ಸಿಯೋಲ್: ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್(Vladimir Putin) ಬರೋಬ್ಬರಿ 24 ವರ್ಷಗಳ ನಂತರ ಉತ್ತರ ಕೊರಿಯಾಗೆ ಭೇಟಿ ನೀಡಿದ್ದಾರೆ.
ರಾಜಧಾನಿ ಪ್ಯೊಂಗ್ಯಾಂಗ್ ಕಿಮ್ ಇಲ್ ಸುಂಗ್ ಸ್ಕ್ವೇರ್ನಲ್ಲಿ ಉತ್ತರ ಕೊರಿಯಾ (North Korea) ನಾಯಕ ಕಿಮ್ ಜಾಂಗ್ ಉನ್ (Kim Jong Un) ಪುಟಿನ್ ಗೆ ಭವ್ಯ ಸ್ವಾಗತ ಕೋರಿದರು.
ನಂತರ ಕಿಮ್ ಮತ್ತು ಪುಟಿನ್ ಕುಮ್ಸುಸನ್ ಅರಮನೆಯಲ್ಲಿ ಶೃಂಗಸಭೆ ಮಾತುಕತೆ ನಡೆಸಿದರು. ಈ ವೇಳೆ ಇಬ್ಬರು ನಾಯಕರು ಉಭಯ ರಾಷ್ಟ್ರಗಳ ಕುರಿತು ಮತ್ತಷ್ಟು ಬಲಪಡಿಸುವ ಪ್ರತಿಜ್ಞೆ ಮಾಡಿದರು.
ಉಕ್ರೇನ್ ಮೇಲಿನ ಯುದ್ಧದ ಸಂದರ್ಭದಲ್ಲಿ ರಷ್ಯಾದ ನಿಲುವಿಗೆ ಸ್ಥಿರ ಮತ್ತು ಅಚಲ ಬೆಂಬಲವನ್ನು ನಾವು ಪ್ರಶಂಸಿಸುತ್ತೇವೆ ಎಂದು ಕಿಮ್ ಹೇಳಿದ್ದಾರೆ.
ಪ್ಯೊಂಗ್ಯಾಂಗ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪುಟಿನ್ ಅವರನ್ನು ಕಿಮ್ ಅಪ್ಪಿಕೊಂಡು ಸ್ವಾಗತಿಸಿದರು.