ್ಯಾ ನಿಯಂತ್ರಣದ ಬಗ್ಗೆ ಚರ್ಚಿಸುವಾಗ, ದೇಶದಲ್ಲಿ ಹಿಂದೂ ಸಮಾಜದ ಪ್ರಾಬಲ್ಯವು ಅಚಲವಾಗಿರಬೇಕು. ಹಿಂದೂಗಳಿಂದ ದೇಶದಲ್ಲಿ ರಾಜಕೀಯ, ಜಾತ್ಯತೀತತೆ ಸೇರಿದಂತೆ ಎಲ್ಲ ತತ್ವಗಳನ್ನು ಪಾಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಲ್ಲದೇ ದೇಶದಲ್ಲಿ ಹಿಂದೂಗಳ ಪ್ರಾಬಲ್ಯವನ್ನು ಖಚಿತಪಡಿಸಬೇಕಿದೆ ಎಂದು ಇದೇ ವೇಳೆ ಪ್ರತಿಪಾದಿಸಿದ್ದಾರೆ. ಹಿಂದೂ ಕುಟುಂಬದಲ್ಲಿ ಕನಿಷ್ಠ ಇಬ್ಬರು ಮಕ್ಕಳು ಇರಬೇಕು ಎಂಬುದನ್ನು ಯೋಚಿಸಲೇಬೇಕು. ಏಕೆಂದರೆ ಒಂದು ಕುಟುಂಬದಲ್ಲಿ ಒಂದು ಮಗು ಮಾತ್ರ ಇದ್ದರೆ, ಹಿಂದೂಗಳ ಜನಸಂಖ್ಯೆಯು ಹಿಂದೂಗಳಿಂದಲೇ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.