ರಾಣೆ ತಲೆ ಕಡಿದರೆ 51 ಲಕ್ಷ ರೂ.ಬಹುಮಾನ
ಉತ್ತರ ಪ್ರದೇಶ : ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೆನ್ನೆಗೆ ಬಾರಿಸುತ್ತೇನೆ ಎಂದು ಹೇಳಿಕೆ ವಿವಾದಕ್ಕೀಡಾಗಿರುವ ಕೇಂದ್ರ ಸಚಿವ ನಾರಾಯಣ್ ರಾಣೆ ವಿರುದ್ಧ ವಿಶ್ವ ಹಿಂದೂ ಸೇನಾದ ರಾಷ್ಟ್ರೀಯ ಅಧ್ಯಕ್ಷ ಕಿಡಿಕಾರಿದ್ದು, ನಾರಾಯಣ್ ರಾಣೆ ಅವರ ತಲೆಯನ್ನು ಕಡಿದರೆ 51 ಲಕ್ಷ ರೂ. ಬಹುಮಾನ ಕೊಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಾರಾಯಣ್ ರಾಣೆ ಹೇಳಿಕೆ ಸದ್ಯ ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಠಿ ಮಾಡಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ವಿಶ್ವ ಹಿಂದೂ ಸೇನಾದ ರಾಷ್ಟ್ರೀಯ ಅಧ್ಯಕ್ಷ ಪಾಠಕ್, ಬಾಳಾಸಾಹೇಬ್ ಅವರು ಶಿವ ಸೇನಾವನ್ನು ಕಟ್ಟಿದ್ದು, ಅವರ ಪುತ್ರ ಉದ್ಧವ್ ಠಾಕ್ರೆ ಇದೀಗ ಮುಖ್ಯಮಂತ್ರಿಯಾಗಿದ್ದಾರೆ.
ಅಗ್ಗದ ಜನಪ್ರಿಯತೆಗಾಗಿ ಟಿಕೆಟ್ ಮಾರಾಟಗಾರನು ಬಾಳಾಸಾಹೇಬರ ಪುತ್ರನ ಬಗ್ಗೆ ಮಾತನಾಡುತ್ತಿದ್ದಾರೆ. ತನ್ನ ಮಿತಿಗಳನ್ನು ದಾಟಿದ್ದಾರೆ. ಇಂತಹ ಮನುಷ್ಯನ ಶಿರಚ್ಛೇದ ಮಾಡಬೇಕು. ಹೀಗೆ ಮಾಡುವವರಿಗೆ 51 ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಘೋಷಿಸಿದ್ದಾರೆ.
ಇದು ಸದ್ಯ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಶುರುವಾಗಿವೆ. ಅಂದಹಾಗೆ ಈ ಹಿಂದೆಯೂ ಅರುಣ್ ಪಾಠಕ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು.









