ಪ್ರಭಾಸ್ , ಕಿಚ್ಚ ಸುದೀಪ್ , ರಾಣಾ , ಸಿಂಬು , ಪೃಥ್ವಿ ಸುಕುಮಾರ್ , ಕಂಗನಾ, ಅನುಷ್ಕಾ ಶೆಟ್ಟಿ , ಜಗ್ಗೇಶ್ , ಸೇರಿದಂತೆ ಸ್ಟಾರ್ ನಟರು ಸಿನಿಮಾವನ್ನ ರಿಷಬ್ ನಟನೆಯನ್ನ ಬಾಯ್ತುಂಬ ಹೊಗಳಿದ್ದಾರೆ..
ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಬಗ್ಗೆ ಹೊಗಳಿ ಟ್ವೀಟ್ ಮಾಡಿದ್ದರು..
ಇದೀಗ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ರಿಷಬ್ ಶೆಟ್ಟಿ ನಿರ್ದೇಶಿ ನಟಿಸಿರುವ , ದೇಶಾದ್ಯಂತ ಅಬ್ಬರಿಸುತ್ತಿರುವ ಕಾಂತಾರ ಸಿನಿಮಾದ ಬಗ್ಗೆ ಹಾಡಿ ಹೊಗಳಿದ್ದಾರೆ.. ಈ ಸಿನಿಮಾವನ್ನ ಮಾಸ್ಟರ್ ಪೀಸ್ ಎಂದು ಕರೆದಿದ್ದಾರೆ..
ಸೆಲ್ಫಿ ವಿಡಿಯೋ ಮೂಲಕ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ತಮ್ಮ ವೀಡಿಯೊವನ್ನು ಹಂಚಿಕೊಂಡಿದ್ದಾರೆ.. @shetty_rishab ಅವರ ಮಾಸ್ಟರ್‌ಪೀಸ್ #ಕಾಂತಾರವನ್ನು ನೋಡಿದೆ… ಒಂದೇ ಪದದಲ್ಲಿ ಇದು ಕೇವಲ ವಾಹ್! ಅದ್ಭುತ ಅನುಭವ. ಸಾಧ್ಯವಾದಷ್ಟು ಬೇಗ ಅದನ್ನು ವೀಕ್ಷಿಸಿ.”
ಇದು ಕಲೆ ಮತ್ತು ಜಾನಪದದಿಂದ ತುಂಬಿರುವ ವಿಷಯವಾಗಿದೆ, ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್ ಅಧ್ಬುತವಾಗಿದೆ. ನಾನು ನಿಮಗೆ ಭರವಸೆ ನೀಡುತ್ತೇನೆ, ನೀವು ಹಿಂದೆಂದೂ ನೋಡಿರದಂತಹ ಸಿನಿಮಾವಿದು… ದೀಪಾವಳಿ ಮುಗಿಸಿದ ನಂತರ ನೀವು ಮಾಡಬಹುದಾದ ಮೊದಲ ಕೆಲಸವೇನೆಂದರೆ, ಹೋಗಿ ಈ ಚಿತ್ರವನ್ನು ನೋಡಿ.ಇದು ರಿಷಬ್ ಶೆಟ್ಟಿಯವರ ಮಾಸ್ಟರ್ ಪೀಸ್ ಎಂದು ನಾನು ಭಾವಿಸುತ್ತೇನೆ, ಇದು ನಾನು ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ.ಅದ್ಭುತ ಸಿನಿಮಾ ಮಾಡಿದ್ದಕ್ಕಾಗಿ ಅಭಿನಂದನೆಗಳು ರಿಷಬ್, ಉತ್ತಮ ಕಲೆ, ಉತ್ತಮ ಸಂಗೀತ, ಉತ್ತಮ ಛಾಯಾಗ್ರಹಣ. ವಾವ್! ಎಂದಿದ್ದಾರೆ..