`ಕಂಬಳ ಉಸೇನ್ ಬೋಲ್ಡ್’ ದಾಖಲೆ ಮುರಿದ ವಿಶ್ವನಾಥ್..!
ಮಂಗಳೂರು : ಕಳೆದ ವರ್ಷ ಫೆಬ್ರವರಿ 1 ರಂದು ಐಕಳಬಾವಾದಲ್ಲಿ ನಡೆದಿದ್ದ ನೇಗಿಲ ಹಿರಿಯ ವಿಭಾಗದಲ್ಲಿ 9.55 ಸೆಕೆಂಡ್ ಗಳಲ್ಲಿ 100 ಮೀ. ದೂರವನ್ನು ಕ್ರಮಿಸಿದ್ದರು.
ಈ ಸಾಧನೆ ದೇಶಾದ್ಯಂತ ಭಾರೀ ಸಂಚಲನ ಉಂಟು ಮಾಡಿತ್ತು. ಇದೀಗ ಈ ದಾಖಲೆಯನ್ನ ಬೈಂದೂರಿನ ವಿಶ್ವನಾಥ್ ಮುರಿದಿದ್ದಾರೆ.
ಹೌದು..!
ಐಕಳಬಾವಾದಲ್ಲಿ ನಿನ್ನೆ ನಡೆದ ಕಾಂತಬಾರೆ-ಬೂದಬಾರೆ ಕಂಬಳ ಓಟದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಬೈಂದೂರಿನ ವಿಶ್ವನಾಥ್ ಓಡಿಸಿದ ಕೋಣಗಳು 9.15 ಸೆಕೆಂಡ್ ಗಳಲ್ಲಿ 100 ಮೀ. ಕ್ರಮಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಈ ಮೂಲಕ ಕಂಬಳ ಓಟದ “ಉಸೇನ್ ಬೋಲ್ಟ್” ಎಂದು ಪ್ರಖ್ಯಾತರಾಗಿದ್ದ ಶ್ರೀನಿವಾಸ್ ಗೌಡ ದಾಖಲೆ ಮುರಿದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









