ನಿನ್ನ ನರ್ಸ್ ಜಯಲಕ್ಷ್ಮಿ ಕತೆ ಏನಾಯ್ತು : ರೇಣುಕಾಚಾರ್ಯಗೆ ವಿಶ್ವನಾಥ್ ಟಾಂಗ್
ಬೆಂಗಳೂರು : ನಿನ್ನ ನರ್ಸ್ ಜಯಲಕ್ಷ್ಮಿ ಕತೆ ಏನಾಯ್ತು? ಯಡಿಯೂರಪ್ಪ ವಿರುದ್ಧ ನೀನು ಹೈದರಾಬಾದ್‍ಗೆ ಹೋಗಿದ್ದೆ ಎಂದು ಎಂ.ಪಿ.ರೇಣುಕಾಚಾರ್ಯ ವಿರುದ್ಧ ಎಂಎಲ್ ಸಿ ಹೆಚ್.ವಿಶ್ವನಾತ್ ಆಕ್ರೋಶ ಹೊರಹಾಕಿದ್ದಾರೆ.
ತಾನಿದ್ದ ಪಕ್ಷದ ವಿರುದ್ಧ ಮಾತನಾಡೋದೇ ಹೆಚ್.ವಿಶ್ವನಾಥ್ ಕೆಲಸ ಎಂಬ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಸತ್ಯ ಹೇಳುವವರ ವಿರುದ್ಧ ಕ್ರಮ ಆಗಬೇಕಾ? ‘ನಾನು ಪ್ಯೂರ್ ಬಿಜೆಪಿ, ನೀನು ಮಿಕ್ಸ್ ಬಿಜೆಪಿ’. ನೀನು ಕೆಜೆಪಿಯಿಂದ ಬಂದವನು. ನಿನ್ನ ನರ್ಸ್ ಜಯಲಕ್ಷ್ಮಿ ಕತೆ ಏನಾಯ್ತು? ಯಡಿಯೂರಪ್ಪ ವಿರುದ್ಧ ನೀನು ಹೈದರಾಬಾದ್‍ಗೆ ಹೋಗಿದ್ದೆ ಎಂದು ಆಕ್ರೋಶ ಹೊರಹಾಕಿದರು.
ಮುಂದುವರೆದು ಹರತಾಳು ಹಾಲಪ್ಪ ವಿರುದ್ಧ ಕಿಡಿಕಾರಿದ ಹಳ್ಳಿಹಕ್ಕಿ, ಉಂಡ ಮನೆಗೆ ಮದ್ದು ಹಾಕುವೆ ಎನ್ನುತ್ತಾನೆ. ಗೆಳೆಯನ ಮನೆಗೆ ಊಟಕ್ಕೆ ಹೋಗಿ ಅತ್ಯಾಚಾರ ಮಾಡಲು ಹೋದವನು ನೀನು. ಅದರಿಂದ ಮಂತ್ರಿಗಿರಿ ಕಳೆದುಕೊಂಡಿದ್ದೆ ನೀನು ಎಂದು ಟಾಂಗ್ ನೀಡಿದರು.
ಇದೇ ವೇಳೆ ವಿಶ್ವನಾಥ್ ಅರೆ ಹುಚ್ಚ ಎಂಬ ಎಸ್.ಆರ್.ವಿಶ್ವನಾಥ್ ಹೇಳಿಕೆಗೆ ಗರಂ ಆದ ವಿಶ್ವನಾಥ್, ನಾನು ಉಂಡ ಮನೆಗೆ ಮದ್ದು ಹಾಕುತ್ತೇನೆಂದು ಮಾತಾಡ್ತೀಯ. ಎಸ್.ಆರ್.ವಿಶ್ವನಾಥ್ ನನ್ನನ್ನು ಅರೆಹುಚ್ಚ ಎಂದಿದ್ದಾರೆ. ನನ್ನಂತಹ ಅರೆಹುಚ್ಚನಿಂದ ನೀನು ಬಿಡಿಎ ಅಧ್ಯಕ್ಷನಾಗಿದ್ದೀಯ. ವಸ್ತುಪ್ರದರ್ಶನ ಕೇಂದ್ರದಲ್ಲಿ ಮಾಡಿದ್ದ ಕೇರ್ ಸೆಂಟರ್ ಎಲ್ಲಿ. 10 ಸಾವಿರ ಬೆಡ್ ಕೇರ್ ಸೆಂಟರ್ನಲ್ಲಿ ಎಷ್ಟು ಹೊಡೆದಿದ್ದೀಯಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ.