ವಿವೇಕ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ಡೆಲ್ಲಿ ಫೈಲ್ಸ್’ !!
ದೇಶದಲ್ಲಿ ನಡೆದಿದ್ದ ದುಷ್ಕೃತ್ಯ ಘಟನೆಗಳನ್ನು ಜನರ ಮುಂದೆ ಎಳೆ ಎಳಯಾಗಿ ಬಿಚ್ಚಿಡಲು, ತಾಷ್ಕೆಂಟ್ ಫೈಲ್ಸ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಳನ್ನು ನಿರ್ಮಿಸಿ ಜನ ಮಣ್ಣನೆಯನ್ನು ಗಳಿಸುವುದರೊಂದಿಗೆ, ಟೀಕೆಗಳನ್ನೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೇಳಿದ್ದಾರೆ.
ಈಗ ಮತ್ತೆ ಮತ್ತೊಂದು ಚಿತ್ರವನ್ನು ನಿರ್ಮಿಸಲು ವಿವೇಕ್ ಅಗ್ನಿಹೋತ್ರಿ ಮುಂದಾಗಿದ್ದಾರೆ. ಹೌದು ಅದು ‘ಡೆಲ್ಲಿ ಫೈಲ್ಸ್’. ಈ ಸಿನಿಮಾವನ್ನು ಕೈಗೆತ್ತಿಕೊಂಡ ನಿರ್ದೇಶಕ ಚಿತ್ರದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಈ ಮೊದಲು ನಿರ್ದೇಶಿಸಿದ್ದ ತಾಷ್ಕೆಂಟ್ ಫೈಲ್ಸ್’ ಮೂಲಕ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಸಾವಿನ ರಹಸ್ಯವನ್ನು ಬೇಧಿಸಿದ್ದ ವಿವೇಕ್ ಅಗ್ನಿಹೋತ್ರಿ ‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ಕಾಶ್ಮೀರ ಪಂಡಿತರ ನರಮೇಧದ ಹಿಂದಿನ ಸತ್ಯವನ್ನು ಬಯಲಿಗೆಳೆದಿದ್ದರು.
ಇದೇ ರೀತಿಯಾಗಿ ‘ಡೆಲ್ಲಿ ಫೈಲ್ಸ್’ ಮೂಲಕ ಬದುಕುವ ಹಕ್ಕಿನ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇದು ಯಾವ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಈವರೆಗೂ ಅವರು ಹೇಳಿಕೊಂಡಿಲ್ಲ.
ತಮ್ಮ ಡೆಲ್ಲಿ ಫೈಲ್ಸ್ ಸಿನಿಮಾಗೆ ‘ರೈಟ್ ಟು ಲೈಫ್’ ಎಂದು ಟ್ಯಾಗ್ ಲೈನ್ ನೀಡಿದ್ದು, ಜೀವಿಸುವ ಹಕ್ಕಿನ ಕಥೆಯನ್ನು ಇದು ಹೇಳಲಿದೆ ಎಂದು ಊಹಿಸಿಕೊಳ್ಳಬಹುದು. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಅತೀ ಶೀಘ್ರದಲ್ಲೇ ಸಿನಿಮಾದ ಶೂಟಿಂಗ್ ಕೂಡ ಶುರು ಮಾಡಲಿದ್ದಾರೆ. ಇದು ಹಿಂದಿ ಮತ್ತು ಪಂಜಾಬಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಗೆಲ್ಲಿಸಿದ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕಾಶ್ಮೀರ್ ಫೈಲ್ಸ್‌ಚಿತ್ರದ ಗೆಲುವು ಮುಂದಿನ ಕೆಲಸಗಳಿಗೆ ಹೆಚ್ಚಿನ ಸ್ಫೂರ್ತಿ ನೀಡಿದ್ದು ದಶಕಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಹಿಂದುಗಳ ಮಾರಣ ಹೋಮದ ಕುರಿತು ಯುವಜನತೆಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ವೀಕ್ಷಿಸಿ ಅಭಿನಂದಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು, ಇನ್ನು ಮುಂದೆ ʼದೆಲ್ಲಿ ಫೈಲ್ಸ್ʼ ಚಿತ್ರದ ಮೇಲೆ ಕೆಲಸ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.