ವಿವೋ ಹೊಸ ಸ್ಮಾರ್ಟ್ ಪೋನ್ Vivo V25 5G ಬಿಡುಗಡೆ….
ಸ್ಮಾರ್ಟ್ ಪೋನ್ ತಯಾರಕ ಸಂಸ್ಥೆ Vivo ತನ್ನ ಹೊಸ ಫೋನ್ Vivo V25 5G ಮಾಡೆಲ್ ಅನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. Vivo V25 5G ನಲ್ಲಿ 64 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನ ನೀಡಲಾಗಿದೆ.
Vivo V25 5G ಹಿಂಭಾಗದ ಬ್ಯಾಕ್ ಪ್ಯಾನೆಲ್ ಬಿಸಿಲಿಗೆ ಬಣ್ಣ ಬದಲಾಯಿಸುವ ವಿಶಿಷ್ಟ ಫೀಚರ್ಸ್ ನ್ನ ನೀಡಲಾಗಿದೆ. ಫ್ಲೋರೈಟ್ AG ಬ್ಯಾಕ್ ಪ್ಯಾನೆಲ್ ನೀಡಲಾಗಿದೆ. Vivo V25 5G ನಲ್ಲಿ ಸೂಪರ್ AMOLED ಡಿಸ್ಪ್ಲೇ ನೀಡಲಾಗಿದೆ. 44W ವೇಗದ ಚಾರ್ಜಿಂಗ್ ಲಭ್ಯವಿದೆ.
8 GB RAM ಮತ್ತು 128 GB ಸ್ಟೋರೇಜ್ ಹೊಂದಿರುವ Vivo V25 5G ಮೊಬೈಲ್ ನ ಬೆಲೆ 27,999 ರೂ ಮತ್ತು 12 GB RAM ಜೊತೆಗೆ 256 GB ಸ್ಟೋರೇಜ್ ಮಾದರಿಯ ಬೆಲೆ 31,999 ರೂ. ನಿಗದಿಪಡಿಸಲಾಗಿದೆ. Vivo V25 5G ಮಾರಾಟ ಫ್ಲಿಪ್ಕಾರ್ಟ್ ಇ ಕಾಮರ್ಸ್ ವೆಬ್ ಸೈಟ್ ನಲ್ಲಿ ಸೆಪ್ಟೆಂಬರ್ 20 ರಿಂದ ಶುರುವಾಗಲಿದೆ.
ಫೋನ್ನೊಂದಿಗೆ ಬಾಕ್ಸ್ ನಲ್ಲಿ ಅಡಾಪ್ಟರ್, ಸಿಲಿಕೋನ್ ಕವರ್ ಮತ್ತು ಟೈಪ್-ಸಿ ಕೇಬಲ್ ಲಭ್ಯವಿದೆ. ನೇರಳಾತೀತ ಬೆಳಕು ಇದ್ದಾಗಲೂ ಹಿಂಭಾಗದ ಫಲಕ ಬಣ್ಣ ಬದಲಾಗುತ್ತದೆ. SIM ಕಾರ್ಡ್ ಸ್ಲಾಟ್, ಚಾರ್ಜಿಂಗ್ ಪೋರ್ಟ್ ಮತ್ತು ಸಿಂಗಲ್ ಸ್ಪೀಕರ್ ಫೋನ್ನ ಕೆಳಭಾಗದಲ್ಲಿ ಲಭ್ಯವಿದೆ.
Vivo V25 5G 6.44-ಇಂಚಿನ ಫುಲ್ HD+ AMOLED ಡಿಸ್ಪ್ಲೇಯಲ್ಲಿ 90Hz ರಿಫ್ರೆಶ್ ರೇಟ್ ನೊಂದಿಗೆ ನೀಡಲಾಗಿದೆ.