ಸಂಪುಟ ಗೊಂದಲ ವಿಚಾರ : ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ
ಬೆಂಗಳೂರು : ಖಾತೆ ಹಂಚಿಕೆ ಬೆನ್ನಲ್ಲೆ ಸಚಿವರು ಅಸಮಾಧಾನ ಹೊರಹಾಕಿದ್ದು, ಈ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಹೇಳ್ತಾಯಿರೋದು ನೋಡ್ತಾಯಿದ್ರೆ ಎಲ್ಲಾರು ಸಹ ಗೊಂದಲ ಮಾಡ್ತಾಯಿದ್ದಾರೆ ಅನ್ನೊ ಹಾಗಿದೆ. ಆನಂದ್ ಸಿಂಗ್ ಮತ್ತು ಎಂಟಿಬಿ ಬೇರೆ ಖಾತೆ ಬೇಕು ಅಂತಾ ಹೇಳ್ತಾಯಿದ್ದಾರೆ. ಇದ್ಯಾವುದು ಗೊಂದಲವಲ್ಲ, ಅವರ ಭಾವನೆಗಳನ್ನು ಹೇಳಿದ್ದಾರೆ. ಅವರಿಗೆ ಮುಖ್ಯಮಂತ್ರಿಗಳು ಸಮಾಧಾನ ಮಾಡ್ತಾರೆ. ಇದರಲ್ಲಿ ಬಹಳ ವಿಷೇಶವಿಲ್ಲ, ಗೊಂದಲ ಸಹ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮೇಕೆದಾಟು ವಿಚಾರವಾಗಿ ಮಾತನಾಡಿ, ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನವರು ಅವರ ರಾಜಕಾರಣ ಅವರು ಮಾಡ್ತಾಯಿದ್ದಾರೆ. ಸುಪ್ರೀಂ ಕೋರ್ಟ್ ನಿರ್ಧಾರದ ಹಾಗೆ ನಾವು ಮೇಕೆ ದಾಟುವನ್ನು ಮಾಡೇ ಮಾಡ್ತೀವಿ. ಉಪವಾಸನಾದ್ರು ಮಾಡಲಿ, ಅದು ನಮಗೆ ಸಂಭದವಿಲ್ಲ. ಅವರ ರಾಜ್ಯಕ್ಕೆ ಏನು ಬೇಕೋ ಹಾಗೆ ಪೊಲಿಟಿಕಲ್ ಆಗಿ ಯೋಚನೆ ಮಾಡ್ತಾಯಿರೋದು ತಪ್ಪಲ್ಲ. ಅವರು ಅಲ್ಲಿ ಹೋರಾಟವನ್ನು ಮಾಡಿ ಪಾರ್ಟಿ ಕಟ್ಟಿಕೊಳ್ಳಲಿ. ಆದ್ರೆ ಸುಪ್ರೀಂ ಕೋರ್ಟ್ ಬಗ್ಗೆಯು ಸಹ ಅವರು ಗಮನ ಇಟ್ಟಿಕೊಳ್ಳಬೇಕು. ಮೇಕೆ ದಾಟು ಯೋಜನೆ ಯಾವುದೇ ಕಾರಣಕ್ಕು ಸಹ ನಿಲ್ಲೋದಿಲ್ಲ ಎಂದರು.
ಇದೇ ವೇಳೆ ಬೊಮ್ಮಾಯಿ – ದೇವೇಗೌಡರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಹಾಸನದಂತಹ ಜಿಲ್ಲೆಯಲ್ಲಿ ದೇವೇಗೌಡ, ರೇವಣ್ಣ, ಕುಮಾರಸ್ವಾಮಿ ಯಂತಹ ನಾಯಕರ ನಡುವೆ ಪ್ರೀತಮ್ ಗೌಡ ಗೆದ್ದು ಬಂದಿದ್ದಾರೆ. ಬೊಮ್ಮಾಯಿಯವರು ಸಹ ದೇವೇಗೌಡರನ್ನು ಕಾಣಲಿಕ್ಕೆ ಹೋಗಿದ್ದಾರೆ. ಆದ್ರೆ ಅವರು ಜನತಾದಳ ನಾಯಕ ದೇವೇರಗೌಡರು ಅಂತ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು.









